ಉಡುಪಿ: ಎರಡು ದಿನ ಮಳೆಗೆ 66 ಲಕ್ಷ ರು. ಹಾನಿ

By Kannadaprabha NewsFirst Published Aug 8, 2019, 3:11 PM IST
Highlights

ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಉಡುಪಿ ಜಿಲ್ಲೆಯಾದ್ಯಂತ ಎರಡು ದಿನ ಸುರಿದ ಮಳೆಗೆ 66 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಜಿಲ್ಲೆಯ 6 ತಾಲೂಕುಗಳಲ್ಲಿ 152ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, 49 ಲಕ್ಷ ರು.ಗಳಿಗೂ ಅಧಿಕ ಹಾನಿಯಾಗಿದೆ. 10ಕ್ಕೂ ಹೆಚ್ಚು ಕೃಷಿಕರ ತೆಂಗು, ಕಂಗು ಮತ್ತು ಬಾಳೆ ತೋಟಗಳಿಗೆ ಹಾನಿಯಾಗಿದ್ದು, 1 ಲಕ್ಷ ರು.ಗಳಷ್ಟುಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಉಡುಪಿ(ಆ.08): ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮುಸಲಧಾರಾ ಮಳೆಗೆ ಸುಮಾರು 66 ಲಕ್ಷ ರು.ಗೂ ಅಧಿಕ ನಷ್ಟಉಂಟಾಗಿದೆ.

ಜಿಲ್ಲೆಯ 6 ತಾಲೂಕುಗಳಲ್ಲಿ 152ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, 49 ಲಕ್ಷ ರು.ಗಳಿಗೂ ಅಧಿಕ ಹಾನಿಯಾಗಿದೆ. ಅವುಗಳಲ್ಲಿ ಸುಮಾರು 6 ಮನೆಗಳು ಸಂಪೂರ್ಣ ಕುಸಿದಿದ್ದು, ಅವುಗಳಲ್ಲಿ ವಾಸಿಸುತ್ತಿದ್ದವರು ಅತಂತ್ರರಾಗಿದ್ದಾರೆ.

ಸುಮಾರು 10ಕ್ಕೂ ಹೆಚ್ಚು ಕೃಷಿಕರ ತೆಂಗು, ಕಂಗು ಮತ್ತು ಬಾಳೆ ತೋಟಗಳಿಗೆ ಹಾನಿಯಾಗಿದ್ದು, 1 ಲಕ್ಷ ರು.ಗಳಷ್ಟುಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಮೆಸ್ಕಾಂನ ನೂರಾರು ಕಂಬಗಳು ಉರುಳಿ, ವಿದ್ಯುತ್‌ ಇಲಾಖೆಗೆ 17 ಲಕ್ಷ ರು. ಗಳಿಗೂ ಅಧಿಕ ನಷ್ಟವಾಗಿದೆ.

ಸುವರ್ಣ ನ್ಯೂಸ್‌ ಪ್ರವಾಹ ಪರಿಹಾರ ಅಭಿಯಾನಕ್ಕೆ ದಾರಿ

ಈ ಪ್ರಾಕೃತಿಕ ವಿಕೋಪಗಳಿಂದ ನಷ್ಟಕ್ಕೊಳಗಾದವರಿಗೆ ತುರ್ತು ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಅವರು ಆಯಾ ತಹಸೀಲ್ದಾರ್‌ ಅವರಿಗೆ ಸೂಚಿಸಿದ್ದು, 7 ತಹಸೀಲ್ದಾರ್‌ ಗಳಿಗೆ ತಲಾ 10 ಲಕ್ಷ ರು.ಗಳಂತೆ 70 ಲಕ್ಷ ರು.ಗಳನ್ನು ಬಿಡುಗಡೆ ಮಾಡಿದ್ದಾರೆ.

ಮೆಸ್ಕಾಂಗೆ ಭಾರೀ ನಷ್ಟ:

ಜಿಲ್ಲೆಯಲ್ಲಿ ಕಳೆದೆರಡು ದಿನಗಳಲ್ಲಿ ಮೆಸ್ಕಾಂನ 273ಕ್ಕೂ ಹೆಚ್ಚು ಕಂಬಗಳು ಉರುಳಿದ್ದು, 100ಕ್ಕೂ ಹೆಚ್ಚು ಕಂಬಗಳು ವಾಲಿವೆ. ಅಲ್ಲದೇ ಸಾಕಷ್ಟುಕಡೆಗಳಲ್ಲಿ ಮರಗಳು ಬಿದ್ದು ವಿದ್ಯುತ್‌ ತಂತಿಗಳು ಕಡಿದು ಬಿದ್ದುದ್ದು, ಒಟ್ಟು 5.65 ಕಿ.ಮಿ.ನಷ್ಟುಉದ್ದದ ತಂತಿ ಹಾನಿಗೀಡಾಗಿದೆ. 4 ಟ್ರಾನ್ಸ್‌ರ್ಫಾರ್‌ ಗಳೂ ಕೆಟ್ಟಿವೆ. ಇದರಿಂದ ಇಲಾಖೆಗೆ 17.93 ಲಕ್ಷ ರು.ಗಳಿಗೂ ಅಧಿಕ ಹಾನಿಯಾಗಿದೆ.

1000ಕ್ಕೂ ಹೆಚ್ಚು ಸಿಬ್ಬಂದಿ:

ಆದರೂ ಮೆಸ್ಕಾಂ ತನ್ನ 1000ಕ್ಕೂಅಧಿಕ ಸಿಬ್ಬಂದಿಗಳನ್ನು ವಿದ್ಯುತ್‌ ಸಂಪರ್ಕ ಮರು ಜೋಡಿಸುವುದಕ್ಕೆ ತೊಡಗಿಸಿಕೊಂಡಿದೆ. ಅವರು ರಾತ್ರಿ ಹಗಲು ಎನ್ನದೇ ಕೆಲಸ ಮಾಡುತ್ತಿದ್ದಾರೆ. ರಜೆಯಲ್ಲಿದ್ದವರನ್ನೂ ಕರ್ತವ್ಯಕ್ಕೆ ಕರೆಸಲಾಗಿದೆ. ಕಾರ್ಕಳದಲ್ಲಿ ತುರ್ತಾಗಿ ಬಿದ್ದ ಕಂಬಗಳನ್ನು ತಾತ್ಕಾಲಿಕವಾಗಿ ಎತ್ತಿ ನಿಲ್ಲಿಸಲಾಗಿತ್ತು. ಆದರೆ ಬುಧವಾರ ಮತ್ತೆ ಮಳೆ ಬಂದು ಅವು ಬಿದ್ದಿದ್ದು, ಮೆಸ್ಕಾಂ ಸಿಬ್ಬಂದಿಗಳಿಗೆ ದುಪ್ಪಟ್ಟು ಕೆಲಸ ಮಾಡಬೇಕಾಗುತ್ತಿದೆ.

ಆದರೂ ಜನರು ಬೈಯ್ಯುತ್ತಾರೆ ಮಾರಾಯ್ರೆ:

ತಾವು ಮಳೆಗಾಳಿ ಗಮನಿಸದೇ ಮಳೆಯಲ್ಲಿ ನೆನೆಯುತ್ತಾ ಅಪಾಯಕಾರಿ ಕೆಲಸವನ್ನು ಜನರಿಗೆ ವಿದ್ಯುತ್‌ ಸಂಪರ್ಕ ನೀಡುವುದಕ್ಕಾಗಿ ಮಾಡುತ್ತಿದ್ದೇವೆ. ಮನೆಗೂ ಹೋಗಿಲ್ಲ, ಸರಿಯಾಗಿ ಊಟ ತಿಂಡಿಯನ್ನೂ ಮಾಡಿಲ್ಲ, ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಕಂಬಗಳನ್ನು ಒಂದೇ ದಿನದಲ್ಲಿ ನಿಲ್ಲಿಸಿದ್ದೇವೆ, ಇಷ್ಟೆಲ್ಲಾ ಮಾಡಿದರೂ ಜನರು ಬೈಯ್ಯುತ್ತಾರೆ ಎಂದು ಹೆಸರು ಹೇಳಲಿಚ್ಚಿಸದ ಮೆಸ್ಕಾಂ ಸಿಬ್ಬಂದಿಯೊಬ್ಬರು ನೊಂದು ನುಡಿದರು.

ಕರ್ನಾಟಕದಲ್ಲಿ ಭಾರೀ ಮಳೆ : ನಿಮ್ ನಿಮ್ಮ ಜಿಲ್ಲೆ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ

152 ಮನೆಗಳಿಗೆ 49 ಲಕ್ಷ ರು. ನಷ್ಟ:

ಬೈಂದೂರು ತಾಲೂಕಿನಲ್ಲಿ 15 ಮನೆಗಳಿಗೆ 2.80 ಲಕ್ಷ ರು., ಕುಂದಾಪುರ ತಾಲೂಕಿನಲ್ಲಿ 43 ಮನೆಗಳಿಗೆ 5 ಲಕ್ಷ ರು., ಬ್ರಹ್ಮಾವರ ತಾಲೂಕಿನಲ್ಲಿ 17 ಮನೆಗಳಿಗೆ 5 ಲಕ್ಷ ರು., ಉಡುಪಿ ತಾಲೂಕಿನಲ್ಲಿ 46 ಮನೆಗಳಿಗೆ 21 ಲಕ್ಷ ರು., ಕಾಪು ತಾಲೂಕಿನಲ್ಲಿ 18 ಮನೆಗಳಿಗೆ 8 ಲಕ್ಷ ರು. ಮತ್ತು ಕಾರ್ಕಳ ತಾಲೂಕಿನಲ್ಲಿ 50 ಮನೆಗಳಿಗೆ 5 ಲಕ್ಷ ರು.ಗಳಷ್ಟುಹಾನಿಯಾಗಿದೆ.

click me!