ನಿರಂತರ ಕೆಲಸದಿಂದ ಹಾಳಾದ ಸುಮ್ಮನಹಳ್ಳಿ ವಿದ್ಯುತ್‌ ಚಿತಾಗಾರ : 7 ದಿನ ಬಂದ್‌

By Kannadaprabha NewsFirst Published May 4, 2021, 7:19 AM IST
Highlights

ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಸುಮ್ಮನಹಳ್ಳಿ ವಿದ್ಯುತ್‌ ಚಿತಾಗಾರವನ್ನು ಮೇ 4ರಿಂದ 10ರ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಚಿಮಣಿಗಳು ಹಾಳಾದ ಹಿನ್ನೆಲೆ ಸ್ಥಗಿತವಾಗಿದೆ. 

ಬೆಂಗಳೂರು (ಮೇ.04): ತುರ್ತು ನಿರ್ವಹಣಾ ಕೆಲಸಗಳನ್ನು ಕೈಗೊಳ್ಳಬೇಕಾದ ಕಾರಣ ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯ ಸುಮ್ಮನಹಳ್ಳಿ ವಿದ್ಯುತ್‌ ಚಿತಾಗಾರವನ್ನು ಮೇ 4ರಿಂದ 10ರ ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.

ಕೋವಿಡ್‌ ಸೋಂಕಿತರ ಶವಗಳನ್ನು ಸುಮ್ಮನಹಳ್ಳಿ ವಿದ್ಯುತ್‌ ಚಿತಾಗಾರದಲ್ಲಿ ನಿರಂತರವಾಗಿ ದಹಿಸುವ ಕಾರ್ಯ ನೆರವೇರಿಸಲಾಗುತ್ತಿತ್ತು. ಆದರೆ, ಇದೀಗ ಚಿತಾಗಾರದ ಎರಡು ಚಿಮಿಣಿಗಳು(ಫರ್ನೇಸ್‌) ಹಾಳಾಗಿದ್ದು ಹೊಸ ಫರ್ನೇಸ್‌ಗಳನ್ನು ಅಳವಡಿಸಬೇಕಿದೆ.

ಬೆಂಗಳೂರಲ್ಲಿ ಪ್ರಾಣಿಗಳಿಗೆ ಚಿತಾಗಾರ..! .

ಆದ್ದರಿಂದ ಏಳು ದಿನ ತಾತ್ಕಾಲಿಕವಾಗಿ ಚಿತಾಗಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ರಾಜರಾಜೇಶ್ವರಿ ನಗರ ವಲಯ ಕಾರ್ಯಪಾಲಕ ಅಭಿಯಂತರರು (ವಿದ್ಯುತ್‌) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಮ್ಮನಹಳ್ಳಿ ವಿದ್ಯುತ್‌ ಚಿತಾಗಾರದಲ್ಲಿ ಪ್ರತಿದಿನ ಬೆಳಗ್ಗೆ 7ರಿಂದ ರಾತ್ರಿ 12ರವರೆಗೆ 25ರಿಂದ 30 ಕೋವಿಡ್‌ ಶವಗಳ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತಿತ್ತು.

click me!