ಗಂಗಾವತಿ: ಸೀಲ್‌ಡೌನ್‌ ಮಾಡಿದ್ರೂ ಕ್ಯಾರೇ ಎನ್ನದ ಜನ..!

By Kannadaprabha News  |  First Published Jun 13, 2020, 7:42 AM IST

ಸೀಲ್‌ಡೌನ್‌ ಪ್ರದೇಶದ ವಿವಿಧ ಅಂಗಡಿಗಳಲ್ಲಿ ಎಂದಿ​ನಂತೆ ವ್ಯವಹಾರ| ನಗರದ ಉಪ್ಪಾರ ಓಣಿಯಲ್ಲಿ ಬಟ್ಟೆ ವ್ಯಾಪಾರಿ ಮತ್ತು ಜಾಮೀಯ ಮಸೀದಿ ಬಳಿ ಮೌಲ್ವಿಯೊಬ್ಬರಿಗೆ ಕೊರೋನಾ ದೃಢ| ಸೋಂಕಿತರು ವಾಸಿಸುವ ಪ್ರದೇಶಗಳ ಸುತ್ತ ಸೀಲ್‌ಡೌನ್‌| ಜನರು ಸಂಚಾರ ಮಾಡಬಾರದೆಂದು ಬ್ಯಾರಿಕೇಡ್‌ ಹಾಕ​ಲಾ​ಗಿದೆ. ಅದನ್ನು ಲೆಕ್ಕಿ​ಸದೆ ಜನ ಸಂಚಾರ| 


ರಾಮಮೂರ್ತಿ ನವಲಿ

ಗಂಗಾವತಿ(ಜೂ.13): ನಗರದಲ್ಲಿ ಕಳೆದ ಎರಡು ದಿನಗಳ ಹಿಂದೆ ಕೋವೀಡ್‌ ಎರಡು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತ​ರ ಪ್ರದೇಶ ಸೀಲ್‌ಡೌನ್‌ ಮಾಡಿದ್ದರೂ ಜನ ಮಾತ್ರ ನಿರ್ಭಯವಾಗಿ ಸಂಚರಿಸುತ್ತಿದ್ದಾರೆ. ದೇಶದಲ್ಲಿ ಹೆಮ್ಮಾರಿಯಾಗಿರುವ ಕೊರೋನಾ ವೈರಸ್‌ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಇಲ್ಲಿಯ ಜನರು ಮಾತ್ರ ಭಯ ಭೀತಿಯಿಲ್ಲದೆ ತಿರುಗಾಡುತ್ತಿರುವುದು ಸಾಮಾನ್ಯವಾಗಿದೆ.

Tap to resize

Latest Videos

ನಗರದ 21ನೇ ವಾರ್ಡಿನ ಉಪ್ಪಾರ ಓಣಿಯಲ್ಲಿ ಬಟ್ಟೆವ್ಯಾಪಾರಿ ಮತ್ತು ಜಾಮೀಯ ಮಸೀದಿ ಬಳಿ ಮೌಲ್ವಿಯೊಬ್ಬರಿಗೆ ಕೊರೋನಾ ಸೋಂಕು ಕಂಡುಬಂದ ಹಿ​ನ್ನೆಲೆಯಲ್ಲಿ ಆ ಪ್ರದೇಶಗಳ ಸುತ್ತಮುನೆ ಸೀಲ್‌ಡೌನ್‌ ಮಾಡಲಾಗಿದೆ. ಜನರು ಸಂಚಾರ ಮಾಡಬಾರದೆಂದು ಬ್ಯಾರಿಕೇಡ್‌ ಹಾಕ​ಲಾ​ಗಿದೆ. ಅದನ್ನು ಲೆಕ್ಕಿ​ಸದೆ ಜನ ಸಂಚರಿ​ಸುತ್ತಿದ್ದಾರೆ. ಅಲ್ಲದೆ ವಾಹನಗಳ ಓಡಾಟ ಸಾಮಾನ್ಯವಾಗಿದೆ.

ಗಂಗಾವತಿ ವ್ಯಕ್ತಿಗೆ ಕೊರೋನಾ ಸೋಂಕು, ಬೆಚ್ಚಿ ಬಿದ್ದ ಜನತೆ

ಎಂದಿ​ನಂತೆ ವ್ಯವಹಾರ:

ಕೋವೀಡ್‌ ಸೊಂಕು ತಗುಲಿದ್ದ ವ್ಯಕ್ತಿಯ ಮನೆಯ ಸುತ್ತ ಸೀಲ್‌ಡೌನ್‌ ಮಾಡಿದ್ದರೂ ಆ ಪ್ರದೇಶದಲ್ಲಿರುವ ಅಂಗಡಿಗಳಲ್ಲಿ ಎಂದಿ​ನಂತೆ ವ್ಯವಹಾರ ನಡೆದಿದೆ. ನಗರದ ಮಹಾತ್ಮಾ ಗಾಂಧಿ ವೃತ್ತ ಜನ ಜಂಗುಳಿಯಿಂದ ಕೂಡಿ​ರುವ ಸ್ಥಳವಾಗಿದ್ದು, ಈ ಪ್ರದೇಶಕ್ಕೆ ಹೊಂದಿಕೊಂಡೇ ಸೀಲ್‌ಡೌನ್‌ ಮಾಡಲಾಗಿದೆ. 100 ಮೀಟರ್‌ ಕಂಟೈನ್ಮೆಂಟ್‌ ಜೋನ್‌ ಮತ್ತು 200 ಮೀಟರ್‌ ಬಫರ್‌ ಜೋನ್‌ ಎಂದು ವಿಂಗಡಿಸಿ ಸೀಲ್‌ಡೌನ್‌ ಮಾಡಿದರೂ ಕಿರಾಣಿ ಅಂಗಡಿ ಮತ್ತು ಚಿನ್ನದ ವ್ಯಾಪಾರಿಗಳು ಸೇರಿದಂತೆ ಸಣ್ಣಪುಟ್ಟಅಂಗಡಿ ಮುಗ್ಗಟ್ಟಗಳಲ್ಲಿ ವ್ಯವಹಾರ ಎಂದಿ​ನಂತೆ ನಡೆದಿದೆ.

ಬ್ಯಾರಿಕೇಡ್‌ ಜಿಗಿದು ಸಂಚಾರ:

ನಗರದ ಬಸವಣ್ಣ ವೃತ್ತ, ಗಾಂಧಿ ವೃತ್ತ, ಆಂಜನೇಯ ದೇವಸ್ಥಾನ, ಉಪ್ಪಾರ ಓಣಿ, ರಾಯರ ಓಣಿ ಪ್ರದೇಶದಲ್ಲಿ ಸೀಲ್‌ಡೌನ್‌ ಮಾಡಿ ಬ್ಯಾರಿಕೇಡ್‌ ಹಾಕಿದ್ದರೂ ಜನ ಅದನ್ನು ಜಿಗಿದು ಸಂಚರಿ​ಸುತ್ತಿದ್ದಾರೆ. ಕೆಲವರು ಸೈಕಲ್‌, ಬೈಕ್‌ಗಳನ್ನು ಬ್ಯಾರಿಕೇಡ್‌ನ ಒಳಗಡೆಯಿಂದ ನುಗ್ಗಿದ ಉದಾಹರಣೆಗಳಿವೆ. ಕೋವಿಡ್‌ ಸೋಂಕಿನ ಬಗ್ಗೆ ಪೊಲೀಸ್‌ ಇಲಾಖೆ, ನಗರಸಭೆ ಮತ್ತು ತಹಸೀಲ್ದಾರ್‌ ಕಚೇರಿ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದರೂ ಜನ ಭಯ-ಭೀತಿಯಿಲ್ಲದೆ ಸಂಚರಿ​ಸುರು​ವುದು ಸಾ​ಮಾನ್ಯವಾಗಿದೆ.

ಗಂಗಾವತಿ ನಗರದಲ್ಲಿ ಎರಡು ಕೋವಿಡ್‌ ಪ್ರಕರಣಗಳ ಕಂಡು​ಬಂದ ಹಿ​ನ್ನೆಲೆಯಲ್ಲಿ ಕೆಲ ಪ್ರದೇಶಗಳಲ್ಲಿ ಸೀಲ್‌ಡೌನ್‌ ಮಾಡಲಾಗಿದೆ. ಇಂತಹ ಪ್ರದೇಶದಲ್ಲಿ ಅಂಗಡಿಗಳನ್ನು ತೆರೆದು ವ್ಯವಹಾರ ಮಾಡಿದರೆ ಸೂಕ್ತ ಕ್ರಮಗೊಳ್ಳಲಾಗುತ್ತದೆ. ಅಲ್ಲದೇ, ಈಗಾಗಲೇ ಚಿನ್ನದ ವ್ಯಾಪಾರಿಗಳ ಮೇಲೆ ಕ್ರಮ ಕೈಗೊಳ್ಳಲು ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಲಾಗಿದೆ.

click me!