ರಬ್ಬರ್ ತೋಟದಲ್ಲಿ ಒಂದೇ ಕಡೆ 6 ಹೆಬ್ಬಾವು..!

By Suvarna NewsFirst Published Jan 14, 2020, 11:11 AM IST
Highlights

ಯಾವಾಗಲಾದರೊಮ್ಮೆ ತೋಟದಲ್ಲಿಯೋ, ಗುಡ್ಡದಲ್ಲಿಯೋ ಹೆಬ್ಬಾವು ಕಾಣ ಸಿಗುವುದು ಸಾಮಾನ್ಯ. ಆದರೆ ಮಂಗಳೂರಿನಲ್ಲಿ ಒಂದೇ ಕಡೆ 6 ಹೆಬ್ಬಾವುಗಳು ಒಟ್ಟಿಗೇ ಕಾಣಿಸಿಕೊಂಡಿದೆ.

ಮಂಗಳೂರು(ಜ.14): ಯಾವಾಗಲಾದರೊಮ್ಮೆ ತೋಟದಲ್ಲಿಯೋ, ಗುಡ್ಡದಲ್ಲಿಯೋ ಹೆಬ್ಬಾವು ಕಾಣ ಸಿಗುವುದು ಸಾಮಾನ್ಯ. ಆದರೆ ಮಂಗಳೂರಿನಲ್ಲಿ ಒಂದೇ ಕಡೆ 6 ಹೆಬ್ಬಾವುಗಳು ಒಟ್ಟಿಗೇ ಕಾಣಿಸಿಕೊಂಡಿದೆ.

ಮಂಗಳೂರಿನ ಕೊಟೇಲು ಎಂಬಲ್ಲಿ ಒಂದೇ ಕಡೆ 6 ಹೆಬ್ಬಾವು ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕೊಟೇಲು ಗ್ರಾಮದಲ್ಲಿ ರಬ್ಬರ್‌ ತೋಟವೊಂದರಲ್ಲಿ ಒಂದೇ ಕಡೆ ಆರು ಹೆಬ್ಬಾವುಗಳು ಜೊತೆಗೇ ಕಂಡು ಬಂದಿದೆ.

ಕಮೋಡ್‌ನಲ್ಲಿ ಎರಡೆರಡು ಹೆಬ್ಬಾವು, ಕಂಡವಳ ಸ್ಥಿತಿ ಏನಾಗಿರ್ಬೇಡ!

ರಬ್ಬರ್ ತೋಟದಲ್ಲಿ ಬೀಡು ಬಿಟ್ಟಿದ್ದ 6  ಬೃಹತ್ ಗಾತ್ರದ ಹೆಬ್ಬಾವುಗಳನ್ನು ಉರಗ ತಜ್ಞರು ಹಿಡಿದಿದ್ದಾರೆ. ಅರಣ್ಯ ಇಲಾಖೆ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದು, ಪಾಂಡೆಗದ್ದೆ ತಿಮ್ಮಪ್ಪ ಮತ್ತು ಅವಿನಾಶ್ ಎಂಬವರು ಕಾರ್ಯಾಚರಣೆ ನಡೆಸಿದ್ದಾರೆ.

ಅರಣ್ಯ ಇಲಾಖೆ ಹಿಡಿದ ಹೆಬ್ಬಾವುಗಳನ್ನು ಕಾಡಿಗೆ ಬಿಟ್ಟಿದೆ. ಚಳಿಗಾಲವಾದ್ದರಿಂದ ರಬ್ಬರ್‌ ಮರಗಳು ಎಲೆಗಳನ್ನು ಉದುರಿಸಿಕೊಂಡು ಬೋಳಾಗುತ್ತವೆ. ತರಗೆಲೆ ಬಿದ್ದು, ನೆಲ ಬೆಚ್ಚಗೆ ಉಳಿಯುವದರಿಂದ ಸಾಮಾನ್ಯವಾಗಿ ಈ ಸಂದರ್ಭ ಹಾವುಗಳು ಇಂತಹ ಸ್ಥಳಗಳಲ್ಲಿಯೇ ಬೀಡು ಬಿಡುತ್ತವೆ.

ಚಿಕ್ಕಮಗಳೂರು: ಅಡಕೆ ತೋಟದಲ್ಲಿತ್ತು 12 ಅಡಿ ಉದ್ದದ ಹೆಬ್ಬಾವು

"

click me!