Covid Crisis: ಬೆಂಗ್ಳೂರಲ್ಲಿ ಕುಸಿದ ಕೊರೋನಾ ಸೋಂಕು ಕೇಸ್‌

By Kannadaprabha NewsFirst Published Feb 2, 2022, 4:58 AM IST
Highlights

*  6 ಸಾವಿರಕ್ಕೆ ತಗ್ಗಿದ್ದ ಕೇಸ್‌
*  ಪಾಸಿಟಿವಿಟಿ ದರವೂ ಇಳಿಕೆ
* 1934 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
 

ಬೆಂಗಳೂರು(ಫೆ.02): ರಾಜಧಾನಿಯಲ್ಲಿ ಕೊರೋನಾ(Coronavirus) ಸೋಂಕಿನ ಹೊಸ ಪ್ರಕರಣಗಳು ಆರು ಸಾವಿರ ಆಸುಪಾಸಿಗೆ ಕುಸಿದಿದ್ದು, ಸೋಂಕಿತರ ಸಾವು ಮತ್ತು ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ(Positivity Rate) ಇನ್ನಷ್ಟು ಇಳಿಕೆಯಾಗಿವೆ. ಮಂಗಳವಾರ 6,685 ಮಂದಿ ಸೋಂಕಿತರಾಗಿದ್ದು, 9 ಸೋಂಕಿತರು ಸಾವಿಗೀಡಾಗಿದ್ದಾರೆ(Death). 35,589 ಮಂದಿ ಗುಣಮುಖರಾಗಿದ್ದಾರೆ. ಸದ್ಯ 1.05 ಲಕ್ಷ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 80 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ.8ರಷ್ಟು ದಾಖಲಾಗಿದೆ.

ಸೋಂಕು ಹೊಸ ಪ್ರಕರಣಗಳು ಒಂದೇ ದಿನಕ್ಕೆ ಶೇ.38ರಷ್ಟು ತಗ್ಗಿವೆ. ಜನವರಿ 7ರಂದು 6,812 ಪ್ರಕರಣಗಳು ವರದಿಯಾಗಿದ್ದವು. ಆ ಬಳಿಕ ಏರಿಕೆಯಾಗುತ್ತಾ ಸಾಗಿ 30 ಸಾವಿರ ಗಡಿ ದಾಟಿತ್ತು. ಈಗ ಆರು ಸಾವಿರ ಆಸುಪಾಸಿಗೆ ಇಳಿಕೆಯಾಗಿವೆ. ಪಾಸಿಟಿವಿಟಿ ದರವು ಜನವರಿ ಎರಡನೇ ವಾರ ಶೇ.25ಕ್ಕೆ ಹೆಚ್ಚಳವಾಗಿತ್ತು. ಈಗ ಶೇ.9ರಷ್ಟುತಗ್ಗಿದೆ. ಸದ್ಯ ಸೋಂಕು ಪರೀಕ್ಷೆಗೊಳಗಾಗುತ್ತಿರುವ 100 ಮಂದಿಯಲ್ಲಿ 9 ಮಂದಿಗೆ ಮಾತ್ರ ಸೋಂಕು ದೃಢಪಡುತ್ತಿದೆ.
ನಗರದಲ್ಲಿ ಈವರೆಗೆ ಸೋಂಕಿತರಾದವರ ಸಂಖ್ಯೆ 17.27 ಲಕ್ಷಕ್ಕೆ, ಗುಣಮುಖರ ಸಂಖ್ಯೆ 16.05 ಲಕ್ಷಕ್ಕೆ, ಸೋಂಕಿತರ ಸಾವಿನ ಸಂಖ್ಯೆ 16,603ಕ್ಕೆ ಏರಿಕೆಯಾಗಿದೆ. ಸದ್ಯ 173 ಸಕ್ರಿಯ ಕಂಟೈನ್ಮೆಂಟ್‌ ವಲಯ (ಐದಕ್ಕೂ ಹೆಚ್ಚು ಪ್ರಕರಣವಿರುವ ಪ್ರದೇಶ) ಗುರುತಿಸಲಾಗಿದೆ.

Latest Videos

Covid 3rd Wave: ಕೊರೋನಾ ಕ್ರಮೇಣ ಇಳಿಕೆ, ಮತ್ತೆ ಹೆಚ್ಚಾಗಲ್ಲ: ಸುಧಾಕರ್‌

1934 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಒಂದು ಲಕ್ಷಕ್ಕೂ ಅಧಿಕ ಸಕ್ರಿಯ ಸೋಂಕಿತರ ಪೈಕಿ 1934 ಸೋಂಕಿತರು ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 1331 ಮಂದಿ ಸಾಮಾನ್ಯ ಹಾಸಿಗೆ, 218 ಕೃತಕ ಆಕ್ಸಿಜನ್‌ ಹಾಸಿಗೆ(Oxygen Bed), 300 ಐಸಿಯು(ICU), 85 ವೆಂಟಿಲೇಟರ್‌ನಲ್ಲಿ ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ. ಉಳಿದಂತೆ 1.03 ಲಕ್ಷ ಸೋಂಕಿತರು ಮನೆ ಆರೈಕೆಯಲ್ಲಿದ್ದಾರೆ. ಕರ್ನಾಟಕದಲ್ಲಿ(Karnataka) ಕೊರೋನಾತಂಕ ತಗ್ಗಿದ್ದು, ಒಂದೇ ದಿನದಲ್ಲಿ 10 ಸಾವಿರ ಪ್ರಕರಣಗಳು ಕಡಿಮೆ ಆಗಿವೆ.

ಹೌದು..(ಜ.31) ರಾಜ್ಯದಲ್ಲಿ 24,172 ಕೊರೋನಾ ಪಾಸಿಟಿವ್(Coronavirus) ಕೇಸ್ ಪತ್ತೆಯಾಗಿದ್ದು, ನಿನ್ನೆ(ಫೆ.01) ಬರೀ 14,366 ಪ್ರಕರಣಗಳಷ್ಟೇ ಪತ್ತೆಯಾಗಿವೆ. 60,914 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ. ಶೇ. 17.11ರಷ್ಟಿದ್ದ ಪಾಸಿಟಿವಿಟಿ ದರ ಇವತ್ತು ಶೇ. 13.44ಕ್ಕೆ ಇಳಿದಿದೆ.

ಅಲ್ಲದೆ ರಾಜ್ಯದಲ್ಲಿನ ಕೊರೊನಾ ಸಕ್ರಿಯ ಪ್ರಕರಣಗಳಲ್ಲೂ ವ್ಯಾಪಕ ಇಳಿಕೆ ಕಂಡುಬಂದಿದೆ. ಜ.31ರಂದು ರಾಜ್ಯದಲ್ಲಿ 2,44,331 ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು ಎರಡು ಲಕ್ಷಕ್ಕಿಂತಲೂ ಕಡಿಮೆ ಎಂದರೆ 1,97,725ಕ್ಕೆ ಇಳಿದಿದೆ.
ಸೋಂಕಿತರ ಪೈಕಿ 35,87,022 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ಈವರೆಗೆ ಕೊರೋನಾದಿಂದ 39,056 ಜನ ಸಾವನ್ನಪ್ಪಿದ್ದಾರೆ. 

Covid Crisis: ಬೆಂಗ್ಳೂರಲ್ಲಿ 21 ದಿನದ ಬಳಿಕ 10 ಸಾವಿರಕ್ಕೆ ತಗ್ಗಿದ ಸೋಂಕು

ಬೆಂಗಳೂರಿನಲ್ಲಿ(Bengaluru) ಇಂದು ಒಂದೇ ದಿನ 6,685 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರ)ನಾ ಪೀಡಿತರ ಸಂಖ್ಯೆ 17,27,575 ಕ್ಕೆ ಏರಿಕೆಯಾಗಿದೆ. 17,27,575 ಸೋಂಕಿತರ ಪೈಕಿ 16,05,847 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 9 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ನಗರದಲ್ಲಿ ಕೊರೋನಾದಿಂದ ಈವರೆಗೆ 16,602 ಜನ ಬಲಿಯಾಗಿದ್ದಾರೆ. ಬೆಂಗಳೂರಲ್ಲಿ 1,05,125 ಕೊರೋನಾ ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಕೊರೋನಾ ಕೇಸ್‌

ಬಾಗಲಕೋಟೆ 165, ಬಳ್ಳಾರಿ 437, ಬೆಳಗಾವಿ 1081, ಬೆಂಗಳೂರು ಗ್ರಾಮಾಂತರ 117, ಬೆಂಗಳೂರು ನಗರ 6685, ಬೀದರ್ 115, ಚಾಮರಾಜನಗರ 87, ಚಿಕ್ಕಬಳ್ಳಾಪುರ 126, ಚಿಕ್ಕಮಗಳೂರು 154, ಚಿತ್ರದುರ್ಗ 252, ದಕ್ಷಿಣ ಕನ್ನಡ 322, ದಾವಣಗೆರೆ 126, ಧಾರವಾಡ 633, ಗದಗ 73, ಹಾಸನ 337, ಹಾವೇರಿ 130, ಕಲಬುರಗಿ 135, ಕೊಡಗು 205, ಕೋಲಾರ 169, ಕೊಪ್ಪಳ 99, ಮಂಡ್ಯ 211, ಮೈಸೂರು 777, ರಾಯಚೂರು 38, ರಾಮನಗರ 58, ಶಿವಮೊಗ್ಗ 325, ತುಮಕೂರು 573, ಉಡುಪಿ 230, ಉತ್ತರ ಕನ್ನಡ 551, ವಿಜಯಪುರ 81, ಯಾದಗಿರಿ ಜಿಲ್ಲೆಯಲ್ಲಿ 74 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.
 

click me!