ಬಾಗಲಕೋಟೆ;  ಬಾವಿಗೆ ಬಿದ್ದ ಎಮ್ಮೆ ರಕ್ಷಣೆ,  ನಿಟ್ಟುಸಿರು!

By Suvarna News  |  First Published May 6, 2021, 9:32 PM IST

ಆಯತಪ್ಪಿ ಆಳವಾದ ಬಾವಿಗೆ ಬಿದ್ದಿದ್ದ ಎಮ್ಮೆ ಜೀವಂತ ರಕ್ಷಣೆ/ ಬದುಕಿಬಂದ ನೀರಲ್ಲಿ ಒದ್ದಾಡುತ್ತಿದ್ದ ಜೀವ/ ಬಾಗಲಕೋಟೆ ಜಿಲ್ಲೆಯ ಹಿರೇಓತಗೇರಿ ಗ್ರಾಮದಲ್ಲಿ ನಡೆದ ಘಟನೆ/ ಆಳವಾದ ನೀರಿನ ಬಾವಿಗೆ ಬಿದ್ದಿದ್ದ ಬೆಳಗಿನ ಜಾವ ಮೇಯಲು ಹೋಗಿದ್ದ ಎಮ್ಮೆ


ಬಾಗಲಕೋಟೆ(ಮೇ 06)  ಆಯತಪ್ಪಿ ಆಳವಾದ ಬಾವಿಗೆ ಬಿದ್ದಿದ್ದ ಎಮ್ಮೆಯನ್ನು ರಕ್ಷಣೆ ಮಾಡಲಾಗಿದೆ. ನೀರಲ್ಲಿ ಒದ್ದಾಡುತ್ತಿದ್ದ ಜೀವವನ್ನು ರಕ್ಷಣೆ ಮಾಡಲಾಗಿದೆ.

ಬಾಗಲಕೋಟೆ ಜಿಲ್ಲೆಯ ಹಿರೇಓತಗೇರಿ ಗ್ರಾಮದಲ್ಲಿ ನಡೆದ ಘಟನೆ ನಡೆದಿದೆ. ಬೆಳಗಿನ ಜಾವ ಮೇಯಲು ಹೋಗಿದ್ದ ಎಮ್ಮೆ ನೀರಿಗೆ ಬಿದ್ದಿದೆ. ಎಮ್ಮೆ ನೀರಲ್ಲಿ ಬಿದ್ದ ಸುದ್ದಿ ತಿಳಿದು ಗ್ರಾಮಸ್ಥರಿಂದ ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ.

Tap to resize

Latest Videos

ಗಜೇಂದ್ರನ ಮೈಮಾಟಕ್ಕೆ ಫಿದಾ ಆಗದವರೇ ಇಲ್ಲ

ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳ ಸಿಬ್ಬಂದಿ ಒಂದು ಗಂಟೆ ಕಾಯಾ೯ಚರಣೆ ನಡೆಸಿದ್ದಾರೆ. ಕಾರ್ಯಾಚರಣೆ ಮೂಲಕ ಬಾವಿಯ ನೀರಲ್ಲಿ ಬಿದ್ದಿದ್ದ ಎಮ್ಮೆಯನ್ನು ರಕ್ಷಿಸುವಲ್ಲಿ ಸ್ಥಳೀಯರು ಸಹಕಾರ ನೀಡಿದ್ದಾರೆ. ಗ್ರಾಮದ ಮಹಾದೇವಪ್ಪ ಎಂಬುವವರಿಗೆ ಸೇರಿದ್ದ ಎಮ್ಮೆಯನ್ನು ರಕ್ಷಣೆ ಮಾಡಲಾಗಿದ್ದು ಕುಟುಂಬ ನಿಟ್ಟುಸಿರು ಬಿಟ್ಟಿದೆ.

 

click me!