
ತುಮಕೂರು(ಆ.14): ನಗರದ ಕ್ಯಾತ್ಸಂದ್ರದಲ್ಲಿರುವ ಸನ್ ರೈಸ್ ಸೌಹಾರ್ದ- ಪತ್ತಿನ ಸಹಕಾರ ಸಂಘ ನಿಯಮಿತ ಹಾಗೂ ಸ್ನೇಹಿತರು ನೆರೆ ಪರಿಹಾರ ವಸ್ತುಗಳನ್ನು ಸಂಗ್ರಹಿಸಿದರು.
ಚಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನೆರೆ ಸಂತ್ರಸ್ತರಿಗೆ 25 ಸಾವಿರ ಚಪಾತಿ, ಬಿಸ್ಕೆಟ್, ವಾಟರ್ ಬಾಟಲ್, ಚಾಪೆ, ಹೊದಿಕೆ, ಮಹಿಳೆ ಪುರುಷ, ಹಾಗೂ ಮಕ್ಕಳಿಗೆ ಉಡುಪುಗಳು 5 ಪ್ಯಾಕೆಟ್ ಅಕ್ಕಿ, ಔಷಧಿ ಸೇರಿದಂತೆ ಸಾಮಗ್ರಿಗಳನ್ನು ಹೊತ್ತು ಹೊರಡುವ ವಾಹನಕ್ಕೆ ಎಸ್‌ಐಟಿ ಆವರಣದಿಂದ ಶಾಸಕ ಜ್ಯೋತಿಗಣೇಶ್ ಚಾಲನೆ ನೀಡಿದರು.
ಪಾಲಿಕೆ ಸದಸ್ಯ ಬಿ.ಜಿ ಕೃಷ್ಣಪ್ಪ, ಸಂಘದ ಅಧ್ಯಕ್ಷ ಸಿ.ಟಿ ವಿಜಯ್, ಉಪಾಧ್ಯಕ್ಷ ಚಂದ್ರಮೋಹನ್ ರೆಡ್ಡಿ ಸೇರಿದಂತೆ ಮತ್ತಿತರು ಇದ್ದಾರೆ.