ಪ್ರಯಾಣಿಕರ ಕೊರತೆ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ನಡುವಿನ ಇಂಡಿಯೋ ವಿಮಾನ ಹಾರಾಟವನ್ನು ಬುಧವಾರ ಮತ್ತು ಗುರುವಾರ ರದ್ದುಪಡಿಸಲಾಗಿದೆ. ದಿನಂಪ್ರತಿ ತಲಾ ಆರು ವಿಮಾನ ಹಾರಾಟ ರದ್ದುಗೊಂಡಂತಾಗಿದೆ.
ಮಂಗಳೂರು(ಮಾ.19): ಪ್ರಯಾಣಿಕರ ಕೊರತೆ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ನಡುವಿನ ಇಂಡಿಯೋ ವಿಮಾನ ಹಾರಾಟವನ್ನು ಬುಧವಾರ ಮತ್ತು ಗುರುವಾರ ರದ್ದುಪಡಿಸಲಾಗಿದೆ. ದಿನಂಪ್ರತಿ ತಲಾ ಆರು ವಿಮಾನ ಹಾರಾಟ ರದ್ದುಗೊಂಡಂತಾಗಿದೆ.
ವಿಮಾನ ಹಾರಾಟ ರದ್ದುಪಡಿಸಲು ನಿರ್ದಿಷ್ಟಕಾರಣವನ್ನು ಇಂಡಿಗೋ ನೀಡಿಲ್ಲವಾದರೂ, ಪ್ರಯಾಣಿಕರ ಕೊರತೆಯೇ ಕಾರಣ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಕುವೈಟ್, ಬಹರೈನ್, ದಮಾಮ್ ಹಾಗೂ ದೋಹಾ ನಡುವೆ ಏರ್‌ಇಂಡಿಯಾ ಹಾರಾಟವನ್ನು ಸ್ಥಗಿತಗೊಳಿಸಿತ್ತು.
undefined
ಕೆಲವು ರೈಲುಗಳು ರದ್ದು:
ಕೊರೋನಾ ವೈರಸ್ ಭೀತಿ ಸಲುವಾಗಿ ಜಬಲ್ಪುರ ಜಂಕ್ಷನ್-ಮಂಗಳೂರು ಜಂಕ್ಷನ್ ನಡುವಿನ ಸ್ಪೆಷಲ್ ವೀಕ್ಲಿ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಎರಡೂ ಕಡೆಯಿಂದ ಮಾ.21 ಮತ್ತು 28 ಹಾಗೂ ಮಾ.23 ಮತ್ತು 30ರಂದು ರದ್ದುಪಡಿಸಲಾಗಿದೆ.
ಮಂಗಳೂರು ಜಂಕ್ಷನ್-ಮಡ್ಗಾಂವ್ ಜಂಕ್ಷನ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನೂ ಮಾ.19ರಿಂದ 31ರ ವರೆಗೆ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಪ್ರಯಾಣಿಕರ ಕೊರತೆ ಕಾರಣ ಎನ್ನಲಾಗಿದೆ.
ಶಂಕಿತರ ನಿಗಾಗೆ ಖಾಸಗಿ ಹೋಟೆಲ್, ರೆಸಾರ್ಟ್ ಬಳಕೆ!
ಹುಬ್ಬಳ್ಳಿ ಮಾರ್ಗದ ಕುಟ್ಲಿ-ಮುಲ್ಪಾಡ್‌ನಲ್ಲಿ ಸಿಂಗಲ್ ಲೈನ್ ಕಾಮಗಾರಿ ಹಿನ್ನೆಲೆಯಲ್ಲಿ ವಿಜಯಪುರ-ಮಂಗಳೂರು ಜಂಕ್ಷನ್ ತತ್ಕಾಲ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಮಾ.19ರಿಂದ 22ರ ವರೆಗೆ ರದ್ದುಪಡಿಸಲಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.