ಕೋಲಾರ, ಗದಗದಲ್ಲಿ ಮತ್ತೆ 5 ದಿನ ಕಠಿಣ ಲಾಕ್‌

By Kannadaprabha News  |  First Published May 26, 2021, 7:44 AM IST
  • ಕೊರೋನಾ ನಿಯಂತ್ರಣಕ್ಕೆ ಹೋರಾಟ ಮಾಡುತ್ತಿರುವ ಜಿಲ್ಲಾಡಳಿತಗಳು
  • ಕೋಲಾರ ಮತ್ತು ಗದಗದಲ್ಲಿ ಮತ್ತೆ ಮೇ 31ರ ವರೆಗೆ ಕಠಿಣ ಲಾಕ್‌ಡೌನ್‌ ವಿಸ್ತರಣೆ
  •  ಮೇ 27ರ ಬೆಳಗ್ಗೆ 10ರಿಂದ 31ರ ಬೆಳಗ್ಗೆ 6ರವರೆಗೆ ಕಠಿಣ ಲಾಕ್‌ಡೌನ್‌

ಕೋಲಾರ/ಗದಗ (ಮೇ.26): ಕೊರೋನಾ ನಿಯಂತ್ರಣಕ್ಕೆ ಹೋರಾಟ ಮಾಡುತ್ತಿರುವ ಜಿಲ್ಲಾಡಳಿತಗಳು ಕೋಲಾರ ಮತ್ತು ಗದಗದಲ್ಲಿ ಮತ್ತೆ ಮೇ 31ರ ವರೆಗೆ ಕಠಿಣ ಲಾಕ್‌ಡೌನ್‌ ವಿಸ್ತರಿಸಲಾಗಿದೆ. 

ಈ ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಈ ಮೊದಲು 1 ವಾರ ಸಂಪೂರ್ಣ ಲಾಕ್‌ಡೌನ್‌ ಘೋಷಣೆ ಮಾಡಲಾಗಿತ್ತು.

Latest Videos

undefined

ಮೈಸೂರಿನ 35 ಗ್ರಾಮಗಳನ್ನು ಮುಟ್ಟದ ಕೊರೋನಾ : ಮುನ್ನೆಚ್ಚರಿಕೆಯೇ ಕಾರಣ

 ಮೇ 27ರ ಬೆಳಗ್ಗೆ 10ರಿಂದ 31ರ ಬೆಳಗ್ಗೆ 6ರವರೆಗೆ ಕಠಿಣ ಲಾಕ್‌ಡೌನ್‌ ಇರಲಿದೆ. ಗದಗ ಜಿಲ್ಲೆಯಲ್ಲಿ 5 ದಿನ ಅಗತ್ಯ ವಸ್ತು ಸಹ ಸಿಗುವುದಿಲ್ಲ.

ರಾಜ್ಯದಲ್ಲಿಯೂ ಕೂಡ ಜೂನ್ 7ರವರೆಗೆ ಸೆಮಿ ಲಾಕ್‌ಡೌನ್ ವಿಸ್ತರಣೆಯಾಗಿದೆ. ಸದ್ಯ ಕೊರೋನಾ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದ್ದು, ಇದೀಗ ಜಿಲ್ಲಾವಾರು ಲಾಕ್‌ಡೌನ್ ಕೂಡ ಮಾಡಲಾಗುತ್ತಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!