ಬೀದರ್: ಮನೆ ಛಾವಣಿ ಕುಸಿದು ಒಂದೇ ಕುಟುಂಬದ 6 ಜನ ಸಾವು

Published : Jun 26, 2019, 02:54 PM ISTUpdated : Jun 26, 2019, 03:32 PM IST
ಬೀದರ್: ಮನೆ ಛಾವಣಿ ಕುಸಿದು ಒಂದೇ ಕುಟುಂಬದ 6 ಜನ ಸಾವು

ಸಾರಾಂಶ

ನಿದ್ರಾದೇವಿಯ ಮಡಿಲಲ್ಲಿದ್ದಾಗಲೆ ಮನೆ ಮೇಲ್ಛಾವಣಿ ಕುಸಿದು ಇಡೀ ಕುಟುಂಬವೇ ಚಿರನಿದ್ರೆಗೆ ಜಾರಿದೆ. 

ಬೀದರ್, (ಜೂ. 26): ಮನೆಯ ಮೇಲ್ಛಾವಣಿ ಕುಸಿದು ಆರು ಮಂದಿ ಮೃತಪಟ್ಟಿರುವ ಘಟನೆ ಬುಧವಾರ ಬೆಳಗ್ಗೆ ಬೀದರ್ ನಲ್ಲಿ ನಡೆದಿದೆ.

ಬೀದರ್‌ನ ಬಸವಕಲ್ಯಾಣ ಪಟ್ಟಣದ ಚಿಲ್ಲಾಗಲ್ಲಿಯ ಬಡಾವಣೆಯ ನದೀಂ ಶೇಖ್(45),ಫರೀದಾ ಬೇಗಂ(34), ಆಯಿಷಾ ಬಾನು(15), ಮಹೆತಾಬಿ(15), ಫರ್ಹಾನ್ ಅಲಿ(4) ಮತ್ತು ಫಯಾಜ್‍ಖಾನ್(6) ಮೃತಪಟ್ಟ ದುರ್ದೈವಿಗಳು.

ಹಲವು ವರ್ಷಗಳಿಂದ ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದು, ಮಳೆಯಾಗಿದ್ದರಿಂದ ಮಣ್ಣು ನೆನೆದು ಮನೆಯ ಮೇಲ್ಛಾವಣಿ ಕುಸಿದೆ. ಪರಿಣಾಮ ಒಂದೇ ಕುಟುಂಬದ ಆರು ಸದಸ್ಯರು ಸಾವನ್ನಪ್ಪಿದ್ದಾರೆ.

ಸುದ್ದಿ ತಿಳಿದ ಪೊಲೀಸರು ಗ್ರಾಮಸ್ಥರ ನೆರವಿನೊಂದಿಗೆ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಬಸವಕಲ್ಯಾಣ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV
click me!

Recommended Stories

ಕಾರವಾರದಲ್ಲಿ ಚೀನಾ ಜಿಪಿಎಸ್ ಟ್ರ್ಯಾಕರ್ ಹೊಂದಿದ ಸೀಗಲ್ ಹಕ್ಕಿ: ಎಲೆಕ್ಟ್ರಾನಿಕ್ ಡಿವೈಸ್ ಸತ್ಯ ಬಿಚ್ಚಿಟ್ಟ ಎಸ್‌ಪಿ!
ತುಂಗಭದ್ರಾ ಜಲಾಶಯದ ಕ್ರಸ್ಟ್‌ಡ್ ಗೇಟ್‌ ಅಳವಡಿಕೆ ಹಿನ್ನೆಲೆ, 6 ತಿಂಗಳು ಕಾಲುವೆಗಳಿಗೆ ನೀರು ಸ್ಥಗಿತ!