ಜಮೀನಿನ ಶೆಡ್‌ನಲ್ಲಿಟ್ಟಿದ್ದ ದಾಖಲೆ ಇಲ್ಲದ 50 ಲಕ್ಷ ರು.ಗಳನ್ನು ಚುನಾವಣಾ ಅಧಿಕಾರಿಗಳ ತಂಡವು ಮಂಗಳವಾರ ವಶಪಡಿಸಿಕೊಂಡಿದೆ.
ಎಚ್.ಡಿ. ಕೋಟೆ : ಜಮೀನಿನ ಶೆಡ್‌ನಲ್ಲಿಟ್ಟಿದ್ದ ದಾಖಲೆ ಇಲ್ಲದ 50 ಲಕ್ಷ ರು.ಗಳನ್ನು ಚುನಾವಣಾ ಅಧಿಕಾರಿಗಳ ತಂಡವು ಮಂಗಳವಾರ ವಶಪಡಿಸಿಕೊಂಡಿದೆ.
ತಾಲೂಕಿನ ಕಸಬಾ ಹೋಬಳಿ ವಡ್ಡರಗುಡಿ ಸಮೀಪದ ಇಟ್ನಾ ಗ್ರಾಮದಲ್ಲಿ ಬಿಜೆಪಿ ಮುಖಂಡ ಡ್ರಿಪ್ ಸಿದ್ದನಾಯ್ಕ ಎಂಬವರಿಗೆ ಸೇರಿದ ಜಮೀನಿನ ಶೆಡ್‌ನಲ್ಲಿ ಸುಮಾರು 50 ಲಕ್ಷ ರು. ಗಳನ್ನು ಚುನಾವಣಾ ಅಧಿಕಾರಿಗಳ ತಂಡದ ಮುಖ್ಯಸ್ಥ ಬಾಲಾಜಿ ಮತ್ತು ತಂಡದವರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ, ಈ ಹಣವನ್ನು ಪಟ್ಟಣದ ಉಪ ಖಜಾನೆಯಲ್ಲಿ ಇಡಲಾಗಿದೆ ಎಂದು ತಹಸೀಲ್ದಾರ್ ಮಹೇಶ್ ತಿಳಿಸಿದ್ದಾರೆ. ಕಳೆದ ಹಲವು ದಿನಗಳಿಂದಲೂ ಚುನಾವಣಾ ಫ್ಲೆಯಿಂಗ್ ಸ್ಕಾ$್ವಡ್‌ಗೆ ಮಾಹಿತಿ ಲಭ್ಯವಾಗಿದ್ದು, ಈ ದಿನ ಅಧಿಕಾರಿಗಳು ಎಂ ಸ್ಯಾಂಡ್ ಲಾರಿಯಲ್ಲಿ ಹಣ ಮತದಾರರಿಗೆ ಹಂಚಲು ಬರುತ್ತಿದೆ ಎಂದು ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಚುನಾವಣಾ ಅಧಿಕಾರಿಗಳು ಜಮೀನಿನ ಶೆಡ್‌ನಲ್ಲಿಟ್ಟಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ.
undefined
ರಾಜ್ಯಾದ್ಯಂತ 230 ಕೋಟಿ ಜಪ್ತಿ
ಬೆಂಗಳೂರು (ಮೇ 09): ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023ರ ನೀತಿ ಸಂಹಿತೆ ಜಾರಿಯಾದ ನಂತರ ರಾಜ್ಯಾದ್ಯಂತ ಪೊಲೀಸರು ಮತ್ತು ಚುನಾವಣಾ ಅಧಿಕಾರಿಗಳು ಜಂಟಿಯಾಗಿ (ಫ್ಲೈಯಿಂಗ್ ಸ್ಕ್ವಾಡ್) 230 ಕೋಟಿ ರೂ. ಮೌಲ್ಯದ ನಗದು ಹಾಗೂ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಮಾಹಿತಿ ನೀಡಿದರು.
ಈ ಕುರಿತು ಮಂಗಳವಾರ ಸುದದ್ದಿಗೋಷ್ಠಿಯಲ್ಲಿ ಮಾಹಿತಿ ನಿಡಿದ ಎಡಿಜಿಪಿ ಅಲೋಕ್ ಕುಮಾರ್, ಕೇಂದ್ರ ಚುನಾವಣಾ ಆಯೋಗ ಸೂಚನೆ ಮೇರೆಗೆ 29 ಮಾರ್ಚ್ ನಂತರ ಫ್ಲೈಯಿಂಗ್ ಸ್ಕ್ವಾಂಡ್ ಕಾರ್ಯಾಚರಣೆ ಮಾಡಲಾಗುತ್ತಿದೆ. 2,800 ಕ್ಕೂ ಹೆಚ್ಚು ಎಫ್ ಐಆರ್ ದಾಖಲಾಗಿದ್ದು, 230 ಕೋಟಿ ನಗದು ಹಣ ಜಪ್ತಿ ಮಾಡಲಾಗಿದೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ 69 ಕೋಟಿ ಹಣ ಜಪ್ತಿಯಾಗಿತ್ತು. ಆದರೆ, ಈ ಬಾರಿ ಕಳೆದ ಚುನಾವಣೆಗಿಂದ ನಾಲ್ಕು ಪಟ್ಟು ಹೆಚ್ಚು ಹಣ ಸೀಜ್ ಮಾಡಲಾಗಿದೆ ಎಂದು ತಿಳಿಸಿದರು.
Bengaluru- ಸ್ಲಂಗಳಲ್ಲಿ ಸಿಕ್ತು 20 ಕೋಟಿ ಮೌಲ್ಯದ ಡ್ರಗ್ಸ್! ಚುನಾವಣೇಲಿ ಡ್ರಗ್ಸ್ ನಶೆಯಲ್ಲಿ ತೇಲಾಡಲು ಪ್ಲ್ಯಾನ್!
ಭದ್ರತೆಗಾಗಿ 1.56 ಲಕ್ಷ ಸಿಬ್ಬಂದಿ ನಿಯೋಜನೆ: ರಾಜ್ಯಾದ್ಯಂತ ವಿಧಾನಸಭೆ ಚುನಾವಣೆ ಮತದಾನ ಹಿನ್ನಲೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 1.56 ಲಕ್ಷ ಅಧಿಕಾರಿ, ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಮಣಿಪುರ, ಮೀಜಾರೋಂ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ಸಿಬ್ಬಂದಿ ಬಂದಿದ್ದಾರೆ. ಒಟ್ಟು 180 ಕೆಎಸ್‌ಆರ್‌ಪಿಎಫ್ ತುಕಡಿ ನಿಯೋಜನೆಗೊಂಡಿದೆ. ಇಂಟರ್ ಸ್ಟೇಟ್ ಬಾರ್ಡರ್ ಗಳಲ್ಲಿ ಚೆಕ್ ಪೋಸ್ಟ್ ಹಾಕಲಾಗಿದೆ. ಈವರೆಗೆ 230 ಕೋಟಿ ಮೌಲ್ಯದ ಹಣ ಮತ್ತು ವಸ್ತುಗಳಲ್ಲಿ ಬರೋಬ್ಬರಿ 105 ಕೋಟಿ ನಗದು ಹಣ ಜಪ್ತಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಹೊರ ರಾಜ್ಯದವರ ಪ್ರವೇಶಕ್ಕೆ ನಿಷೇಧ: 185 ಬಾರ್ಡರ್ ಚೆಕ್ ಪೋಸ್ಟ್ ಗಳಲ್ಲಿ ನೆರೆ ರಾಜ್ಯಗಳ ಅಧಿಕಾರಿಗಳ ಸಂಪರ್ಕದಲ್ಲಿದ್ದೀವಿ. ಅಕ್ರಮ ಮತದಾನದ ಸಲುವಾಗಿ ಹೊರಗಿನಿಂದ ಬರುವವರನ್ನ ತಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಕರ್ನಾಟಕದ ನಿವಾಸಿಗಳಾಗಿದ್ದು, ಹೊರ ರಾಜ್ಯದಲ್ಲಿ ಕೆಲಸಕ್ಕೆ ಹೋಗಿದ್ದವರು ಮತದಾನಕ್ಕೆ ಬರುವಂತಿದ್ದರೆ ಅವರನ್ನು ಮಾತ್ರ ರಾಜ್ಯದ ಒಳಗೆ ಸೇರಿಸುತ್ತೇವೆ. ಉಳಿದಂತೆ ಹೊರಗಿನ ರಾಜ್ಯದ ಜನರನ್ನ ತಡೆದು ವಾಪಸ್ ಕಳಿಸುವಂತೆ ಚೆಕ್ ಪೋಸ್ಟ್ ಗಳಲ್ಲಿ ಸೂಚನೆ ನೀಡಲಾಗಿದೆ. ಅಕ್ರಮ ಮತದಾನ ತಡೆಯುವ ಸಲುವಾಗಿ ಹೊರಗಿನ ರಾಜ್ಯದವರು ಒಳಗೆ ಬರದಂತೆ ತಡೆಯಲು ಹದ್ದಿನ ಕಣ್ಣಿಡಲಾಗಿದೆ.
730 ರೌಡಿಶೀಟರ್‌ಗಳ ಗಡಿಪಾರು: ಇಡೀ ರಾಜ್ಯದಲ್ಲಿ ಎಲ್ಲಾ ಜೈಲುಗಳನ್ನು ಎರಡೆರಡು ಬಾರಿ ರೈಡ್ ಮಾಡಲಾಗಿದೆ. ಬಳ್ಳಾರಿ ಸೆಂಟ್ರಲ್ ಜೈಲ್ , ಬೆಳಗಾವಿ , ಮೈಸೂರು ಸೆಂಟ್ರಲ್ ಜೈಲ್ ಗಳನ್ನ ರೇಡ್ ಮಾಡಲಾಗಿದೆ. ನಿನ್ನೆ ಬೆಳಗ್ಗೆ ಎಲ್ಲಾ ರೌಡಿಗಳ ಮನೆ ಮೇಲೆ ರೇಡ್ ಮಾಡಲಾಗಿದೆ. ಗಡಿಪಾರಾಗಿದ್ದವರು ಮತ್ತೆ ಮನೆ ಸೇರ್ಕೊಂಡಿದ್ದಾರೆ ಅಂತ ಚೆಕ್ ಮಾಡಲಾಗಿದೆ. ಮೈಸೂರಲ್ಲಿ ಒಬ್ಬ ಗಡೀಪಾರಾಗಿದ್ದವನು ಸಿಕ್ಕಿಬಿದ್ದಿದ್ದಾನೆ. 50,000 ಕ್ಕು ಹೆಚ್ಚು ಜನರಿಂದ ಬಾಂಡ್ ಬರೆಸಿಕೊಳ್ಳಲಾಗಿದೆ. 730ಕ್ಕೂ ಹೆಚ್ಚು ರೌಡಿಗಳನ್ನು ಗಡಿಪಾರು ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದರು.