
ವರದಿ: ರವಿಕುಮಾರ್ ಏಷ್ಯಾ ನೆಟ್ ಸುವರ್ಣ ನ್ಯೂಸ್
ಚಿಕ್ಕಬಳ್ಳಾಪುರ, (ಜುಲೈ 23): ರಾಜ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಜಿಲ್ಲೆಯಲ್ಲಿ ಹೆಚ್ಚಾಗಿ ಡೆಂಗ್ಯೂ ಜ್ವರ ಉಲ್ಭಣವಾಗಿದ್ದು, ಓರ್ವ ಬಾಲಕಿ ಮೃತಪಟ್ಟಿದ್ದಾಳೆ.
ಹೌದು.. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 73 ಅಧಿಕೃತ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು, ಒಂದು ಕಡೆ ಜನರನ್ನು ಆತಂಕ ಮೂಡಿಸಿದ್ರೆ , ಮತ್ತೊಂದೆಡೆ ಅಧಿಕಾರಿಗಳ ನಿದ್ದೆ ಗಡೆಸಿದೆ. ಜೊತೆಗೆ ಚಿಂತಾಮಣಿ ನಗರದ 20ನೇ ವಾರ್ಡನಲ್ಲಿ 5 ವರ್ಷದ ಬಾಲಕಿ ನಿವೇಧಿತಾ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದು ಹೆಚ್ಚು ಭಯಬೀತರಾಗುವಂತೆ ಮಾಡಿದೆ.
Dengue: ಮಕ್ಕಳಲ್ಲಿ ಈ ಲಕ್ಷಣ ಕಾಣಿಸಿಕೊಂಡ್ರೆ ತಕ್ಷಣ ವೈದ್ಯರಿಗೆ ತೋರ್ಸಿ
5 ವರ್ಷದ ಬಾಲಕಿ ಬಲಿ
ಡೆಂಗ್ಯೂ ಪ್ರಕರಣಗಳು ಒಂದು ಕಡೆ ಹೆಚ್ಚಾಗುತ್ತಿದ್ದರೇ ಮತ್ತೊಂದು ಕಡೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ 20ನೇ ವಾರ್ಡನಲ್ಲಿ 5 ವರ್ಷದ ಬಾಲಕಿ ನಿವೇಧಿತಾ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದು ಹೆಚ್ಚು ಭಯಬೀತರಾಗುವಂತೆ ಮಾಡಿದೆ. ಹೀಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಡೆಂಗ್ಯೂ ಜ್ವರದ ಟೆಸ್ಟಿಂಗ್ ಹೆಚ್ಚಳ ಮಾಡಿದೆ, ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ಆಸ್ಪತ್ರೆಗೆ ಬರೋ ರೋಗಿಗಳ ಮೇಲೆ ಹೆಚ್ಚಿನ ನಿಗಾವಹಿಸಿದೆ. ಜೊತೆಗೆ ಸಂಶಯ ಬಂದ ಜ್ವರದ ಪ್ರಕರಣಗಳನ್ನು ಕಡೆಗಣಿಸದಂತೆ ಸಾರ್ವಜನಿಕರಿಗೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಕಳೆದ ಎರಡೂವರೆ ವರ್ಷಗಳಿಂದ ಕೊರೊನಾ ಹೆಚ್ಚಾಗಿ ಜನ ಜೀವನ ಏರುಪೇರು ಆಗುವಂತೆ ಆಗಿತ್ತು, ಇತ್ತಿಚಿಗೆ ತಾನೆ ಕೊರೊನಾ ಕಡಿಮೆಯಾಗಿ ಜನ ಜೀವನ ಸುಧಾರಿಸಿಕೊಳ್ತಿರುವಾಗಲೇ ಚಿಕ್ಕಬಳ್ಳಾಪುರ ಜಿಲೆಯಲ್ಲಿ ಈಗ ಡೆಂಗ್ಯೂ ಜ್ವರ ಉಲ್ಬಣವಾಗಿದ್ದು, ಆತಂಕ ಮೂಡಿಸಿದೆ. ಹೀಗಾಗಿ ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿದ್ದು, ತಪಾಸಣೆ ಮಾಡಲು ತೊಡಗಿದ್ದಾರೆ. ಜ್ವರ ಕಾಣಿಸಿಕೊಂಡ ಕೂಡಲೇ ಆಸ್ಪ್ತತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ ಜೊತೆಗೆವ ಕೂಡಲೇ ರಕ್ತ ಪರೀಕ್ಷೆ ಮಾಡಿಸಿ ಇದರಿಂದ ಡೆಂಗ್ಯೂ ದಿಂದ ಆಗೋ ಅನಾಹುತ ತಡೆಯಬಹುದು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಮಹೇಶ್ ಕುಮಾರ್ ಹೇಳಿದ್ದಾರೆ.
ಡೆಂಗ್ಯೂ-ಮಲೇರಿಯಾ ತಡೆಗಟ್ಟಲು ಮಳೆಗಾಲದಲ್ಲಿ ಹೀಗಿರಲಿ ಆರೋಗ್ಯ ಕಾಳಜಿ
73 ಮಂದಿಗೆ ಡೆಂಗ್ಯೂ ಅಟ್ಯಾಕ್
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಡೆಂಗ್ಯೂ ಜ್ವರ ಹಬ್ಬಿದ್ದು, 73 ಮಂದಿಯಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ನಗರದಲ್ಲಿ 33 ಪ್ರಕರಣಗಳು, ಗ್ರಾಮಾಂತರದಲ್ಲಿ 14 ಪ್ರಕರಣಗಳು ಸೇರಿದಂತೆ ಶಿಡ್ಲಘಟ್ಟದಲ್ಲಿ 9, ಚಿಂತಾಮಣಿಯಲ್ಲಿ 3, ಬಾಗೇಪಲ್ಲಿಯಲ್ಲಿ 6, ಗೌರಿಬಿದನೂರಿನಲ್ಲಿ 8 ಪ್ರಕಣಗಳು ಪತ್ತೆಯಾಗಿವೆ. ಇದರಿಂದ ಎಚ್ಚೆತ್ತುಕೊಂಡಿರೋ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಎಲ್ಲರ ಮೇಲೆ ನಿಗಾವಹಿಸಿದೆ.
ಡೆಂಗ್ಯೂ ಜೊತೆಗೆ ಚಿಕನ್ ಗುನ್ಯಾ, ಮಲೇರಿಯಾ ಕೂಡ ಪತ್ತೆ
ಇನ್ನೂ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ 73 ಮಂದಿಗೆ ಡೆಂಗ್ಯೂ ಪತ್ತೆ ಜೊತೆಗೆ 12 ಮಂದಿಗೆ ಚಿಕನ್ ಗುನ್ಯಾ ಕೂಡ ಕಂಡುಬಂದಿದೆ. ಅಲ್ಲದೇ ಇಬ್ಬರಲ್ಲಿ ಮಲೇರಿಯಾ ಜ್ವರ ಕೂಡ ಕಾಣಿಸಿಕೊಂಡಿದೆ. ಇದರಿಂದಾಗಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಎಲ್ಲೆಡೆ ಅಲರ್ಟ್
ಆಗಿದ್ದಾರೆ.