ಹುಬ್ಬಳ್ಳಿ ಬಳಿ ಭೀಕರ ಅಪಘಾತ: ಜವರಾಯನ ಅಟ್ಟಹಾಸಕ್ಕೆ 8 ಮಂದಿ ಬಲಿ

By Girish Goudar  |  First Published May 24, 2022, 8:51 AM IST

*  ಹುಬ್ಬಳ್ಳಿ ಹೊರವಲಯದ ತಾರಿಹಾಳ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆ
*  ಘಟನೆಯಲ್ಲಿ 26 ಜನರಿಗೆ ಗಾಯ
*  ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರ
 


ಹುಬ್ಬಳ್ಳಿ(ಮೇ.24): ಧಾರವಾಡ ಜಿಲ್ಲೆಯ ಬಾಡ ಗ್ರಾಮದ ಬಳಿಯಲ್ಲಿ ನಡೆದ ಅಪಘಾತ ಮರೆಯುವದರೊಳಗೆ ಹುಬ್ಬಳ್ಳಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ತಾರಿಹಾಳ‌  ಬಳಿ ನ್ಯಾಷನಲ್ ಟ್ರಾವೆಲ್ಸ್ ಗೆ ಸೇರಿದ ಖಾಸಗಿ ಬಸ್ ಹಾಗೂ ಲಾರಿಯ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ 8 ಜನ ದಾರುಣವಾಗಿ ಸಾವನ್ನಪ್ಪಿದ್ದು, 22 ಜನ ಗಾಯಗೊಂಡಿದ ಘಟನೆ ಮಂಗಳವಾರ ಮಧ್ಯರಾತ್ರಿ ಸಂಭವಿಸಿದೆ. ಅಪಘಾತಕ್ಕೆ ಬಸ್ ಚಾಲಕನ ನಿರ್ಲಕ್ಷ್ಯ ಹಾಗೂ ಅತೀವೇಗದ ಚಾಲನೆಯಿಂದ 8 ಜೀವಗಳನ್ನು ಬಲಿ ಪಡೆದಿದೆ‌. 

ಮಹಾರಾಷ್ಟ್ರದ ಕೊಲ್ಲಾಪುರದಿಂದ ಬೆಂಗಳೂರಿನತ್ತ ಹೊರಟಿದ್ದ ನ್ಯಾಷನಲ್ ಟ್ರಾವೆಲ್ಸ್ ಗೆ ಸೇರಿದ ಬಸ್ ಹಾಗೂ ಬೆಂಗಳೂರಿನಿಂದ ಪುಣೆ ಕಡೆ ಹೊರಟಿದ್ದ ಅಕ್ಕಿ ಮೂಟೆ ತುಂಬಿದ್ದ ಲಾರಿಯ ನಡುವೆ ಅಪಘಾತ ಸಂಭವಿಸಿದೆ. ಬಸ್ ಚಾಲಕ ಟ್ರ್ಯಾಕ್ಟರ್ ಓವರಟೇಕ್ ಮಾಡಲು ಹೋದಾಗ ಎದುರುಗಡೆಯಿಂದ ಬಂದ್ ಲಾಡಿ ಡಿಕ್ಕಿಯಾದ ಪರಿಣಾಮ ಅವಘಡ ಸಂಭವಿಸಿದೆ.

Tap to resize

Latest Videos

ಧಾರವಾಡಕ್ಕೆ ವಕ್ಕರಿಸಿದ ಶನಿಕಾಟ: ಕುಡುಕ ಚಾಲಕನ ಅವಾಂತರಕ್ಕೆ 8 ಮಂದಿ ಬಲಿ

ಅಪಘಾತ ಸಂಭವಿಸುತ್ತಿದ್ದ ಹಾಗೇ ಬೈಪಾಸ್ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಕಮೀಷನರ್ ಲಾಬುರಾಮ್ ನೇತೃತ್ವದ ಪೊಲೀಸರ ತಂಡ ಅಪಘಾತದಲ್ಲಿ ಗಾಯಗೊಂಡವನ್ನ ಮೊದಲು ಜನರನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯಮಾಡಿದ್ರು, ಬಳಿಕ ಮೃತದೇಹಗಳನ್ನು ಕಿಮ್ಸ್ ಶವಗಾರಕ್ಕೆ ಸಾಗಿಸಲಾಯಿತು, ಇನ್ನು ಅಪಘಾತ ರಭಸಕ್ಕೆ ಬಸ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ 6 ಜನ ಮೃತಪಟ್ಟರೆ, ಆಸ್ಪತ್ರೆಯಲ್ಲಿ ಇಬ್ಬರು ಕೊನೆಯುಸಿರು ಎಳೆದಿದ್ದಾರೆ, ಇನ್ನು ಅಪಘಾತವಾದ ವಾಹನಗಳನ್ನು ತೆರವುಗೊಳಿಸಿ ಬೆಳಗಿನ ಜಾವ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಇನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಳು ನರಳಾಟ ಮುಗಿಲು‌ ಮುಟ್ಟಿತ್ತು. 22 ಜನ ಗಾಯಳುಗಳ ಪೈಕಿ 10 ಕ್ಕೂ ಹೆಚ್ಚು ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಐದು ಜನರ ಸ್ಥಿತಿ ಚಿಂತಾಜನಕವಾಗಿದೆ, ಗಾಯಗೊಂಡವರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆಸ್ಪತ್ರೆಗೆ ಭೇಟಿ ನೀಡಿದ ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ, ಗಾಯಳುಗಳ ಯೋಗ ಕ್ಷೇಮ ವಿಚಾರಿಸಿ ಸೂಕ್ತ ಚಿಕಿತ್ಸೆಯ ಭರವಸೆ ನೀಡಿದ್ರು. 

ಮೃತರ ಪೈಕಿ ನಾಲ್ವರು ಕನ್ನಡಿಗರು

ಹೌದು, ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದ ಬಸ್-ಲಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಎಂಟು ಜನರ ಪೈಕಿ ನಾಲ್ವರು ಕನ್ನಡಿಗರಾಗಿದ್ದು, ಇನ್ನುಳಿದ ನಾಲ್ವರು ಮಹಾರಾಷ್ಟ್ರ ಮೂಲದವರು. ನ್ಯಾಷನಲ್ ಟ್ರಾವೆಲ್ಸ್‌ನ ಚಾಲಕರಾದ ಅತಾವುಲ್ಲಾ ಖಾನ್(40)  ಹಾಗೂ ನಾಗರಾಜ ಆಚಾರ್(56) ಬೆಂಗಳೂರಿನ ಬ್ಯಾಡರಹಳ್ಳಿ ನಿವಾಸಿಗಳು.  ಮೃತ ಮತ್ತೋರ್ವ ಪ್ರಯಾಣಿಕ ಮಹಮ್ಮದ್ ದಯಾನ್‌ಬೇಗ್(17) ಮೈಸೂರು ನಿವಾಸಿ. ಇಚಲಕರಂಜಿಯ ಬಾಬಾಸೋ ಚೌಗಲೇ(59) ಕೊಲ್ಹಾಪುರದ ಅಕ್ಷಯ ದವರ್(28) ಅಕೀಫ್(40) ಮಸ್ತಾನ್, ಅಫಾಕ್( 41) ಅಪಘಾತದಲ್ಲಿ ಪೃತಪಟ್ಟಿದ್ದಾರೆ.

ಸಣ್ಣಪುಟ್ಟ ಗಾಯಳಾದವರು ಮರಳಿ‌ ಊರಿಗೆ 

ಇನ್ನು ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿ ಸಣ್ಣಪುಟ್ಟ ಗಾಯಳಾಗಿದ್ದವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ತಮ್ಮ ಸಂಬಂಧಿಕರನ್ನ ನೆರವು ಪಡೆದು ತವರಿಗೆ ಮರಳಿದರು. ವಿಶೇಷ ಅಂಬ್ಯೂಲೆನ್ಸ್ ಹಾಗೂ ಖಾಸಗಿ ವಾನಹಗಳ‌ ಮೂಲಕ ಗಾಯಳುಗಳ‌ ತಮ್ಮ‌ತಮ್ಮ ಊರಿಗೆ ತೆರಳಿದ್ರು. ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕಿ ತನಿಖೆಯನ್ನು ನಡೆಸುತ್ತಿದ್ದಾರೆ.

ಮೃತದೇಹ ನೋಡಿ ಕಣ್ಣೀರಿಟ್ಟ ಲಿಂಗಪ್ಪ

ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಪ್ರತ್ಯಕ್ಷದರ್ಶಿ ಲಿಂಗಪ್ಪ ಅವರು,  ಐದು ಜನರನ್ನು ನನ್ನದೇ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದೆ‌‌. 16 ಜನರನ್ನು ಅಂಬ್ಯುಲೆನ್ಸ್ ಮೂಲಕ ಸಾಗಿಸಿದೆ. ಇದಾದ ಬಳಿಕ ಮೃತದೇಹಗಳನ್ನ ಹೊರತೆಗೆದೆವು. ನನ್ನ ಕೈಯಾರೆ ಮೃತದೇಹಗಳನ್ನ ಸಾಗಿಸಿದೆ ಅಂತ ಮೃತರನ್ನು‌ ನೆನೆದು ಲಿಂಗಪ್ಪ ಕಣ್ಣೀರಿಟ್ಟಿದ್ದಾರೆ.

ಮದುವೆ ದಿಬ್ಬಣದ ವಾಹನ ಹಾಗೂ ಕಾರಿನ ನಡುವೆ ಅಪಘಾತ, ಕಾಂಗ್ರೆಸ್ ನಾಯಕನ ಸಾವು!

ಇದು ಬೈಪಾರಸ್ತೆಯಲ್ಲ, ಸಾವಿನ ರಸ್ತೆಯಾಗಿದೆ. ಟೋಲ್‌ಗೆ ಹಣ ಕೊಟ್ಟು ಜನ ಸಾಯಲು ಬರಬೇಕಾಗಿದೆ ಎಂದು ಅಂತ ಲಿಂಗಪ್ಪ ನೊಂದು ಹೇಳಿದ್ದಾರೆ. ದಾವಣಗೆರೆ ಮೂಲದ 11 ಜನ ಪ್ರವಾಸಿಗರು ಇದೇ ರಸ್ತೆಯಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ಆಗಲೂ ನಾನೇ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೆ, ಆದಷ್ಟು ಬೇಗ ರಸ್ತೆ ಅಗಲೀಕರಣ ಮಾಡಿ ಅಂತ ಲಿಂಗಪ್ಪ ಬೇಡಿಕೊಂಡಿದ್ದರು.ಹೆದ್ದಾರಿಯಲ್ಲಿ ಅಪಘಾತ ನಡೆದ್ರೂ ಲಿಂಗಪ್ಪ ಅವರು ಮೊದಲು ಸಹಾಯಕ್ಕೆ ಧಾವಿಸಿ ಬರುತ್ತಾರೆ. ನಿನ್ನೆ ಕೂಡ ಮಧ್ಯರಾತ್ರಿ ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ಲಿಂಗಪ್ಪ ಧಾವಿಸಿದ ಬಂದಿದ್ದರು.  ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಭೀಕರ ಅಪಘಾತ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ: ಎಚ್‌ಡಿಕೆ

ಹುಬ್ಬಳ್ಳಿ ಹೊರವಲಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ಜನರು ಸಾವನ್ನಪ್ಪಿರುವುದು ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ ಅಂತ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. 

 

ಹುಬ್ಬಳ್ಳಿ ಹೊರ ವಲಯದಲ್ಲಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ 8 ಜನರು ಸಾವನ್ನಪ್ಪಿರುವುದು ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ಕಳೆದ ತಡರಾತ್ರಿ ಸಂಭವಿಸಿರುವ ಈ ದುರಂತದಲ್ಲಿ 26 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. 1/3

— H D Kumaraswamy (@hd_kumaraswamy)

ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಅವರು, ಕಳೆದ ತಡರಾತ್ರಿ ಸಂಭವಿಸಿರುವ ಈ ದುರಂತದಲ್ಲಿ 26 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ದುರಂತದಲ್ಲಿ ಅಸುನೀಗಿದ ನತದೃಷ್ಟರೆಲ್ಲರಿಗೂ ಚಿರಶಾಂತಿ ಸಿಗಲಿ ಹಾಗೂ ಆವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ, ಗಾಯಾಳುಗಳೆಲ್ಲ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಅಂತ ತಿಳಿಸಿದ್ದಾರೆ. 

ಅಪಘಾತ ಸಂಭವಿಸಿದ ಕೊಲ್ಹಾಪುರ-ಹುಬ್ಬಳ್ಳಿ ಹೆದ್ದಾರಿಯ ಈ ಜಾಗದಲ್ಲಿ ಪದೇ ಪದೆ ದುರಂತಗಳು ಸಂಭವಿಸುತ್ತಿವೆ, ಅದು 'ಸಾವಿನ ಹೆದ್ದಾರಿ' ಆಗಿದೆ ಎಂದು ಜನರು ಹೇಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಗಮನ ಹರಿಸಿ ಮತ್ತೆ ಅಪಘಾತಗಳು ಸಂಭವಿಸದಂತೆ ತಡೆಯಬೇಕು ಅಂತ ಆಗ್ರಹಿಸಿದ್ದಾರೆ. 

click me!