ಸರ್ಕಾರದಿಂದ ಗುತ್ತಿಗೆದಾರರ ₹6 ಸಾವಿರ ಕೋಟಿ ಬಾಕಿ: ಸುಭಾಸ ಪಾಟೀಲ ಆರೋಪ

By Kannadaprabha News  |  First Published Jan 6, 2023, 12:54 PM IST

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾಮಗಾರಿ ನಡೆಸಿದ ಗುತ್ತಿಗೆದಾರರ ಹಣ ಪಾವತಿಯಾಗಿಲ್ಲ. ರಾಜ್ಯಾದ್ಯಂತ . 6 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದ್ದರೆ ಉತ್ತರ ಕರ್ನಾಟಕ ಭಾಗದ ಗುತ್ತಿಗೆದಾರರ . 3 ಸಾವಿರ ಕೋಟಿ ಬಾಕಿ ಇದೆ ಎಂದು ಉತ್ತರ ಕರ್ನಾಟಕ ಸಿವಿಲ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಸ ಪಾಟೀಲ ಆರೋಪಿಸಿದರು.


ಧಾರವಾಡ (ಜ.6) : ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾಮಗಾರಿ ನಡೆಸಿದ ಗುತ್ತಿಗೆದಾರರ ಹಣ ಪಾವತಿಯಾಗಿಲ್ಲ. ರಾಜ್ಯಾದ್ಯಂತ . 6 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿದ್ದರೆ ಉತ್ತರ ಕರ್ನಾಟಕ ಭಾಗದ ಗುತ್ತಿಗೆದಾರರ . 3 ಸಾವಿರ ಕೋಟಿ ಬಾಕಿ ಇದೆ ಎಂದು ಉತ್ತರ ಕರ್ನಾಟಕ ಸಿವಿಲ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಸ ಪಾಟೀಲ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸಣ್ಣ ನೀರಾವರಿ ಇಲಾಖೆ(Minor Irrigation Department)ಯಲ್ಲಿ ಒಂದು ವರ್ಷ ಸೇರಿದಂತೆ ಪಿಡಬ್ಲ್ಯೂಡಿ(PWD), ಬೃಹತ್‌ ನೀರಾವರಿ(Massive irrigation), ಜಿಲ್ಲಾ ಪಂಚಾಯ್ತಿ(zilla panchayati) ಹೀಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರ ಹಣ ಕೋಟಿಗಟ್ಟಲೇ ಬಾಕಿ ಇದ್ದು ಕೂಡಲೇ ಸರ್ಕಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಗುತ್ತಿಗೆದಾರರ ಕ್ಷೇಮನಿಧಿ ಸಮಿತಿಯಲ್ಲಿ ಬರೀ ದಕ್ಷಿಣ ಕರ್ನಾಟಕದ ಪ್ರತಿನಿಧಿಗಳು ಮಾತ್ರವಿದ್ದು ಈ ಭಾಗದ ಪದಾಧಿಕಾರಿಗಳನ್ನು ಸೇರ್ಪಡೆ ಮಾಡಬೇಕು. ಕೋಟಿಗಟ್ಟಲೇ ಹಣ ಅನವಶ್ಯಕ ಕಾರಣಗಳಿಂದ ವ್ಯಯ ಆಗುತ್ತಿದ್ದು ಗುತ್ತಿಗೆದಾರರ ಕುಟುಂಬಗಳಿಗೆ ಅದರ ಸದ್ಬಳಕೆಯಾಗಲು ಸರ್ಕಾರ ಈ ವಿಷಯದಲ್ಲಿ ದಿಟ್ಟಹೆಜ್ಜೆ ಇಡಬೇಕಿದೆ ಎಂದರು.

Tap to resize

Latest Videos

ಕಾಮಗಾರಿ ಹೆಸರಿನಲ್ಲಿ ಬೆಟ್ಟಗುಡ್ಡಗಳ ಬಗೆದು ಪರಿಸರ ನಾಶ

ಟೆಂಡರ್‌(Tenders)ಗಳಲ್ಲಿ ಗುತ್ತಿಗೆದಾರರು ಸರ್ಕಾರ ನಿಗದಿಪಡಿಸಿದ ಎಸ್‌ಆರ್‌ ದರಕ್ಕಿಂತ ಶೇ. 5ಕ್ಕಿಂತ ಹೆಚ್ಚಿನ ದರ ನಮೂದಿಸಿದಲ್ಲಿ ಅದನ್ನು ಸರ್ಕಾರಕ್ಕೆ ಕಳುಹಿಸುವ ನಿಯಮವಿದೆ. ಈ ನಿಯಮ ಬದಲಿಸಿ ಮೊದಲಿನ ನಿಯಮ ಜಾರಿಗೆ ತರಬೇಕು. ಇಂತಹ ಚಿಕ್ಕಪುಟ್ಟಬದಲಾವಣೆ ಮಾಡಲು ವಲಯ ಕಾರ್ಯನಿರ್ವಾಹಕ ಅಭಿಯಂತರರು ಅಥವಾ ಅಧೀಕ್ಷಕ ಅಭಿಯಂತರರ ಮಟ್ಟದಲ್ಲಿಯೇ ತೀರ್ಮಾನ ಕೈಗೊಳ್ಳುವ ಮೂಲಕ ಅಧಿಕಾರವನ್ನು ವಿಕೇಂದ್ರೀಕರಣ ಮಾಡಬೇಕು. ಎಲ್ಲದಕ್ಕೂ ಸರ್ಕಾರದ ಕಾರ್ಯದರ್ಶಿ ವರೆಗೂ ಹೋಗುವಂತಾಗಿದ್ದು ಇದರಿಂದ ಕಾಮಗಾರಿ ವಿಳಂಬ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಇನ್ನು, ಸರ್ಕಾರಿ ಗುತ್ತಿಗೆದಾರರು ಬಿಲ್‌ ಜತೆಗೆ ಎಂಡಿಪಿ (ಮಿನಲರ್‌ ಡಿಸ್ಪಾ್ಯಚ್‌ ಪರಮಿಟ್‌) ಲಗತ್ತಿಸುವ ಅಗತ್ಯವೇ ಬರುವುದಿಲ್ಲ. ಆದರೂ ಈ ನಿಯಮ ಜಾರಿ ತಂದಿರುವುದು ತಪ್ಪು ಎಂದು ಸುಭಾಸ ಪಾಟೀಲ ಹೇಳಿದರು.

News Hour: ಸಿಎಂ ಬೊಮ್ಮಾಯಿ ದೆಹಲಿ ದಂಡಯಾತ್ರೆ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಬಂಧನ!

ಇದಲ್ಲದೇ ರಾಜ್ಯಾದ್ಯಂತ ಕ್ರಷರ್‌ ಮಾಲೀಕರು ಪ್ರತಿಭಟನೆ ನಡೆಸುತ್ತಿದ್ದು ಅವರ ಸಮಸ್ಯೆ ಬಗೆಹರಿಸಿ ಕೂಡಲೇ ಜಲ್ಲಿ ಕಲ್ಲು ಸಿಗುವಂತೆ ಮಾಡುವುದು ಸೇರಿ ಹಲವು ಬೇಡಿಕೆ ಈಡೇರಿಸದೇ ಇದ್ದಲ್ಲಿ ಜನಪ್ರತಿನಿಧಿಗಳ ಮನೆ ಎದುರು ಪ್ರತಿಭಟನೆ ಮಾಡುವುದಾಗಿಯೂ ಸುಭಾಸ ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಬಿ.ವಿ. ಹಿರೇಮಠ, ಎ.ಐ. ಲಂಗೋಟಿ ಇದ್ದರು.

click me!