ಮಂಗಳೂರು: ಸರ್ಕಾರಿ ಜಾಗದಲ್ಲೇ ಕೋಳಿ ಅಂಕ..!

Published : Aug 03, 2019, 12:46 PM IST
ಮಂಗಳೂರು: ಸರ್ಕಾರಿ ಜಾಗದಲ್ಲೇ ಕೋಳಿ ಅಂಕ..!

ಸಾರಾಂಶ

ಕೋಳಿ ಅಂಕ ಅಡ್ಡೆಗೆ ದಾಳಿ ಮಾಡಿದ ಪೊಲೀಸರು 5 ಜನರನ್ನು ಬಂಧಿಸಿ, 10 ಕೋಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಸರ್ಕಾರಿ ಜಾಗದಲ್ಲೇ ಹಣ ಪಣಕ್ಕಿಟ್ಟು ಕೋಳಿ ಅಂಕ ಆಡುತ್ತಿದ್ದರು. ಅನಧಿಕೃತವಾಗಿ ಕೋಳಿ ಅಂಕ ನಡೆಸುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿ ದಾಳಿ ನಡೆಸಲಾಗಿದೆ.

ಮಂಗಳೂರು(ಆ.03): ಕೋಳಿ ಅಂಕ ಅಡ್ಡೆಗೆ ದಾಳಿ ಮಾಡಿದ ಪೊಲೀಸರು 5 ಜನರನ್ನು ಬಂಧಿಸಿ, 10 ಕೋಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಸರ್ಕಾರಿ ಜಾಗದಲ್ಲೇ ಹಣ ಪಣಕ್ಕಿಟ್ಟು ಕೋಳಿ ಅಂಕ ಆಡುತ್ತಿದ್ದರು. ಅನಧಿಕೃತವಾಗಿ ಕೋಳಿ ಅಂಕ ನಡೆಸುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿ ದಾಳಿ ನಡೆಸಲಾಗಿದೆ.

ಕೋಳಿ ಅಂಕವೊಂದಕ್ಕೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು 5 ಮಂದಿಯನ್ನು ವಶಕ್ಕೆ ತೆಗೆದುಕೊಂಡು, 10 ಕೋಳಿಗಳನ್ನು ಸ್ವಾಧೀನಪಡಿಸಿಕೊಂಡ ಘಟನೆ ಬಜತ್ತೂರು ಗ್ರಾಮದ ಗಾಣದಮೂಲೆ ಎಂಬಲ್ಲಿ ಗುರುವಾರ ನಡೆದಿದೆ.

ಮಾಜಿ ಸೈನಿಕನಿಂದ ಸಹೋದರನ ಪತ್ನಿ, ಮಗನ ಮೇಲೆ ಗುಂಡಿನ ದಾಳಿ!

ಇಲ್ಲಿನ ಸರ್ಕಾರಿ ಜಾಗದಲ್ಲಿ ಹಣವನ್ನು ಪಣಕ್ಕಿಟ್ಟು ಅನಧಿಕೃತವಾಗಿ ಕೋಳಿ ಅಂಕ ನಡೆಸಲಾಗುತ್ತಿದೆ ಎಂಬ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ಪೊಲೀಸರು ಬಜತ್ತೂರಿನ ಶೀನಪ್ಪ, ಕೊಡಿಪ್ಪಾಡಿಯ ಬಾಬು ಸಪಲ್ಯ, ಕೌಕ್ರಾಡಿ ಕಟ್ಟೆಮಜಲಿನ ಸೇಸಪ್ಪ, ಬೆದ್ರೋಡಿಯ ನಿತಿನ್‌ ಕುಮಾರ್‌ ಹಾಗೂ ಕೌಕ್ರಾಡಿಯ ನಾಗೇಶ್‌ ಎಂಬವರನ್ನು ವಶಕ್ಕೆ ಪಡೆದು, 10 ಅಂಕದ ಕೋಳಿಗಳನ್ನು ಹಾಗೂ ಜೂಜಾಟಕ್ಕೆ ಬಳಸಿದ 840 ರುಪಾಯಿ ನಗದನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV
click me!

Recommended Stories

ಜಲಮಂಡಳಿ ನೀರಿನ ಬಿಲ್ ಬಾಕಿದಾರರಿಗೆ 'ಬಂಪರ್ ಆಫರ್': ಅಸಲು ಪಾವತಿಸಿದರೆ ಶೇ.100 ರಷ್ಟು ಬಡ್ಡಿ ಮನ್ನಾ!
ಕೇರಳ ನಿಯೋಗ ಕೋಗಿಲು ಬಡಾವಣೆಗೆ ಬಂದಿದ್ದು ರಾಜಕಾರಣ ಮಾಡಲು, ಹಣವನ್ನೇನು ಕೊಟ್ಟಿಲ್ಲ; ಸಚಿವ ಜಮೀರ್ ಕಿಡಿ!