ನಮ್ಮ ಮೆಟ್ರೋ ಪ್ರಯಾಣ ಟಿಕೆಟ್ ದರ ಹೆಚ್ಚಳ: ಸಾರ್ವಜನಿಕರ ಸಲಹೆ ಕೇಳಿದ ಬಿಎಂಆರ್‌ಸಿಎಲ್

Published : Oct 04, 2024, 12:45 PM ISTUpdated : Oct 04, 2024, 01:04 PM IST
ನಮ್ಮ ಮೆಟ್ರೋ ಪ್ರಯಾಣ ಟಿಕೆಟ್ ದರ ಹೆಚ್ಚಳ: ಸಾರ್ವಜನಿಕರ ಸಲಹೆ ಕೇಳಿದ ಬಿಎಂಆರ್‌ಸಿಎಲ್

ಸಾರಾಂಶ

ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ಕಮಿಟಿ ಆಗಿದೆ. ಈ ಕುರಿತು ಒಂದು ಸಭೆ ಕೂಡಾ ಆಗಿದೆ. ಕಮಿಟಿ ಶೀಘ್ರದಲ್ಲೇ ವರದಿ ನೀಡಲಿದೆ. ವರದಿ ಆಧಾರದ ಮೇಲೆ ಮೆಟ್ರೋ ಟಿಕೆಟ್ ದರ ಏರಿಕೆಯಾಗಲಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌಹಾಣ್ ತಿಳಿಸಿದ್ದಾರೆ.

ಬೆಂಗಳೂರು (ಅ.04): ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್ ನೀಡಲು ಮುಂದಾದ ಬಿಎಂಆರ್‌ಸಿಎಲ್ ಚಿಂತನೆ ನಡೆಸುತ್ತಿದ್ದು, 2ನೇ ಬಾರಿ ಮೆಟ್ರೋ ಟಿಕೆಟ್ ದರ ಏರಿಸಲು‌ ನಿಗಮ ಮುಂದಾಗಿದೆ. ಹೌದು! ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ಕಮಿಟಿ ಆಗಿದೆ. ಈ ಕುರಿತು ಒಂದು ಸಭೆ ಕೂಡಾ ಆಗಿದೆ. ಕಮಿಟಿ ಶೀಘ್ರದಲ್ಲೇ ವರದಿ ನೀಡಲಿದೆ. ವರದಿ ಆಧಾರದ ಮೇಲೆ ಮೆಟ್ರೋ ಟಿಕೆಟ್ ದರ ಏರಿಕೆಯಾಗಲಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌಹಾಣ್ ತಿಳಿಸಿದ್ದಾರೆ. 

ಈ ಸಮಿತಿಯಲ್ಲಿ ರಾಜ್ಯ ಹಾಗೂ ಕೇಂದ್ರದ ಹಿರಿಯ ಅಧಿಕಾರಿಗಳು ಹಾಗೂ ನಿವೃತ್ತ ನ್ಯಾಯಾಧೀಶರು ಇರಲಿದ್ದಾರೆ. ಕಮಿಟಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಮಾಡಲಿದೆ.  ಇನ್ನು ಈಗಾಗಲೇ ಹಲವು ಬಾರಿ‌ ಮೆಟ್ರೋ ದರ ಏರಿಕೆ ಬಗ್ಗೆ ಬಿಎಂಆರ್‌ಸಿಎಲ್ ಪ್ರಸ್ತಾಪ ಮಾಡಿತ್ತು, ಆದರೆ ಕಳೆದ ಹಲವು ವರ್ಷಗಳಿಂದ ದರ ಏರಿಕೆಯನ್ನು ಮಾಡಿರಲಿಲ್ಲ. ಸದ್ಯ 15 ರಿಂದ 20% ಟಿಕೆಟ್ ದರ ಏರಿಕೆ ಸಾಧ್ಯತೆಯಿದೆ. ಬಿಎಂಆರ್‌ಸಿಎಲ್ ಖರ್ಚು ವೆಚ್ಚ ನೋಡಿಕೊಂಡು ದರ ಏರಿಕೆ ನಿಗದಿ ಮಾಡಲಿದ್ದು, 3 ತಿಂಗಳ ಒಳಗಾಗಿ ದರ ಏರಿಕೆ ನಿರ್ಧಾರ ಮಾಡಲಿದೆ. 

ಇನ್ನು ಅ.21 ರೊಳಗೆ ಪ್ರಯಾಣಿಕರು ಬಿಎಂಆರ್​​ಸಿಎಲ್‌ಗೆಗೆ ತಮ್ಮ ಅಭಿಪ್ರಾಯ ತಿಳಿಸಲು ಕಾಲಾವಕಾಶ ನೀಡಿದ್ದು, ಸಲಹೆಯನ್ನ ffc@bmrc.co.in ಇಮೇಲ್‌ಗೆ ಕಳಿಸುವಂತೆ ತಿಳಿಸಿದೆ. ಅಥವಾ 3ನೇ ಮಹಡಿ, ಸಿ ಬ್ಲಾಕ್, ಬಿಎಂಟಿಸಿ ಕಾಂಪ್ಲೆಕ್ಸ್, ಕೆ.ಹೆಚ್.ರಸ್ತೆ, ಶಾಂತಿ ನಗರ, ಬೆಂಗಳೂರು - 560027 ಈ ವಿಳಾಸಕ್ಕೆ ಪತ್ರ ಬರೆದು ಮೆಟ್ರೊ ರೈಲು ದರ ನಿಗದಿ ಸಮಿತಿ ಅಧ್ಯಕ್ಷರಿಗೆ ಅಭಿಪ್ರಾಯ ತಿಳಿಸಬಹುದು ಎಂದು ಬಿಎಂಆರ್​​ಸಿಎಲ್ ತಿಳಿಸಿದೆ.

ಎಚ್‌ಎಎಲ್‌ನಲ್ಲಿ ಕನ್ನಡಿಗರಿಗೆ ಅನ್ಯಾಯ, 90% ಹುದ್ದೆ ಹೊರ ರಾಜ್ಯದವರಿಗೆ: ತೀವ್ರ ಆಕ್ರೋಶ

ವಿಸ್ತರಿತ ಹಸಿರು ಮೆಟ್ರೋ ಮಾರ್ಗ ಸೇವೆ ಶೀಘ್ರ ಶುರು: ನಮ್ಮ ಮೆಟ್ರೋಹಸಿರು ಕಾರಿಡಾರ್ ವಿಸ್ತರಿತ ನಾಗಸಂದ್ರ ಮಾದಾವರ (3.7 ಕಿ.ಮೀ.) ಮಾರ್ಗ ರೈಲುದಲ್ಲಿ ಗುರುವಾರ ಮೆಟ್ರೋ ಸುರಕ್ಷತಾ ಆಯುಕ್ತರ ತಂಡ (ಸಿಎಂಆರ್‌ಎಸ್) ತಪಾಸಣೆ ಪೂರ್ಣ ಗೊಳಿಸಿದೆ. ಇನ್ನೆರಡು ವಾರದಲ್ಲಿ ವರದಿ ನೀಡುವ ನಿರೀಕ್ಷೆಯಿದ್ದು, ಶೀಘ್ರವೇ ಇಲ್ಲಿ ಪ್ರಯಾಣಿಕರ ಸಂಚಾರ ಪ್ರಾರಂಭವಾಗಲಿದೆ. ಮೋಟಾರ್ ಟ್ರಾಲಿ ಮೂಲಕ ಮಾರ್ಗದಲ್ಲಿ ಸಂಚರಿಸಿದ ಸಿಎಂಆ‌ ಎಸ್ ತಂಡದವರು ಪರಿಶೀಲನೆ ನಡೆಸಿ ದರು. ಮಾರ್ಗದ ತಿರುವು, ಪ್ರಾಯೋ ಗಿಕ ಸಂಚಾರದ ವೇಳೆಯಲ್ಲಿ ರೈಲಿನ ವೇಗ, ನಿಲ್ದಾಣಗಳಲ್ಲಿ ನಿಲ್ಲಬೇಕಾದಾಗ ನಿಧಾನಗತಿ, ಬ್ರೇಕ್ ಸಿಸ್ಟಂ, ವಿದ್ಯುತ್ ಪೂರೈಕೆ ಸೇರಿ ಇತರೆ ಅಂಕಿ ಅಂಶಗಳನ್ನು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳಿಂದ ಪಡೆದರು. 

ಪಿಯುಸಿ ಲ್ಯಾಬ್ ಪರೀಕ್ಷೆಗೂ ಬೇರೆ ಕಾಲೇಜಿನಲ್ಲಿ ಕೇಂದ್ರ: ಕಾಲೇಜು ಉಪನ್ಯಾಸಕರ ಸಂಘ ವಿರೋಧ

ಜೊತೆಗೆ ಮಂಜುನಾಥನಗರ, ಚಿಕ್ಕಬಿದ ರಕಲ್ಲು ಹಾಗೂ ಬೆಂಗಳೂರು ಅಂತಾ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ ನಿಲ್ದಾಣಗಳನ್ನು ತಪಾಸಣೆ ಮಾಡಿದರು. ಸಿಎಂಆರ್‌ಎಸ್ ತಂಡ 15 ದಿನಗಳಲ್ಲಿ ವರದಿ ನೀಡುವ ಸಾಧ್ಯತೆಯಿದೆ. ಅವರು ಸೂಚಿಸುವ ಕೆಲ ಬದಲಾವಣೆಗಳ ಅನ್ವಯ ರೈಲು ಸಂಚಾರ ಆರಂಭಿ ಸಲಾಗುವುದು. 2017ರಲ್ಲಿ ಹಸಿರು ಮಾರ್ಗದ ವಿಸ್ತರಿತ ಕಾಮಗಾರಿ ಆರಂ ಭವಾಗಿದ್ದರೂ ಕೋವಿಡ್, ಭೂಸ್ವಾ ಧೀನ ಸೇರಿ ಹಲವು ಕಾರಣದಿಂದ 7 ವರ್ಷ ವಿಳಂಬವಾಗಿದೆ. ಮಾದ ವಾರದವರೆಗೆ ವಾಣಿಜ್ಯ ಸೇವೆ ಲಭ್ಯವಾಗ ಲಿದ್ದು, ಇದರಿಂದ ನೆಲಮಂಗಲ ಸೇರಿ ಸುತ್ತಮುತ್ತಲ ಜನತೆಗೆ ಅನುಕೂಲವಾಗಲಿದೆ. ಸಿಎಂಆರ್‌ಎಸ್‌ ತಪಾಸಣೆಗಾಗಿ ಹಿನ್ನೆಲೆಯಲ್ಲಿ ನಾಗಸಂದ್ರ - ಪೀಣ್ಯ ಇಂಡಸ್ಟ್ರಿ ನಿಲ್ದಾಣಗಳ ನಡುವೆ ರೈಲ್ವೆ ಸಂಚಾರ ಸ್ಥಗಿತಗೊಂಡಿತ್ತು.

PREV
Read more Articles on
click me!

Recommended Stories

ಭ್ರಷ್ಟ ಅಧಿಕಾರಿಗೆ ಬಿಗ್ ಶಾಕ್; 4 ವರ್ಷ ಜೈಲು ಶಿಕ್ಷೆ, 51 ಲಕ್ಷಕ್ಕೂ ಅಧಿಕ ಅಕ್ರಮ ಆಸ್ತಿ ಮುಟ್ಟುಗೋಲು!
Discover Koppal: ವಿಶ್ವದ ಗಮನ ಸೆಳೆಯಲಿದೆ ಹಿರೇಬೆಣಕಲ್: ಡಿಸ್ಕವರ್ ಕೊಪ್ಪಳಕ್ಕೆ ಡಿಸಿ ವಿದ್ಯುಕ್ತ ಚಾಲನೆ