ಲಾಕ್‌ಡೌನ್‌ ಎಫೆಕ್ಟ್‌: ಶಿರಹಟ್ಟಿಯಲ್ಲಿ ಕೂಲಿ ಕಾರ್ಮಿಕರು ಲಾಕ್‌, ತುತ್ತು ಅನ್ನಕ್ಕೂ ಪರದಾಟ..!

Kannadaprabha News   | Asianet News
Published : May 16, 2020, 09:52 AM ISTUpdated : May 18, 2020, 05:22 PM IST
ಲಾಕ್‌ಡೌನ್‌ ಎಫೆಕ್ಟ್‌: ಶಿರಹಟ್ಟಿಯಲ್ಲಿ ಕೂಲಿ ಕಾರ್ಮಿಕರು ಲಾಕ್‌, ತುತ್ತು ಅನ್ನಕ್ಕೂ ಪರದಾಟ..!

ಸಾರಾಂಶ

ತುತ್ತು ಅನ್ನಕ್ಕೂ ಸಂಕಷ್ಟ ಅನುಭವಿಸುತ್ತಿರುವ ಕ್ರಷರ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು| ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಲಾಕ್‌ ಆದ ಕಾರ್ಮಿಕರು| ತಾಲೂಕು ಆಡಳಿತ ಕೂಡಲೇ ಕಾರ್ಯಪ್ರವೃತ್ತರಾಗಿ ಶಿರಹಟ್ಟಿಯಲ್ಲಿ ಲಾಕ್‌ ಆಗಿರುವ ಕಾರ್ಮಿಕರನ್ನು ತವರಿಗೆ ಕಳುಹಿಸಿಕೊಡಲು ಕ್ರಮ ಕೈಗೊಳ್ಳಬೇಕಿದೆ|

ಮಹದೇವಪ್ಪ ಎಂ. ಸ್ವಾಮಿ

ಶಿರಹಟ್ಟಿ(ಮೇ.16): ಜಾರ್ಖಂಡ, ಉತ್ತರ ಪ್ರದೇಶ, ಬಿಹಾರದಿಂದ ಕೆಲಸ ಅರಸಿ ಶಿರಹಟ್ಟಿಗೆ ಬಂದಿರುವ 30ಕ್ಕೂ ಹೆಚ್ಚು ಕಾರ್ಮಿಕರು ಮರಳಿ ತಮ್ಮೂರಿಗೆ ಹಿಂದಿರುಗಲು ಪಾಸ್‌ ಸಿಗದೇ ಶಿರಹಟ್ಟಿಯಲ್ಲಿಯೇ ಲಾಕ್‌ ಆಗಿದ್ದಾರೆ.
ಶಿರಹಟ್ಟಿ ಸುತ್ತಮುತ್ತಲಿನ ನಾಲ್ಕೈದು ಕ್ರಷರ್‌ಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ದುಡಿಮೆ ಇಲ್ಲದೇ ಪರದಾಡುತ್ತಿದ್ದು, ತಮ್ಮೂರಿಗೆ ಹೋಗಲು ಅಧಿಕಾರಿಗಳು ವ್ಯವಸ್ಥೆ ಮಾಡಿಕೊಡುತ್ತಿಲ್ಲ. ಊಟ, ವಸತಿ ವ್ಯವಸ್ಥೆಗೆ ತೊಂದರೆಯಾಗಿದ್ದು, ಹೇಗಾದರೂ ಮಾಡಿ ನಮ್ಮನ್ನು ಊರಿಗೆ ಕಳುಹಿಸುವಂತೆ ಗೋಗರೆಯುತ್ತಿದ್ದಾರೆ.

ಲಾಕ್‌ಡೌನ್‌ನಲ್ಲಿ ಸಿಲುಕಿರುವ ಕಾರ್ಮಿಕರು ಹೊಲವೊಂದರಲ್ಲಿ ಚಿಕ್ಕ ಚಿಕ್ಕ ಟೆಂಟ್‌ಗಳಲ್ಲಿ ಜೀವನ ಸಾಗಿಸುತ್ತಿದ್ದು, ಇದೀಗ ಆಹಾರದ ಕೊರತೆ ಎದುರಾಗಿದೆ. ಹೊರ ರಾಜ್ಯದವರಾದ ಹಿನ್ನೆಲೆನಲ್ಲಿ ಸ್ಥಳೀಯವಾಗಿ ಯಾವುದೇ ಸಮಗ್ರ ಮಾಹಿತಿ ಇವರಿಗೆ ಸಿಗದ ಕಾರಣ ಗೋಳಾಡುತ್ತಿದ್ದಾರೆ. ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರಷರ್‌ಗಳ ಸಂಪೂರ್ಣ ಮಾಹಿತಿ ತಹಸೀಲ್ದಾರ್‌ ಬಳಿ ಇದ್ದರೂ ತಾಲೂಕು ಆಡಳಿತ ಇಂತವರನ್ನು ಗುರುತಿಸಿ ಆಹಾರ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲು ಹಿಂದೇಟು ಹಾಕುತ್ತಿರುವುದಾದರೂ ಏಕೆ ಎಂಬ ಪ್ರಶ್ನೆ ಕಾಡುತ್ತಿದೆ.

'ಕೊರೋನಾದಿಂದ ತತ್ತರಿಸಿದ ರೈತನಿಗೆ ಸರ್ಕಾರ ಆಸರೆಯಾಗಬೇಕಿದೆ'

ನಮ್ಮನ್ನು ಊರಿಗೆ ಕಳಿಸಿ:

ಮನೆಯಲ್ಲಿ ನಮ್ಮ ತಂಗಿಯ ಮದುವೆ ಇದೆ. ವಯಸ್ಸಾದ ತಂದೆ, ತಾಯಿ, ಮಕ್ಕಳನ್ನು ಬಿಟ್ಟು ದುಡಿಮೆಗೆಂದು ಬಂದಿದ್ದು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೇರೆಲ್ಲೂ ಕೆಲಸವೂ ಇಲ್ಲದೇ, ವಾಪಸ್‌ ತಮ್ಮ ಊರಿಗೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ. ಪೊಲೀಸ್‌ ಠಾಣೆಗೆ ಭೇಟಿ ನೀಡಿ ಮಾಹಿತಿ ನೀಡಿದ್ದು, ತಹಸೀಲ್ದಾರರನ್ನು ಭೇಟಿಯಾಗುವಂತೆ ತಿಳಿಸಿದ್ದಾರೆ. ತಹಸೀಲ್ದಾರ್‌ ಯಾರೆಂಬುದು ನಮಗೆ ಗೊತ್ತಿಲ್ಲ. ಸರ್ಕಾರ ನೀಡಿದ ಹೆಲ್ಪ್‌ ಲೈನ್‌ ನಂಬರಿಗೂ ಸಂಪರ್ಕಿಸಿದ್ದು ಪ್ರಯೋಜನವಾಗಿಲ್ಲ. ಹೇಗಾದರೂ ಮಾಡಿ ನಮ್ಮನ್ನು ಊರಿಗೆ ಕಳುಹಿಸಿಕೊಡಿ ಎಂದು ಜಾರ್ಖಂಡ ರಾಜ್ಯದ ಕಾರ್ಮಿಕ ಪಿಂಟುನಾಥ್‌ ಗೋಸ್ವಾಮಿ, ಅಶೋಕಕುಮಾರ ಗೋಸ್ವಾಮಿ ಕೈಮುಗಿದು ಕೇಳಿಕೊಳ್ಳುತ್ತಿದ್ದಾರೆ.

ನಮ್ಮನ್ನು ಎಲ್ಲ ರೀತಿಯ ಚೆಕ್‌ಅಪ್‌ ಮಾಡಿಸಿ ಹೇಗಾದರೂ ಮಾಡಿ ನಮ್ಮನ್ನು ನಮ್ಮ ಊರಿಗೆ ಕಳುಹಿಸಿಕೊಟ್ಟರೆ ಅನುಕೂಲವಾಗಲಿದೆ ಎಂದು ಒತ್ತಾಯಿಸುತ್ತಿದ್ದು, ಈಗಾಗಲೆ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಕಾರ್ಮಿಕರ ಸಂಪೂರ್ಣ ಮಾಹಿತಿ ಪಡೆದಿದ್ದು, ಸೇವಾಸಿಂಧು ಆ್ಯಪ್‌ನಲ್ಲಿ ದಾಖಲಿಸಲಾಗಿದೆ. ಕಾರ್ಮಿಕರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕ್ರಷರ್‌ ಮಾಲೀಕರೆ ಮಾತಾಲೂಕು ಆಡಳಿತ ಕೂಡಲೇ ಕಾರ್ಯಪ್ರವೃತ್ತರಾಗಿ ಶಿರಹಟ್ಟಿಯಲ್ಲಿ ಲಾಕ್‌ ಆಗಿರುವ ಕಾರ್ಮಿಕರನ್ನು ತವರಿಗೆ ಕಳುಹಿಸಿಕೊಡಲು ಕ್ರಮ ಕೈಗೊಳ್ಳಬೇಕಿದೆ. ಈ ಕುರಿತು ಮತ್ತೊಮ್ಮೆ ವಿಚಾರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣನವರ ಅವರು ಹೇಳಿದ್ದಾರೆ. 
 

PREV
click me!

Recommended Stories

ಕಾರವಾರ: ಉಂಡ‌ ಮನೆಗೆ ದ್ರೋಹ; ಮನೆ ಕೆಲಸದವನಿಂದಲೇ ಲಕ್ಷಾಂತರ ರೂಪಾಯಿ ಕದ್ದವನ ಬಂಧನ
ಬೆಂಗಳೂರಿನಲ್ಲಿ ಇಷ್ಟೊಂದು ಚಳಿಗೆ ಕಾರಣವೇನು? ಮುಂದಿನ ಮೂರು ದಿನ ಉತ್ತರ ಕರ್ನಾಟಕದಲ್ಲಿ ಶೀತಗಾಳಿ!