
ಹಾವೇರಿ(ಅ.04): ಟಿಪ್ಪರ್ ಸ್ಕೂಟಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ಇಂದು(ಶುಕ್ರವಾರ) ನಡೆದಿದೆ. ನಾಗರಾಜ್ ಮುದೋಳಮಠ (60) ಮೃತ ಸ್ಕೂಟಿ ಸವಾರ.
ಟಿಪ್ಪರ್ ಹರಿದ ಪರಿಣಾಮ ಸ್ಕೂಟಿ ಸವಾರ ಅಪ್ಪಚ್ಚಿಯಾಗಿದ್ದಾರೆ. ಟಿಪ್ಪರ್ ತಲೆ ಮೇಲೆ ಹತ್ತಿದ ಪರಿಣಾಮ ತಲೆ ಛಿದ್ರ ಛಿದ್ರವಾಗಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಾಲಿನ ಟ್ಯಾಂಕರ್ ಪಲ್ಪಿ, ಚಾಲಕನ ರಕ್ಷಣೆ ಬಿಟ್ಟು ಹಾಲು ತುಂಬಿಕೊಂಡು ಹೋದ ಜನರು!
ಟಿಪ್ಪರ್ ರಭಸಕ್ಕೆ ಬೈಕ್ ಸವಾರನ ದೇಹ ಛಿದ್ರ ಛಿದ್ರವಾಗಿದೆ. ರಸ್ತೆ ಕ್ರಾಸ್ ಮಾಡುವಾಗ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಡಿವೈಎಸ್ಪಿ ಡಾ.ಗಿರೇಶ ಬೋಜಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ರಾಣೇಬೆನ್ನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.