ಸೋಮವಾರ ಶಾಲೆಗೆ ರಜೆ ಎಂದು ಪೋಷಕರಿಗೆ ತಿಳಿಯಲು ಶಿಕ್ಷಕಿ ಮಾಡಿದ್ದೇನು ಗೊತ್ತಾ..? ರಜೆ, ಹೋಂ ವರ್ಕ್ ಇತ್ಯಾದಿ ವಿಷಯಗಳನ್ನು ಬರಿಯುವುದಕ್ಕೆಂದೇ ಡೈರಿ ಇದ್ದರೂ, ಮಂಡೇ ಹಾಲಿಡೇ ಎಂದು ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳ ಕೈಗಳ ಮೇಲೆ ಬರೆದಿದ್ದು, ಶಿಕ್ಷಕಿಯ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.
ಕೊಪ್ಪಳ(ಆ.03): ಸೋಮವಾರ ಶಾಲೆಗೆ ರಜೆ ಎಂದು ಪೋಷಕರಿಗೆ ತಿಳಿಯಲು ಶಿಕ್ಷಕಿ ಮಾಡಿದ್ದೇನು ಗೊತ್ತಾ..? ರಜೆ, ಹೋಂ ವರ್ಕ್ ಇತ್ಯಾದಿ ವಿಷಯಗಳನ್ನು ಬರಿಯುವುದಕ್ಕೆಂದೇ ಡೈರಿ ಇದ್ದರೂ, ಮಂಡೇ ಹಾಲಿಡೇ ಎಂದು ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳ ಕೈಗಳ ಮೇಲೆ ಬರೆದಿದ್ದು, ಶಿಕ್ಷಕಿಯ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.
ಕೊಪ್ಪಳ ಎಸ್ ಎಫ್ ಎಸ್ ಶಾಲೆಯ ಶಿಕ್ಷಕಿಯೊಬ್ಬರು ಈ ರೀತಿಯ ಯಡವಟ್ಟು ಮಾಡಿದ್ದು, ಪೋಷಕರು ಈ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಶಿಕ್ಷಕರು ಪ್ರಿಕೆಜಿ ಬಾಲಕನ ಕೈಮೇಲೆ ರಜೆ ವಿಷಯ ಬರೆದು ಕಳುಹಿಸಿದ್ದಾರೆ. ಮಂಡೇ (Monday is holiday) ಎಂದು ಶಿಕ್ಷಕರು ಮಾರ್ಕರ್ನಿಂದ ಬರೆದಿದ್ದಾರೆ.
ಪಠ್ಯದಲ್ಲಿನ್ನು ಲಿವ್‌ಇನ್, ಸಲಿಂಗ, ಸಿಂಗಲ್‌ಪೇರೆಂಟ್‌ಗೂ ಕುಟುಂಬ ವ್ಯವಸ್ಥೆ ಸ್ಥಾನ!
ಸಾಮಾನ್ಯವಾಗಿ ಚಿಕ್ಕಮಕ್ಕಳ ಪೋಷಕರಿಗೆ ರಜೆ, ಫೀಸು ಇತ್ಯಾದಿ ವಿಷಯ ತಲುಪಿಸಬೇಕಾದರೆ ಡೈರಿಯಲ್ಲೇ ಬರೆಯಲಾಗುತ್ತದೆ. ಆದರೆ ಶಿಕ್ಷಕಿಯೊಬ್ಬರು ಸೋಮವಾರ ರಜೆ ಇದೆ ಎಂಬುದನ್ನು ಮಗುವಿನ ಕೈಮೇಲೆ ಬರೆದುಕಳುಹಿಸಿದ್ದಾರೆ.
ಶಿಕ್ಷಕರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಎರಡು ದಿನ ಕಳೆದರೂ ಕೈಯಲ್ಲಿ ಬರೆದ ಲೈನ್ಸ್ ಅಳಿಸಿ ಹೋಗಿಲ್ಲ. ಈ ಬಗ್ಗೆ ಬರೆದುಕೊಂಡಿರುವ ಪೋಷಕರು ಬಾಲಕನ ಫೋಟೋ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ