ಮುಂಬೈನಿಂದ ಬಂದ ತೀರ್ಥಳ್ಳಿಯ ವ್ಯಕ್ತಿಗೆ ಕೊರೋನಾ ಸೋಂಕು ದೃಢ

By Kannadaprabha News  |  First Published May 16, 2020, 9:49 AM IST

ಮುಂಬೈನಿಂದ ಬಂದ ತೀರ್ಥಳ್ಳಿಯ ವ್ಯಕ್ತಿಗೆ ಕೊರೋನಾ ಸೋಂಕು ದೃಢ | ಶಿವಮೊಗ್ಗದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 9 ಕ್ಕೆ ಏರಿಕೆ | ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


ಶಿವಮೊಗ್ಗ (ಮೇ. 16):  ಮುಂಬೈನಿಂದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಗೆ ಆಗಮಿಸಿದ ವ್ಯಕ್ತಿಯೊಬ್ಬರಿಗೆ ಶುಕ್ರವಾರ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದಕ್ಕೂ ಮೊದಲು ಜಿಲ್ಲೆಯಲ್ಲಿ 8 ಮಂದಿ ತಬ್ಲೀಘಿಗಳಿಗೆ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 9 ಕ್ಕೆ ಏರಿದೆ. ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಂಬೈನ ಹೋಟೆಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಲಾಕ್‌ಡೌನ್‌ನಿಂದ ಕಂಗಾಲಾಗಿದ. ಅಲ್ಲಿಂದ ಊರಿಗೆ ಬರಲು ಇನ್ನಿಲ್ಲದ ಯತ್ನ ನಡೆಸಿದರೂ ಸಾಧ್ಯವಾಗದೆ ಇದ್ದಾಗ ಯಾವ್ಯಾವುದೋ ಮಾರ್ಗದ ಮೂಲಕ ದಾವಣಗೆರೆಯ ತನ್ನ ಸೋದರಿ ಮನೆಗೆ ಬಂದಿದ್ದ.

Tap to resize

Latest Videos

ವಿವಿಧ ರಾಜ್ಯಗಳಿಂದ ಆಗಮಿಸಿದ 592 ಮಂದಿ ಕ್ವಾರಂಟೈನ್

ಅಲ್ಲಿಂದ ಲಾರಿಯ ಮೂಲಕ ತೀರ್ಥಹಳ್ಳಿಯ ಮುಳಬಾಗಿಲು ಗ್ರಾಪಂ ವ್ಯಾಪ್ತಿಯ ತನ್ನ ಸ್ವಂತ ಊರಾದ ಹಳ್ಳಿಬೈಲು ಗ್ರಾಮಕ್ಕೆ ಮೇ 11 ರಂದು ಆಗಮಿಸಿದ್ದ. ಮಾರನೇ ದಿನ ಈತನ ಕುರಿತು ಸ್ಥಳೀಯರು ಮಾಹಿತಿ ನೀಡಿದ ಬಳಿಕ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯವರು ಕ್ವಾರಂಟೈನ್‌ಗೆ ಒಳಪಡಿಸಿದರು.

click me!