ತುಮಕೂರು : 10 ಸಾವಿರ ಗಡಿಯತ್ತ ಕೊರೋನಾ ಸೋಂಕಿತರು

Kannadaprabha News   | Asianet News
Published : Sep 06, 2020, 08:43 AM IST
ತುಮಕೂರು : 10 ಸಾವಿರ ಗಡಿಯತ್ತ ಕೊರೋನಾ ಸೋಂಕಿತರು

ಸಾರಾಂಶ

ತುಮಕೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ಸಮೀಪಿಸಿದೆ. ದಿನದಿನಕ್ಕೂ ಪ್ರಕರಣಗಳ ಸಮಖ್ಯೆ ಹೆಚ್ಚಾಗುತ್ತಲೇ ಇದೆ. 

ತುಮಕೂರು (ಸೆ.06):  ಜಿಲ್ಲೆಯಲ್ಲಿ ಶನಿವಾರ 259 ಮಂದಿಗೆ ಕೋವಿಡ್‌ ಸೋಂಕು ತಗುಲಿದ್ದು ಒಟ್ಟು ಸೋಂಕಿತರ ಸಂಖ್ಯೆ 7144 ಕ್ಕೆ ಏರಿದೆ. 

ತುಮಕೂರಿನಲ್ಲಿ 105, ಗುಬ್ಬಿ 26, ಕುಣಿಗಲ್‌ 24, ಮಧುಗಿರಿ 24, ಪಾವಗಡ 26, ಶಿರಾ 28, ತಿಪಟೂರು 28, ಚಿಕ್ಕನಾಯಕನಹಳ್ಳಿ 6, ಕೊರಟಗೆರೆ 3, ತುರುವೇಕೆರೆ 9 ಸೇರಿ ಒಟ್ಟು 259 ಮಂದಿಗೆ ಸೋಂಕು ತಗುಲಿದೆ.

 ಶನಿವಾರ 225 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಈವರೆಗೆ ಜಿಲ್ಲೆಯಲ್ಲಿ 5169 ಮಂದಿ ಗುಣಮುಖರಾಗಿದ್ದಾರೆ. 

40 ಲಕ್ಷ ದಾಟಿದ ಕೊರೋನಾ, ಸೆಪ್ಟೆಂಬರ್ ಅಂತ್ಯಕ್ಕೆ ದೇಶದ ಕತೆ ಏನಾಗಬಹುದು? ...

ಜಿಲ್ಲೆಯಲ್ಲಿ ಶನಿವಾರ ನಾಲ್ಕು ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನಾಗೆ ಮೃತಪಟ್ಟವರ ಸಂಖ್ಯೆ 196 ಕ್ಕೆ ಏರಿದೆ.

ದೇಶದಲ್ಲಿ ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ 50 ಲಕ್ಷದ ಗಡಿ ಸಮೀಪಿಸಿದೆ. ಸಾವಿನ ಸಂಖ್ಯೆಯೂ ಲಕ್ಷದ ಗಡಿ ಸಮೀಪಿಸಿದೆ. ರಾಜ್ಯದಲ್ಲಿಯೂ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. 

PREV
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?