ರಾಜ್ಯ ಸರ್ಕಾರದ ವಿರುದ್ಧ ಮಾತನಾಡಲು ಬಿಜೆಪಿ ಪಕ್ಷಕ್ಕೆ ಯಾವುದೇ ವಿಷಯಗಳಿಲ್ಲದ್ದರಿಂದ ಅವರು ಸಣ್ಣ, ಸಣ್ಣ ವಿಷಯಗಳ ರಾಜಕೀಯ ಮಾಡುತ್ತಿವೆ. ಮಣಿಪುರ ಅತ್ಯಾಚಾರ ಪ್ರಕರಣ ಬಿಟ್ಟು ಉಡುಪಿಯಲ್ಲಿ ನಡೆದ ವಿಡಿಯೋ ಚಿತ್ರಿಕರಣ ಬಗ್ಗೆ ದೊಡ್ಡದಾಗಿ ಮಾತನಾಡುತ್ತಿರುವುದು ನೋಡಿದರೆ ಇವರ ಮನಸ್ಥಿತಿ ಎಂತಹದ್ದು ಎಂದು ತಿಳಿಯುತ್ತದೆ ಎಂದು ಲೇವಡಿ ಮಾಡಿದ ಸತೀಶ ಜಾರಕಿಹೊಳಿ
ರಾಯಬಾಗ(ಆ.03): ಸುಮಾರು 50 ಸಾವಿರ ಕೋಟಿಗಳ 5 ಭಾಗ್ಯಗಳನ್ನು ರಾಜ್ಯದ ಜನತೆಗೆ ನೀಡಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಾತ್ರ ಸಾಧ್ಯ. ಇನ್ನುಳಿದ ಯಾವುದೇ ಸರ್ಕಾರಕ್ಕೆ ಇಂತಹ ಸೌಲಭ್ಯ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಪಟ್ಟಣದ ಮಹಾವೀರ ಭವನದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಅಭಿಮಾನಿಗಳಿಂದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ನಮ್ಮ ಸರ್ಕಾರ ಜಾರಿಗೊಳಿಸುತ್ತಿದೆ. ಕಾರ್ಯಕರ್ತರು ಈ ಎಲ್ಲ ಯೋಜನೆಗಳ ಬಗ್ಗೆ ಪ್ರತಿ ಮನೆಗಳಿಗೆ ತಿಳಿಸಬೇಕು ಎಂದರು.
ಕನ್ನಡ ಭಾಷೆಗೂ ತಮಿಳು ಮಾದರಿಯಲ್ಲಿ ಸ್ವಾಯತ್ತ ಸ್ಥಾನಮಾನ ಕೊಡಿ: ಸಂಸತ್ತಿನಲ್ಲಿ ಈರಣ್ಣ ಕಡಾಡಿ ಆಗ್ರಹ
ರಾಜ್ಯ ಸರ್ಕಾರದ ವಿರುದ್ಧ ಮಾತನಾಡಲು ಬಿಜೆಪಿ ಪಕ್ಷಕ್ಕೆ ಯಾವುದೇ ವಿಷಯಗಳಿಲ್ಲದ್ದರಿಂದ ಅವರು ಸಣ್ಣ, ಸಣ್ಣ ವಿಷಯಗಳ ರಾಜಕೀಯ ಮಾಡುತ್ತಿವೆ. ಮಣಿಪುರ ಅತ್ಯಾಚಾರ ಪ್ರಕರಣ ಬಿಟ್ಟು ಉಡುಪಿಯಲ್ಲಿ ನಡೆದ ವಿಡಿಯೋ ಚಿತ್ರಿಕರಣ ಬಗ್ಗೆ ದೊಡ್ಡದಾಗಿ ಮಾತನಾಡುತ್ತಿರುವುದು ನೋಡಿದರೆ ಇವರ ಮನಸ್ಥಿತಿ ಎಂತಹದ್ದು ಎಂದು ತಿಳಿಯುತ್ತದೆ ಎಂದು ಲೇವಡಿ ಮಾಡಿದರು.
ಕಳೆದ 10 ವರ್ಷದಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರದ ವೈಫಲ್ಯಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಜನರಿಗೆ ತಿಳಿಸಬೇಕು. ಈಗಿನಿಂದಲೇ ಬರುವ ಲೋಕಸಭೆ ಚುನಾವಣೆ ಸಿದ್ಧತೆ ಮಾಡಿಕೊಂಡು ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದರು.
ಸವದಿ ವಿರುದ್ಧ ಪ್ರತಿಷ್ಠೆಯ ಗ್ರಾಪಂ ಚುನಾವಣೆ ಗೆದ್ದ ಜಾರಕಿಹೊಳಿ..!
ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಎಸ್.ಬಿ.ಘಾಟಗೆ, ಡಾ.ಎನ್.ಎ.ಮಗದುಮ್ಮ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೊಹಿತೆ, ಲಕ್ಷ್ಮಣರಾವ ಚಿಂಗಳೆ, ಸದಾಶಿವ ದೇಶಿಂಗೆ, ಅರ್ಜುನ ನಾಯಿಕವಾಡಿ, ರಾಜು ಶಿರಗಾಂವೆ, ನಾಮದೇವ ಕಾಂಬಳೆ, ಸಿದ್ದು ಬಂಡಗರ, ದಿಲೀಪ ಜಮಾದಾರ, ಹಾಜಿ ಮುಲ್ಲಾ, ಅಬ್ದುಲ್‌ಸತ್ತಾರ ಮುಲ್ಲಾ, ಅಪ್ಪಾಸಾಬ್ ಕುಲಗುಡೆ, ಕಿರಣ ಕಾಂಬಳೆ ಸೇರಿದಂತೆಕಾಂಗ್ರೇಸ್ ಪಕ್ಷ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಇದ್ದರು.
ಪಕ್ಷಕ್ಕಾಗಿ ಮತ್ತು ಜನರ ಕಷ್ಟಕ್ಕಾಗಿ ಹಗಲಿರುಳು ದುಡಿಯುವ ಕಾರ್ಯಕರ್ತರಿಗೆ ಪಕ್ಷ ಮಣೆ ಹಾಕುತ್ತದೆ ಹೊರತು, ಎಸಿ ರೂಮ್‌ದಲ್ಲಿಂದ ಬಂದವರಿಗೆ ಯಾವತ್ತು ಪಕ್ಷ ಮಣೆ ಹಾಕುವುದಿಲ್ಲ. ಈಗ ಪಕ್ಷ ಬಿಟ್ಟು ಹೋಗಿರುವವರು ಮತ್ತೆ ಪಕ್ಷಕ್ಕೆ ಮರಳಿ ಬರಬೇಕು. ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಪಕ್ಷವನ್ನು ಕಟ್ಟಿ ಬೆಳೆಸೋಣ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.