ಇಂದಿರಾ ಕ್ಯಾಂಟಿನ್‌ನಿಂದ 5.25 ಲಕ್ಷ ಶುಲ್ಕ ಬಾಕಿ

Published : Jan 21, 2020, 08:17 AM IST
ಇಂದಿರಾ ಕ್ಯಾಂಟಿನ್‌ನಿಂದ  5.25 ಲಕ್ಷ ಶುಲ್ಕ ಬಾಕಿ

ಸಾರಾಂಶ

ಇಂದಿರಾ ಕ್ಯಾಂಟೀನ್ ಲಕ್ಷಾಂತರ ರು. ಶುಲ್ಕ ಬಾಕಿ ಉಳಿಸಿಕೊಂಡಿದೆ. ಜಲಮಂಡಳಿಗೆ ಲಕ್ಷ ಲಕ್ಷ ಶುಲ್ಕ ಪಾವತಿ ಮಾಡಬೇಕಿದೆ. 

ಬೆಂಗಳೂರು [ಜ.21]:  ಮಹದೇವಪುರ ವಲಯದ ವ್ಯಾಪ್ತಿಯ ಕೆಲ ಇಂದಿರಾ ಕ್ಯಾಂಟಿನ್‌ಗಳಿಂದ ಬೆಂಗಳೂರು ಜಲಮಂಡಳಿಗೆ 5.25 ಲಕ್ಷ ರು. ನೀರಿನ ಶುಲ್ಕ ಬಾಕಿ ಉಳಿಸಿಕೊಳ್ಳಲಾಗಿದೆ.

ಈ ಸಂಬಂಧ ಇಂದಿರಾ ಕ್ಯಾಂಟಿನ್‌ ಗುತ್ತಿಗೆದಾರ ಬಲದೇವ್‌ ಸಿಂಗ್‌ ಮಹದೇವಪುರ ಜಂಟಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಜಲಮಂಡಳಿ ವಿಧಿಸುತ್ತಿರುವ ನೀರಿನ ಶುಲ್ಕ ದುಬಾರಿಯಾಗಿದ್ದು, ಪಾವತಿಸಲು ಹೊರೆಯಾಗಿದೆ. ಖಾಸಗಿ ಹೋಟೆಲ್‌ಗೆಗಳಿಗೆ ವಿಧಿಸುವ ವಾಣಿಜ್ಯ ಶುಲ್ಕವನ್ನೇ ಇಂದಿರಾ ಕ್ಯಾಂಟಿನ್‌ಗೂ ವಿಧಿಸಲಾಗುತ್ತಿದೆ.

ಬದಲಾಗುತ್ತಾ ಇಂದಿರಾ ಕ್ಯಾಂಟೀನ್‌ ಹೆಸರು : ಸಿಎಂ ನಿರ್ಧಾರವೇನು?

ಹೀಗಾಗಿ ಶುಲ್ಕ ಪಾವತಿಸಲು ಸಮಸ್ಯೆಯಾಗುತ್ತಿದೆ. ವಸತಿ ಕಟ್ಟಡಗಳಿಗೆ ವಿಧಿಸುವ ನೀರಿನ ಶುಲ್ಕವನ್ನೇ ಇಂದಿರಾ ಕ್ಯಾಂಟಿನ್‌ಗಳಿಗೂ ವಿಧಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ಗೆ ಸ್ಥಳೀಯರ ಹೆಸರು...

ಈ ನಡುವೆ ಜಲಮಂಡಳಿಯು ಮಹದೇವಪುರ ವಲಯ ವ್ಯಾಪ್ತಿಯ ಕೆಲ ಇಂದಿರಾ ಕ್ಯಾಂಟಿನ್‌ಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಿದೆ. ರಾಧಾಕೃಷ್ಣ ವಾರ್ಡ್‌, ವಸಂತನಗರ, ಯಲಹಂಕ, ಬ್ಯಾಟರಾಯನಪುರ ಸೇರಿದಂತೆ ಕೆಲ ಕಡೆ ಸಮಸ್ಯೆಯಾಗಿದೆ.

PREV
click me!

Recommended Stories

28 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿ ಮೋಡ ಬಿತ್ತನೆ ಆರಂಭ, 'ಇದು ಸೂಕ್ತ ಸಮಯವಲ್ಲ' ವಾರ್ನಿಂಗ್‌ ನೀಡಿದ IMD
Gold Rate Today: ಬಂಗಾರದ ಬೆಲೆ ದಿಢೀರ್ ₹1,860 ಇಳಿಕೆ! ಗೃಹಿಣಿಯರು ಫುಲ್ ಖುಷ್, ಇಂದಿನ ರೇಟ್ ಎಷ್ಟು?