'ಇನ್ಮುಂದೆ ಕೊರತೆಯಾಗಲ್ಲ.. ಬಳ್ಳಾರಿಯಿಂದ ನೇರವಾಗಿ ಆಕ್ಸಿಜನ್ ಬರಲಿದೆ'

By Suvarna NewsFirst Published May 3, 2021, 11:06 PM IST
Highlights

ಬಳ್ಳಾರಿಯಿಂದ ನೇರವಾಗಿ ಚಾಮರಾಜನಗರ ಮತ್ತು ಕೊಡಗಿಗೆ ನಿತ್ಯ 7000 ಲೀ. ಆ್ಯಕ್ಸಿಜನ್/ ಆರೋಗ್ಯ ಸಚಿವ ಸುಧಾಕರ್ ಮಾಹಿತಿ/ ಚಾಮರಾಜನಗರ ದುರಂತ/ ಆಕ್ಸಿಜನ್ ಕೊರತೆ ಆಗುವುದಿಲ್ಲ

ಚಾಮರಾಜನಗರ((ಮೇ 03 ) ಬಳ್ಳಾರಿಯಿಂದ ನೇರವಾಗಿ ಚಾಮರಾಜನಗರ ಮತ್ತು ಕೊಡಗಿಗೆ ಪ್ರತಿನಿತ್ಯ 7 ಸಾವಿರ ಲೀ. ಲಿಕ್ವಿಡ್ ಆ್ಯಕ್ಸಿಜನ್ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಡಗು, ಮಂಡ್ಯ ಹಾಗೂ ಆ್ಯಕ್ಸಿಜನ್ ನೊಡಲ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮೈಸೂರಿನಿಂದ ರೀಫಿಲ್ಲ್ ಮಾಡಿ ಪೂರೈಸುವ ಬದಲು ಬಳ್ಳಾರಿಯಿಂದಲೇ ನೇರವಾಗಿ ಕೊಡಗು ಹಾಗೂ ಚಾಮರಾಜನಗರಕ್ಕೆ ಪೂರೈಕೆಯಾಗಲಿದ್ದು ನೋಡಲ್ ಅಧಿಕಾರಿ ಮೇಲ್ವಿಚಾರಣೆ ಹೊರುತ್ತಾರೆ ಎಂದು ತಿಳಿಸಿದರು.

ಕೊರೋನಾದಿಂದ ಮೃತಪಟ್ಟವರ ನೆರವಿಗೆ  ನಿಂತ ಸರ್ಕಾರ

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿರುವ ಆ್ಯಕ್ಸಿಜನ್ ಪ್ಲಾಂಟ್ ನಲ್ಲಿ 6 ಸಾವಿರ ಲೀ‌. ಸಂಗ್ರಹಿಸುವ ಸಾಮಾರ್ಥ್ಯವಿದ್ದು 7 ಸಾವಿರ ಲೀ. ಪೂರೈಕೆಯಾಗಲಿದೆ, ಇನ್ಮುಂದೆ ಕೊರತೆಯಾಗುವುದಿಲ್ಲ, ಮೈಸೂರಿನಲ್ಲೂ ಆಮ್ಲಜನಕದ ಹೆಚ್ಚಿನ ಅಗತ್ಯ ಇರುವುದರಿಂದ ಈ ಕ್ರಮ ಎಂದು ತಿಳಿಸಿದರು. ಚಾಮರಾಜನಗರ ಭೇಟಿ ಬಳಿಕ ಮೈಸೂರು ಹಾಗೂ ಮಂಡ್ಯದ ಆರೋಗ್ಯ ಇಲಾಖೆ ಸಿಬ್ಬಂದಿಗಳ ಸಭೆ ನಡೆಸಲು ತೆರಳಿದರು.

click me!