ಬೆಂಗಳೂರು ಏರ್‌ಪೋರ್ಟ್‌ಗೆ 5 ಹೆಚ್ಚುವರಿ ಮೆಮು ರೈಲು ಸಂಚಾರ

By Kannadaprabha NewsFirst Published Jul 30, 2022, 9:57 AM IST
Highlights

ಕೆಎಸ್‌ಆರ್‌, ಕಂಟೋನ್ಮೆಂಟ್‌, ಯಲಹಂಕ, ದೇವನಹಳ್ಳಿಯಿಂದ ಮೆಮು ರೈಲು ಸೇವೆ

ಬೆಂಗಳೂರು(ಜು.30): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವ ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ವಿವಿಧ ರೈಲ್ವೆ ನಿಲ್ದಾಣಗಳಿಂದ ಹೆಚ್ಚುವರಿಯಾಗಿ ಐದು ಮೆಮು ರೈಲುಗಳ ಸಂಚಾರವನ್ನು ಶುಕ್ರವಾರದಿಂದ ಆರಂಭಿಸಲಾಗಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್‌) ರೈಲ್ವೆ ನಿಲ್ದಾಣ, ಬೆಂಗಳೂರು ಕಂಟೋನ್ಮೆಂಟ್‌ ಮತ್ತು ಯಲಹಂಕದಿಂದ ದೇವನಹಳ್ಳಿಗೆ ರೈಲುಗಳು ಕಾರ್ಯ ನಿರ್ವಹಿಸಲಿವೆ. ವಿಮಾನ ಪ್ರಯಾಣಿಕರು, ವಿಮಾಣ ನಿಲ್ದಾಣಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ಆ ಭಾಗದ ಜನರಿಗೆ ರೈಲ್ವೆಗಳ ಸೌಲಭ್ಯದಿಂದ ಸಮಯ ಮತ್ತು ಹಣ ಉಳಿತಾಯವಾಗುತ್ತದೆ. ಈ ಮೆಮು ರೈಲುಗಳು ಎಂಟು ಬೋಗಿಗಳನ್ನು ಹೊಂದಿವೆ. ಈ ಎಲ್ಲಾ ರೈಲುಗಳು ಸೋಮವಾರದಿಂದ-ಶನಿವಾರದವರೆಗೆ ಮಾತ್ರ ಸಂಚರಿಸುತ್ತವೆ. ಭಾನುವಾರ ಸೇವೆ ಇರುವುದಿಲ್ಲ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.

ಏರ್‌ಪೋರ್ಟ್‌ ಕಡೆಗೆ

ಬೆಳಗ್ಗೆ 4.55ಕ್ಕೆ ಕೆಎಸ್‌ಆರ್‌ ಬೆಂಗಳೂರು ಹೊರಟು 6.20ಕ್ಕೆ ಕೆಐಎ ತಲುಪುತ್ತದೆ. (ರೈಲು ಸಂಖ್ಯೆ 06531), ಬೆಳಿಗ್ಗೆ 7.15ಕ್ಕೆ ಯಲಹಂಕದಿಂದ ಹೊರಟು 7.37ಕ್ಕೆ ಕೆಐಎ ತಲುಪುತ್ತದೆ.(ರೈಲು ಸಂಖ್ಯೆ 06540), ಬೆಳಗ್ಗೆ 7.45ಕ್ಕೆ ಯಲಹಂಕದಿಂದ ಹೊರಟು 8.03ಕ್ಕೆ ಕೆಐಎ ತಲುಪುತ್ತದೆ. (ರೈಲು ಸಂಖ್ಯೆ 06534), ಸಂಜೆ 4ಕ್ಕೆ ಕಂಟೋನ್ಮೆಂಟ್‌ನಿಂದ ಹೊರಟು 5.14ಕ್ಕೆ ಕೆಐಎ ತಲುಪುತ್ತದೆ. (ರೈಲು ಸಂಖ್ಯೆ 06538) ಮತ್ತು ಮಧ್ಯಾಹ್ನ 12.20ಕ್ಕೆ ಕಂಟೋನ್ಮೆಂಟ್‌ನಿಂದ ಹೊರಟು 1.20ಕ್ಕೆ ಕೆಐಎ ತಲುಪುತ್ತದೆ. (ರೈಲು ಸಂಖ್ಯೆ 06536)

2ನೇ ಹಂತದಲ್ಲಿ ನಮ್ಮ‌ಮೆಟ್ರೋ ಸೂಪರ್ ಫಾಸ್ಟ್: ಓಡಲಿದೆ 2 ನಿಮಿಷಕ್ಕೊಂದು ಟ್ರೈನ್‌

ಬೆಂಗಳೂರಿನ ಕಡೆಗೆ

ಬೆಳಗ್ಗೆ 6.30ಕ್ಕೆ ದೇವನಹಳ್ಳಿಯಿಂದ ಹೊರಟು 7ಕ್ಕೆ ಯಲಹಂಕವನ್ನು ತಲುಪುತ್ತದೆ. (ರೈಲು ಸಂಖ್ಯೆ 06533), ಬೆಳಗ್ಗೆ 8.50ಕ್ಕೆ ದೇವನಹಳ್ಳಿಯಿಂದ ಹೊರಟು 10.10ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ ತಲುಪುತ್ತದೆ. (ರೈಲು ಸಂಖ್ಯೆ 06535), ಮಧ್ಯಾಹ್ನ 2.07ಕ್ಕೆ ಕೆಐಎಯಿಂದ ಹೊರಟು 3.15ಕ್ಕೆ ಕಂಟೋನ್ಮೆಂಟ್‌ ತಲುಪುತ್ತದೆ. (ರೈಲು ಸಂಖ್ಯೆ 06537), ಸಂಜೆ 5.58 ಕ್ಕೆ ಕೆಐಎಯಿಂದ ಹೊರಟು 6.20ಕ್ಕೆ ಯಲಹಂಕ ತಲುಪುತ್ತದೆ. (ರೈಲು ಸಂಖ್ಯೆ 06539) ಮತ್ತು ರಾತ್ರಿ 7.58ಕ್ಕೆ ಹೊರಟು ಕೆಐಎಯಿಂದ 9.20ಕ್ಕೆ ಕೆಎಸ್‌ಆರ್‌ ಬೆಂಗಳೂರು ತಲುಪುತ್ತದೆ. (ರೈಲು ಸಂಖ್ಯೆ 06532)

click me!