ವಿದ್ಯುತ್‌ನಲ್ಲಿ ಸ್ವಾವಲಂಬಿಯಾಗಲು ಸರ್ಕಾರದ ಮಹತ್ತರ ಹೆಜ್ಜೆ: ಶಾಸಕ ಬೋಪಯ್ಯ

By Kannadaprabha News  |  First Published Jul 30, 2022, 9:13 AM IST

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಷ್ಟ್ರದಲ್ಲಿ ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ಮಹತ್ತರ ಹೆಜ್ಜೆ ಇಟ್ಟಿದೆ ಎಂದು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ರಾಜ್ಯ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ. ಬೋಪಯ್ಯ ಹೇಳಿದ್ದಾರೆ.


ಮಡಿಕೇರಿ (ಜು.30) :ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಷ್ಟ್ರದಲ್ಲಿ ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ಮಹತ್ತರ ಹೆಜ್ಜೆ ಇಟ್ಟಿದೆ ಎಂದು ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ರಾಜ್ಯ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ. ಬೋಪಯ್ಯ ಹೇಳಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ನಗರದ ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ನಡೆದ ‘ಉಜ್ವಲ ಭಾರತ, ಉಜ್ವಲ ಭವಿಷ್ಯ’ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

2014ರ ವರೆಗೆ 2.48 ಲಕ್ಷ ಮೆಗಾ ವ್ಯಾಟ್‌(Vat)ನಷ್ಟು ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿತ್ತು, ಕಳೆದ ಎಂಟು ವರ್ಷದ ಅವಧಿಯಲ್ಲಿ 4 ಲಕ್ಷ ಹೆಚ್ಚು ಮೆಗಾ ವ್ಯಾಟ್‌ನಷ್ಟುವಿದ್ಯುತ್‌ ಉತ್ಪಾದನೆ ಮಾಡಿ, ಸುಮಾರು 1.85 ಲಕ್ಷ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಹೆಚ್ಚಾಗಿರುವುದು ಸರ್ಕಾರದ ಮಹತ್ತರ ಸಾಧನೆಯಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ವಿವರಿಸಿದರು. ಪಂಡಿತ ದೀನ ದಯಾಳ್‌ ಉಪಾಧ್ಯಾಯ ಗ್ರಾಮೀಣ ವಿದ್ಯುದ್ಧೀಕರಣ ಯೋಜನೆಯಡಿ ಪ್ರತಿ ಮನೆಗೂ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸರ್ಕಾರ ಶ್ರಮಿಸಿದೆ. ಹೊಸ ಹೊಸ ಕಂಬಗಳು, ವಿದ್ಯುತ್‌ ಪರಿವರ್ತಕಗಳನ್ನು ಅಳವಡಿಸಿ ವಿದ್ಯುತ್‌ ಕಲ್ಪಿಸಲು ಸರ್ಕಾರ ಪ್ರಯತ್ನಿಸಿದೆ ಎಂದು ಶಾಸಕರು ತಿಳಿಸಿದರು. ಈಗಾಗಲೇ ಜಿಲ್ಲೆಯಲ್ಲಿ ಶ್ರೀಮಂಗಲ ಮತ್ತು ಸೋಮವಾರಪೇಟೆ ಬಳಿಯ ಹಾನಗಲ್ಲು ಶೆಟ್ಟಳ್ಳಿಯಲ್ಲಿ ವಿದ್ಯುತ್‌ ಉಪ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ನಡೆಯುತ್ತಿದೆ. ಉಳಿದಂತೆ ಸಿದ್ದಾಪುರ, ಮೂರ್ನಾಡುಗಳಲ್ಲಿ ಕಾಮಗಾರಿ ಆರಂಭವಾಗಬೇಕಿದೆ. ಹಾಗೆಯೇ ಹೊಸದಾಗಿ ಬಾಳೆಲೆ, ಹುದಿಕೇರಿ, ಕಳತ್ಮಾಡು, ಕೋಪಟ್ಟಿ(ಭಾಗಮಂಡಲ), ಮಾದಾಪುರ, ಕೂಡಿಗೆ, ಕೊಡ್ಲಿಪೇಟೆ, ಸಂಪಾಜೆಗಳಲ್ಲಿ ಹೊಸದಾಗಿ ವಿದ್ಯುತ್‌ ಉಪ ಕೇಂದ್ರಗಳನ್ನು ಸ್ಥಾಪಿಸಬೇಕಿದೆ ಎಂದು ಕೆ.ಜಿ. ಬೋಪಯ್ಯ ಅವರು ಹೇಳಿದರು.

Tap to resize

Latest Videos

ಡಾ. ಅಂಬೇಡ್ಕರ್‌ ಆದರ್ಶ ಜೀವನಕ್ಕೆ ದಾರಿದೀಪ: ಬೋಪಯ್ಯ

ಬೆಳಕು ಯೋಜನೆಯಡಿ ಬಿಪಿಎಲ್‌ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್‌ ಕಲ್ಪಿಸಲಾಗುತ್ತದೆ. ಮಡಿಕೇರಿಯಿಂದ ವಿರಾಜಪೇಟೆಗೆ ಎಕ್ಸ್‌ಪ್ರೆಸ್‌ ವಿದ್ಯುತ್‌ ಮಾರ್ಗಕ್ಕೂ ಕ್ರಮವಹಿಸಲಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರು ಸಹ ಜಿಲ್ಲಾಡಳಿತ ಜೊತೆ ಕೈಜೋಡಿಸಿದ್ದಲ್ಲಿ, ವಿದ್ಯುತ್‌ ಸಮರ್ಪಕ ಪೂರೈಕೆಗೆ ಮುಂದಾಗಬಹುದಾಗಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಇದ್ದಲ್ಲಿ ವಿದ್ಯುತ್‌ ಕ್ಷೇತ್ರದಲ್ಲಿ ಮತ್ತಷ್ಟುಸ್ವಾವಲಂಬಿ ಸಾಧಿಸಬಹುದು ಎಂದರು.

ವಿದ್ಯುತ್‌ ಕಾಮಗಾರಿಗಳಿಗೆ ಸಹಕಾರ: ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಮಾತನಾಡಿ ವಿದ್ಯುತ್‌ ಇಲ್ಲದ ಬದುಕನ್ನು ಊಹಿಸಿಕೊಳ್ಳುವುದು ಅಸಾಧ್ಯ. ಸಾರ್ವಜನಿಕರಿಗೆ ವಿದ್ಯುತ್‌ ಪೂರೈಕೆ ಸಮರ್ಪಕವಾಗಿ ಒದಗಿಸುವುದು ಅತ್ಯವಶ್ಯ. ಆ ನಿಟ್ಟಿನಲ್ಲಿ ವಿದ್ಯುತ್‌ ಇಲಾಖೆ ಕಾರ್ಯನಿರ್ವಹಿಸುತ್ತಿದೆ ಎಂದರು. ವಿದ್ಯುತ್‌ ಪೂರೈಕೆ ಸಂಬಂಧಿಸಿದಂತೆ ಬಹಳಷ್ಟುಕೆಲಸಗಳು ನಡೆಯುತ್ತಿವೆ. ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದಿಂದ ಕೊಡಗು ಜಿಲ್ಲೆಯಲ್ಲಿ ಜೂನಿಯರ್‌ ಲೈನ್‌ಮನ್‌ಗಳನ್ನು ನೇಮಕ ಮಾಡಬೇಕು. ಇದರಿಂದ ಜಿಲ್ಲೆಯಲ್ಲಿಯೇ ಕೆಲಸ ನಿರ್ವಹಿಸಲು ಸಾಧ್ಯವಾಗಲಿದೆ ಎಂದರು. ಕೊಡಗು ಜಿಲ್ಲೆಯಲ್ಲಿ ಶೇ.100 ರಷ್ಟುವಿದ್ಯುತ್‌ ಬಿಲ್‌ ಪಾವತಿಸಲಾಗುತ್ತಿದೆ ಎಂದರು. ಜಿಲ್ಲಾಡಳಿತ ವಿದ್ಯುತ್‌ ಕಾಮಗಾರಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಸರ್ಕಾರದ ಪ್ರಯೋಜನಗಳನ್ನು ಅರ್ಹರು ಪಡೆದುಕೊಳ್ಳುವಂತಾಗಬೇಕು ಎಂದರು.

ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ 10 ಎಚ್‌ಪಿ ವರೆಗೆ ಕೃಷಿಕರ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್‌ ಪೂರೈಸುತ್ತಿರುವುದು ಕೃಷಿಕರಿಗೆ ಅನುಕೂಲವಾಗಿದೆ ಎಂದು ಹೇಳಿದರು. ಹಿಂದೆ ಬೀದಿ ದೀಪ ಹಾಗೂ ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ಕೇಳಿದ್ದೇವೆ, ಆದರೆ ಇಂದು ಪ್ರತಿಯೊಂದು ಮನೆಗೂ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಲು ಪ್ರಯತ್ನಿಸಲಾಗಿದೆ. ಆ ನಿಟ್ಟಿನಲ್ಲಿ ರಾಷ್ಟ್ರ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು. ಮಳೆಗಾಲದಲ್ಲಿ ವಿದ್ಯುತ್‌ ಇಲಾಖೆಯ ಸಿಬ್ಬಂದಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ. ಇವರ ಕಾರ್ಯ ಶ್ಲಾಘನೀಯ ಎಂದರು.

ಕೊಡುಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆ ತಂಡ ಹಾಗೂ ಭಾರತೀಯ ವಿದ್ಯಾಭವನ ವಿದ್ಯಾರ್ಥಿಗಳಿಂದ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯುತ್‌ ಇಲಾಖೆಯ ಕಾರ್ಯ ಯೋಜನೆಗಳ ಬಗ್ಗೆ ವಿಡಿಯೋ ಪ್ರಸಾರ ಮಾಡಲಾಯಿತು. ಸೆÓ್ಕ… ಇಇ ಅನಿತಾ ಬಾಯಿ, ಎಇಇ ವಿನಯ ಕುಮಾರ್‌, ಸುರೇಶ್‌ ಕುಮಾರ್‌, ದೇವಯ್ಯ ಇತರರು ಇದ್ದರು.

ಲಸಿಕೆ : ಆದಿವಾಸಿಗಳಿಗೆ ಮನವೊಲಿಸಿದ ಬೋಪಯ್ಯ

ಸೆÓ್ಕ… ಮುಖ್ಯ ಎಂಜಿನಿಯರ್‌ ಉಮೇಶ್‌ಚಂದ್ರ ಸ್ವಾಗತಿಸಿದರು. ಕೊಡುಗು ಜಿಲ್ಲಾ ವಿದ್ಯಾಸಾಗರ ಕಲಾ ವೇದಿಕೆಯ ಇ. ರಾಜು ಮತ್ತು ತಂಡದವರು ವಿದ್ಯುತ್‌ ಜಾಗೃತಿ ಗೀತೆ ಹಾಡಿದರು. ಚಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿ, ವಂದಿಸಿದರು.

ಫಲಾನುಭವಿಗಳು- ಸೆಸ್ಕ್ ಅಧಿಕಾರಿಗಳ ಸಂವಾದ ಕಾರ್ಯಕ್ರಮ:

ಫಲಾನುಭವಿಗಳು ಮತ್ತು ಸೆÓ್ಕ… ಅಧಿಕಾರಿಗಳ ಜೊತೆ ವಿದ್ಯುತ್‌ ಪೂರೈಕೆಗೆ ಸಂಬಂಧಿಸಿದ ವಿಷಯ ಕುರಿತು ಸಂವಾದ ನಡೆಯಿತು. ಮಳೆ, ಗಾಳಿ ಯಾವುದನ್ನೂ ಲೆಕ್ಕಿಸದೆ ವಿದ್ಯುತ್‌ ಸಮಸ್ಯೆಯನ್ನು ಬಗೆಹರಿಸಿ ಸಾರ್ವಜನಿಕರಿಗೆ ವಿದ್ಯುತ್‌ ಪೂರೈಸುವಲ್ಲಿ ಸಹಕರಿಸಿದ ಸಿಬ್ಬಂದಿ ಹಾಗೂ ಅಧಿಕಾರಿಗಳ ಕಾರ್ಯವೈಖರಿಗೆ ಫಲಾನುಭವಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಅರುವತ್ತೋಕ್ಲು ಗ್ರಾಮದ ಆಶಾ ಕಾರ್ಯಕರ್ತೆ ಚಂಪಾ ಶೆಟ್ಟಿಗಾರು ಮಾತನಾಡಿ, 27 ವರ್ಷಗಳಿಂದ ವಿದ್ಯುತ್‌ ಸಂಪರ್ಕವಿಲ್ಲದೆ ಲೈನ್‌ಮನೆಯಲ್ಲಿ ವಾಸವಾಗಿದ್ದೆ. 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ನನ್ನ ಮನೆಯ ಒಂದು ಭಾಗ ಮುರಿದು ಬಿದ್ದಿತ್ತು. ಆಶಾ ಕಾರ್ಯಕರ್ತೆಯಾದ ನನಗೆ ವಿದ್ಯುತ್‌ ಅವಶ್ಯಕತೆ ಬಹಳ ಇತ್ತು. ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ ಮೇಲೆ ಮನೆ ಕಟ್ಟಲು ಅನುಮತಿ ದೊರೆಯಿತು. ವಿದ್ಯುತ್‌ ಇಲಾಖೆಯ ಬೆಳಕು ಯೋಜನೆಯ ಬಗ್ಗೆ ನಮಗೆ ತಿಳಿದಿರಲಿಲ್ಲ. ಕೊನೆ ಹಂತದಲ್ಲಿ ವಿದ್ಯುತ್‌ ಸಿಬ್ಬಂದಿ ಮಾರ್ಗದರ್ಶನ ಮತ್ತು ಸ್ಪಂದನೆಯಿಂದ ಮನೆಗೆ ಕೊನೆಯ ಕ್ಷಣದಲ್ಲಿ ವಿದ್ಯುತ್‌ ಲಭಿಸಿತು ಎಂದು ಅವರು ತಿಳಿಸಿದರು.

ಬೆಟ್ಟತೂರು ನಿವಾಸಿಯೊಬ್ಬರು ಮಾತನಾಡಿ ನಮ್ಮ ಗ್ರಾಮದಲ್ಲಿ ಪ್ರತಿ ಮನೆಗೂ ವಿದ್ಯುತ್‌ ದೊರೆತಿದೆ ಇಲಾಖೆಯವರ ಮುತುವರ್ಜಿ, ಸ್ಪಂದನೆಯಿಂದ ಆ ಭಾಗದ ಜನರಿಗೆ ವಿದ್ಯುತ್‌ ದೊರೆಯಿತು ಎಂದರು. ಯಾವುದೇ ಸಂದರ್ಭದಲ್ಲೂ ವಿದ್ಯುತ್‌ ತೊಂದರೆಗಳು ಉಂಟಾದಾಗ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದರೆ ಕೂಡಲೇ ಸ್ಪಂದಿಸುವ ಕೆಲಸ ಇಲಾಖೆಯಿಂದ ಆಗುತ್ತಿದೆ ಎಂದರು. ಸೆÓ್ಕ… ಸಿಬ್ಬಂದಿ ವಾರದಲ್ಲಿ ಒಂದು ದಿನ ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ವಿದ್ಯುತ್‌ ಅವಘಡದಿಂದ ರಕ್ಷಣೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಸ್ಥಳೀಯರೊಬ್ಬರು ಮಾತನಾಡಿ ಬೊಯಿಕೇರಿ, ಮಕ್ಕಂದೂರು ಭಾಗಗಳಿಗೆ ಒಂದೇ ಫೀಡರ್‌ಗಳು ಇದ್ದವು. ಅಧಿಕಾರಿಗಳ ಸ್ವಯಂ ಚಿಂತನೆ ಮತ್ತು ಮುತುವರ್ಜಿಯಿಂದ ಅವರೇ ಅದನ್ನು ಬದಲಿಸಿ ಗ್ರಾಮದ ವಿದ್ಯುತ್‌ ಸಮಸ್ಯೆಯನ್ನು ನಿವಾರಿಸಿದ್ದಾರೆ ಎಂದು ಶ್ಲಾಘಿಸಿದರು.

ಕೆ. ನಿಡುಗಣೆ ಗ್ರಾಮದ ಭಾಗಿರಥಿ ಮಾತನಾಡಿ ಗ್ರಾಮ ಪಂಚಾಯಿತಿ ವತಿಯಿಂದ ಮನೆ ನಿರ್ಮಾಣ ಮಾಡಲು ಸಹಾಯ ಮಾಡಿದರು. ಮನೆಗೆ ವಿದ್ಯುತ್‌ ದೊರೆತಿದೆ ಎಂದು ಎಂದರು. ಸ್ಥಳೀಯರೊಬ್ಬರು ಮಾತನಾಡಿ ತಾನ ಜೋಡುಪಾಲ ಅಬ್ಬಿಕೊಲ್ಲಿ ವಾಸಿಯಾಗಿದ್ದು, ಈ ಭಾಗದಲ್ಲಿ ಸಮಸ್ಯೆಗಳು ಬಹಳ ಇದ್ದವು. ಸೆÓ್ಕ… ಅಧಿಕಾರಿಯೊಬ್ಬರ ಸಹಾಯದಿಂದ ನಮಗೆ ವಿದ್ಯುತ್‌ ದೊರೆಯುವಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮೈಸೂರು ಸೆಸ್ಕ್… ಮುಖ್ಯ ಎಂಜಿನಿಯರ್‌ ಉಮೇಶ್‌ ಚಂದ್ರ ಮಾತನಾಡಿ ವಿದ್ಯುತ್‌ ಅವಘಡಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಕೂಡ ಅರಿವು ಮೂಡಿಸುವ ಕೆಲಸ ಮಾಡಲಾಗುಲವುದು ಎಂದು ಹೇಳಿದರು.

click me!