ಕರ್ನಾಟಕದಲ್ಲಿ ಕೊರೋನಾ ಅಬ್ಬರ/ ರಾಜ್ಯದಲ್ಲಿ 49,058 ಪಾಸಿಟಿವ್ ಪ್ರಕರಣಗಳು ವರದಿ/ ಬೆಂಗಳೂರಿನಲ್ಲಿ ಒಂದೇ ದಿನ 23,706 ಮಂದಿಗೆ ಸೋಂಕು/ 18943 ಜನ ಡಿಸ್ಚಾರ್ಜ್
ಬೆಂಗಳೂರು (ಮೇ 06) 50 ಸಾವಿರಕ್ಕಿಂತ ಕೊಂಚ ಕಡಿಮೆ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿವೆ. ರಾಜ್ಯದಲ್ಲಿ 49,058 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 17,90,104ಕ್ಕೆ ಏರಿಕೆಯಾಗಿದೆ.
ಗುರುವಾರ ಒಂದೇ ದಿನ ಬರೋಬ್ಬರಿ 328 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 17212ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಒಂದೇ ದಿನ 23,706 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 8.87,086ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ 139 ಮಂದಿ ಬಲಿಯಾಗಿದ್ದಾರೆ.
undefined
ಮಾದರಿಯಾದ ಮಂಡ್ಯ ಸಂಸದೆ, ಜಿಲ್ಲೆಗೆ ಸ್ವಂತ ದುಡ್ಡಿನಲ್ಲಿ ಆಕ್ಸಿಜನ್
ರಾಜ್ಯದಲ್ಲಿ ಇಂದು 18943 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 12,55,797ಕ್ಕೆ ಏರಿಕೆಯಾಗಿದೆ. ಇನ್ನು 5,17,075 ಸಕ್ರೀಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಜನತಾ ನಿಷೇಧಾಜ್ಞೆ ಜಾರಿ ಮಾಡಿದ್ದರೂ ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ. ಬೆಂಗಳೂರಿನಲ್ಲಿ ಪ್ರತಿ ದಿನ ಇಪ್ಪತ್ತು ಸಾವಿರ ಪ್ರಕರಣ ದಾಖಲಾಗುತ್ತಿರುವುದು ಆತಂಕವನ್ನು ಹಾಗೆ ಇರಿಸಿದೆ.
ಇಂದಿನ 06/05/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/Cx1jRDCsca pic.twitter.com/QzpxrQVwsC
— K'taka Health Dept (@DHFWKA)