ಬಳ್ಳಾರಿ ಜಿಲ್ಲೆಯಲ್ಲಿ ಇಬ್ಬರು ಸೋಂಕಿತರು ಸಾವು| ಸಾವಿನ ಸಂಖ್ಯೆ 38 ಕ್ಕೇರಿಕೆ| 1388 ಜಿಲ್ಲೆಯ ಒಟ್ಟು ಸೋಂಕಿತರು| ಗುಣಮುಖರಾದವರು 595| ಚಿಕಿತ್ಸೆ ಪಡೆಯುತ್ತಿರುವವರು 755|
ಬಳ್ಳಾರಿ(ಜು.08): ಜಿಲ್ಲೆಯಲ್ಲಿ ಮಂಗಳವಾರ 45 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿದ್ದು, ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 1388 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದರೆ, 38 ಜನ ಸೋಂಕಿತರು ಸಾವಪ್ಪಿದ್ದಾರೆ. ಮಂಗಳವಾರ ಸಾವಿಗೀಡಾದವರ ಮಾಹಿತಿಯನ್ನು ಜಿಲ್ಲಾಡಳಿತ ನೀಡಿಲ್ಲ.
ಜಿಲ್ಲೆಯಲ್ಲಿ ಮಂಗಳವಾರ ಖಚಿತವಾಗಿರುವ ಸೋಂಕಿತರ ಪೈಕಿ ಹೊಸಪೇಟೆ ಹಾಗೂ ಸಂಡೂರು ತಾಲೂಕಿನಲ್ಲಿ ಹೆಚ್ಚಿನ ಸೋಂಕಿತರು ಕಂಡು ಬಂದಿದ್ದಾರೆ. ಸಂಡೂರಿನಲ್ಲಿ 22 ಜನರಿಗೆ ಸೋಂಕು ಕಾಣಿಸಿಕೊಂಡಿದ್ದರೆ, ಹೊಸಪೇಟೆ 17, ಹಗರಿಬೊಮ್ಮನಹಳ್ಳಿ 1 ಹಾಗೂ ಬಳ್ಳಾರಿ ತಾಲೂಕಿನಲ್ಲಿ ನಾಲ್ವರಿಗೆ ಸೋಂಕು ಹರಡಿದೆ. ಮಂಗಳವಾರ ಜಿಲ್ಲೆಯ ಸೋಂಕಿತರಲ್ಲಿ ಅತ್ಯಂತ ಕಿರಿಯ ವಯಸ್ಸಿನ ಸಂಡೂರಿನ 15 ವರ್ಷದ ಬಾಲಕ ಇದ್ದಾನೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಬಳ್ಳಾರಿಯಲ್ಲಿ ಮತ್ತೆ ಶತಕ ಬಾರಿಸಿದ ಕೊರೋನಾ: ಒಂದೇ ದಿನದಲ್ಲಿ 104 ಪ್ರಕರಣ ಪತ್ತೆ
ಜಿಲ್ಲೆಯ ಕೊರೋನಾ ಅಪ್‌ಡೇಟ್ ಇಂತಿದೆ:
ಒಟ್ಟು ಸೋಂಕಿತರು 1388
ಗುಣಮುಖರಾದವರು 595
ಚಿಕಿತ್ಸೆ ಪಡೆಯುತ್ತಿರುವವರು 755
ಸಾವಿನ ಸಂಖ್ಯೆ 38