ಸೋಂಕಿತರ ಪತ್ತೆಗೆ 6 ಸಾವಿರ ಸಿಬ್ಬಂದಿ ಬಳಕೆ: ವಿಶ್ವನಾಥ್

By Kannadaprabha NewsFirst Published Jul 13, 2020, 8:25 AM IST
Highlights

ನಾನು, ನನ್ನ ಕುಟುಂಬ, ನನ್ನ ಬೂತ್‌ ಕಾರ್ಯಕ್ರಮದಡಿಯಲ್ಲಿ ಮನೆ ಮನೆ ಸರ್ವೇ ನಡೆಸಿ ಮೂಲದಲ್ಲೇ ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚಲು 6 ಸಾವಿರ ಸಿಬ್ಬಂದಿ ಹಾಗೂ ಸ್ವಯಂ ಸೇವಕರನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ಶಾಸಕ ಎಸ್‌.ಆರ್‌.ವಿಶ್ವನಾಥ್‌ ತಿಳಿಸಿದ್ದಾರೆ.

ಯಲಹಂಕ(ಜು.13): ನಾನು, ನನ್ನ ಕುಟುಂಬ, ನನ್ನ ಬೂತ್‌ ಕಾರ್ಯಕ್ರಮದಡಿಯಲ್ಲಿ ಮನೆ ಮನೆ ಸರ್ವೇ ನಡೆಸಿ ಮೂಲದಲ್ಲೇ ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚಲು 6 ಸಾವಿರ ಸಿಬ್ಬಂದಿ ಹಾಗೂ ಸ್ವಯಂ ಸೇವಕರನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ಶಾಸಕ ಎಸ್‌.ಆರ್‌.ವಿಶ್ವನಾಥ್‌ ತಿಳಿಸಿದ್ದಾರೆ.

ಯಲಹಂಕ ಸಮೀಪದ ರಾಜಾನುಕುಂಟೆ, ಯಲಹಂಕ ಉಪನಗರದಲ್ಲಿ ನೂತನ ಮನೆ ಮನೆ ಸರ್ವೇ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲೇ ಪ್ರಥಮ ಯತ್ನವಾಗಿ ಇಂತಹದೊಂದು ಕಾರ್ಯಕ್ರಮವನ್ನು ಜಾರಿಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಕೊರೋನಾ ಆರ್ಭಟ: ನಿಯಂತ್ರಣಕ್ಕೆ ಬಾರದಿದ್ದಲ್ಲಿ 14 ದಿನ ಲಾಕ್‌ಡೌನ್?

ಬಿಬಿಎಂಪಿ, ತಾಲೂಕು ಆಡಳಿತ ಹಾಗೂ ಸ್ವಯಂ ಸೇವಕರು ಸೇರಿದಂತೆ ಸರ್ವೇ ಕಾರ್ಯಕ್ಕೆ 6 ತಂಡಗಳನ್ನು ರಚಿಸಲಾಗಿದೆ. ಸೋಂಕಿತರನ್ನು ಕ್ವಾರಂಟೈನ್‌, ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ಕಳುಹಿಸಿಕೊಡುವ ವ್ಯವಸ್ಥೆಯನ್ನು ಮಾಡುವ ಮೂಲಕ ಇಡೀ ತಾಲೂಕನ್ನು ಕೊರೋನಾ ಮುಕ್ತಗೊಳಿಸಲು ಶ್ರಮಿಸುತ್ತೇವೆ ಎಂದು ವಿರಿಸಿದರು.

ಹಾಸಿಗೆ ಇಲ್ಲದೆ ವಿಕ್ಟೋರಿಯಾ ಮುಂದೆ ಜೀವ ಬಿಟ್ಟವೃದ್ಧೆ, ಸತ್ತ ನಂತ್ರ ಕೊರೋನಾ ಟೆಸ್ಟ್ ಮಾಡಿದ ವೈದ್ಯರು

ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ಅವರು ಮನೆ ಮನೆ ಸರ್ವೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಹಶೀಲ್ದಾರ್‌ ರಘುಮೂರ್ತಿ, ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಕಿಶೋರ್‌ ಕುಮಾರ್‌, ಉಪತಹಸೀಲ್ದಾರ್‌ ಮಂಜುನಾಥ್‌, ಕ್ಷೇತ್ರ ಶಿಕ್ಷಣಾಧಿಕಾರಿ ಕಮಲಾಕರ್‌, ಬಿಜೆಪಿ ಮುಖಂಡ ಹನುಮಯ್ಯ, ಸತೀಶ್‌ ಮುಂತಾದವರು ಹಾಜರಿದ್ದರು.

click me!