Covid Crisis: ಬೆಂಗಳೂರಿನಲ್ಲಿ 12 ದಿನದಲ್ಲಿ ಇಬ್ಬರು ಕೊರೋನಾ ಸೋಂಕಿನಿಂದ ಸಾವು

By Govindaraj S  |  First Published Jun 18, 2022, 6:28 AM IST

ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಮತ್ತೊಬ್ಬರು ಕೊರೋನಾ ಸೋಂಕಿನಿಂದ ಮೃತಪಟ್ಟವರದಿಯಾಗಿದೆ. ಈ ಮೂಲಕ ನಗರದಲ್ಲಿ ಕಳೆದ 12 ದಿನದ ಅವಧಿಯಲ್ಲಿ ಮೂರು ಮಂದಿ ಸಾವಿಗೀಡಾದಂತಾಗಿದೆ. 


ಬೆಂಗಳೂರು (ಜೂ.18): ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಮತ್ತೊಬ್ಬರು ಕೊರೋನಾ ಸೋಂಕಿನಿಂದ ಮೃತಪಟ್ಟವರದಿಯಾಗಿದೆ. ಈ ಮೂಲಕ ನಗರದಲ್ಲಿ ಕಳೆದ 12 ದಿನದ ಅವಧಿಯಲ್ಲಿ ಮೂರು ಮಂದಿ ಸಾವಿಗೀಡಾದಂತಾಗಿದೆ. ಜೂನ್‌ 5 ಹಾಗೂ ಜೂನ್‌ 15ರಂದು ಸೋಂಕಿನಿಂದ ಮೃತಪಟ್ಟವರದಿಯಾಗಿತ್ತು. ಇನ್ನು ಶುಕ್ರವಾರ 610 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಪಾಸಿಟಿವಿಟಿ ದರ ಶೇ.3.35ಕ್ಕೆ ಏರಿದೆ. 462 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ನಗರದಲ್ಲಿ ಸದ್ಯ 4346 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 32 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರು ಮಂದಿ ಐಸಿಯು ಮತ್ತು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದೆಲ್ಲರೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 16,978 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 1,686 ಮಂದಿ ಮೊದಲ ಡೋಸ್‌, 9,779 ಮಂದಿ ಎರಡನೇ ಡೋಸ್‌ ಮತ್ತು 5,513 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ.

Tap to resize

Latest Videos

undefined

ನಗರದಲ್ಲಿ 17,287 ಮಂದಿ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 13,678 ಆರ್‌ಟಿಪಿಸಿಆರ್‌ ಹಾಗೂ 3,609 ಮಂದಿ ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ. ಶುಕ್ರವಾರ ಹೊಸದಾಗಿ ಯಾವುದೇ ಕಂಟೈನ್ಮೆಂಟ್‌ ವಲಯ ಸೃಷ್ಟಿಯಾಗಿಲ್ಲ. ಮಹದೇವಪುರದಲ್ಲಿ 12 ಪ್ರದೇಶಗಳು ಕಂಟೈನ್ಮೆಂಟ್‌ ವ್ಯಾಪ್ತಿಯಲ್ಲಿವೆ. ಉಳಿದಂತೆ ಯಲಹಂಕದಲ್ಲಿ 4 ಹಾಗೂ ದಾಸರಹಳ್ಳಿಯ ವಲಯದಲ್ಲಿ 2 ಸೇರಿದಂತೆ ಒಟ್ಟು 18 ಕಂಟೈನ್ಮೆಂಟ್‌ ವಲಯಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಮಾತನಾಡುವವನಿಗಿಂತ ಮೌನಿಗೆ ಕೋವಿಡ್‌ ಸಾಧ್ಯತೆ..!

ಮತ್ತೆ ವಿಮಾನ ನಿಲ್ದಾಣಗಳಲ್ಲಿ ಕೋವಿಡ್‌ ಪರೀಕ್ಷೆ ಶುರು: ರಾಜ್ಯದಲ್ಲಿ ಕೊರೋನಾ ಹೆಚ್ಚಳಕ್ಕೆ ಕಾರಣ ಕಂಡುಕೊಳ್ಳಲು ವಿಮಾನ ನಿಲ್ದಾಣಗಳಲ್ಲಿ ಸೋಂಕು ಪರೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದೆ. ರಾಜ್ಯದಲ್ಲಿ ಸತತ 15 ದಿನ ಕೊರೋನಾ ಹೊಸ ಪ್ರಕರಣಗಳು ಹೆಚ್ಚಳವಾಗಿವೆ. ಕೊರೋನಾ ಮೂರನೇ ಅಲೆ ನಂತರ (ಒಮಿಕ್ರೋನ್‌ ಬಳಿಕ) ಯಾವುದೇ ಹೊಸ ತಳಿ ಪತ್ತೆಯಾಗಿಲ್ಲ. ಆದರೆ ಈ ಏರಿಕೆ ಏಕೆ ಎಂಬುದರ ಪತ್ತೆಗಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಶೇ.2 ಲಕ್ಷಣ ರಹಿತರ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು. ವರದಿಯಲ್ಲಿ ಸೋಂಕು ದೃಢಪಟ್ಟರೆ ಆ ಮಾದರಿಯನ್ನು ಜಿನೋಮಿಕ್‌ ಸೀಕ್ಷೆನ್ಸಿಂಗ್‌ ಪರೀಕ್ಷೆಗೆ ಕಳುಹಿಸುವಂತೆ ಸೂಚಿಸಲಾಗಿದೆ.

10ಕ್ಕಿಂತ ಹೆಚ್ಚು ಮಕ್ಕಳಿಗೆ ಕೋವಿಡ್‌ ಬಂದರೆ ಶಾಲೆಗೆ ರಜೆ!

ಪ್ರತಿ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಲಕ್ಷಣ ಇರುವವರನ್ನು ಪರೀಕ್ಷೆಗೆ ಒಳಪಡಿಸಿ ಸೋಂಕು ದೃಢಪಟ್ಟವರಲ್ಲಿ ಸಿಟಿ ವ್ಯಾಲ್ಯೂ 25ಕ್ಕಿಂತ ಕಡಿಮೆ ಇರುವ ಮಾದರಿಗಳನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಬೇಕು. ಉಸಿರಾಟದ ತೊಂದರೆ (ಸಾರಿ) ಹಾಗೂ ವಿಷಮ ಶೀತಜ್ವರ (ಐಎಲ್‌ಐ) ಪ್ರಕರಣಗಳ ಮಾಹಿತಿಯನ್ನು ದಾಖಲಿಸಿ ಈ ಲಕ್ಷಣಗಳನ್ನು ಹೊಂದಿರುವ ಪ್ರತಿ 20 ಪ್ರಕರಣಗಳಲ್ಲಿ ಒಂದು ಮಾದರಿಯನ್ನು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಬೇಕು. ಜತೆಗೆ ಆ ರೋಗಿಗಳ ಮೇಲೆ ನಿಗಾವಹಿಸಬೇಕು. ಪ್ರಯೋಗಾಲಯಗಳು ಪ್ರತಿನಿತ್ಯದ ಕೊರೋನಾ ಪರೀಕ್ಷೆಯ ವರದಿ ಮತ್ತು ಸಿಟಿ ವ್ಯಾಲ್ಯೂ ವಿಶ್ಲೇಷಿಸಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಪೋರ್ಚ್‌ಲ್‌ ನಲ್ಲಿ ದಾಖಲಿಸಬೇಕು ಎಂದು ಸೂಚಿಸಲಾಗಿದೆ.

click me!