ದಿನದ 24 ಗಂಟೆಗಳ ಕಾಲ ಕೆಲಸ ಮಾಡಬಲ್ಲ ಪ್ರಧಾನಮಂತ್ರಿ ಮೋದಿ ಇಂದು ನಮ್ಮ ದೇಶಕ್ಕೆ ಸಿಕ್ಕಿರುವುದು ಭಾರತೀಯರ ದೃಢ ನಿರ್ಧಾರದಿಂದ| ಸದಾಕಾಲ ಬಡವರ ಪರವಾಗಿ ಯೋಚಿಸುವ ಪ್ರಧಾನಿ ಮೋದಿ ನಿಜವಾಗಿಯೂ ಬಡವರನ್ನು ಬಡತನದಿಂದ ಹೊರತರುವ ಪ್ರಯತ್ನ ಮಾಡುತ್ತಿದ್ದಾರೆ| ಭಾರತವನ್ನು ವಿಶ್ವಗುರುವನ್ನಾಗಿಸಲು ಬಿಜೆಪಿಯ ಕಾರ್ಯಕರ್ತರು ಸರ್ವಸನ್ನದ್ಧರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ|
ಹಾವೇರಿ(ಜು.08): ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ರಾಜ್ಯ ಬಿಜೆಪಿ ಘಟಕದಿಂದ ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷದ ಸಾಧನೆಗಳ ಕುರಿತ ಜಾಗೃತಿ ಹಾಗೂ ವಿವಿಧ ಜನಸಂವಾದ ವರ್ಚುವಲ್ ರ‌್ಯಾಲಿಗಳ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು.
ವಿಡಿಯೋ ಸಂವಾದದ ಮೂಲಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ ಮಾತನಾಡಿ, ಬಿಜೆಪಿ ರಾಜಕೀಯಕ್ಕೆ ಬಂದಿರುವ ಸೈದ್ಧಾಂತಿಕ ಕಾರಣಗಳು, ಉದ್ದೇಶ ಹಾಗೂ ಗುರಿಗಳ ಕುರಿತು ಕಾರ್ಯಕರ್ತರಿಗೆ ಹೇಳಿದರು.
ಹಾನಗಲ್: ಆ್ಯಂಬುಲೆನ್ಸ್‌ಗಾಗಿ 12 ಗಂಟೆ ಕಾದ ಕೊರೋನಾ ಸೋಂಕಿತೆ..!
ಚೀನಾ ಭಾರತದ ನಡುವೆ ನಡೆಯುತ್ತಿರುವ ಗಡಿ ಸಂಘರ್ಷದ ಬಗ್ಗೆ ಉಲ್ಲೆಖಿಸಿದ ಅವರು ಚೀನಾದ ವಿಸ್ತೀರ್ಣವಾದವನ್ನು ಒಪ್ಪಿಕೊಳ್ಳುವುದಕ್ಕೆ ಭಾರತದಲ್ಲಿ ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವಿಲ್ಲ ಬದಲಾಗಿ ಭಾರತದ ಹಿತ ಕಾಯುವ ಬಿಜೆಪಿ ಪಕ್ಷದ ಸರ್ಕಾರವಿದೆ. ದಿನದ 24 ಗಂಟೆಗಳ ಕಾಲ ಕೆಲಸ ಮಾಡಬಲ್ಲ ಪ್ರಧಾನ ಮಂತ್ರಿಗಳು ಇಂದು ನಮ್ಮ ದೇಶಕ್ಕೆ ಸಿಕ್ಕಿರುವುದು ಭಾರತೀಯರ ದೃಢ ನಿರ್ಧಾರದಿಂದ ಎಂದರು.
ಸದಾಕಾಲ ಬಡವರ ಪರವಾಗಿ ಯೋಚಿಸುವ ಪ್ರಧಾನಿ ಮೋದಿಯವರು ನಿಜವಾಗಿಯೂ ಬಡವರನ್ನು ಬಡತನದಿಂದ ಹೊರತರುವ ಪ್ರಯತ್ನ ಮಾಡುತ್ತಿದ್ದಾರೆ. ಭಾರತವನ್ನು ವಿಶ್ವಗುರುವನ್ನಾಗಿಸಲು ಬಿಜೆಪಿಯ ಕಾರ್ಯಕರ್ತರು ಸರ್ವಸನ್ನದ್ಧರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಹಿಸಿದ್ದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಉಪಸ್ಥಿತರಿದ್ದರು. ಕಾರ್ಯಕ್ರಮದ ವೀಕ್ಷಣೆಗೆ ಜಿಲ್ಲೆಯಲ್ಲಿಯೂ ಕೂಡಾ ವಿವಿಧ ಬೂತ್, ಗ್ರಾಮ, ಹೋಬಳಿ ಕೇಂದ್ರಗಳು, ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ-ಹಾವೇರಿ, ಬಿಜೆಪಿ- ಕರ್ನಾಟಕ, ಫೇಸ್‌ಬುಕ್ ಪೇಜ್ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಜನರು ಈ ಸಮಾರೋಪ ಸಮಾರಂಭ ವೀಕ್ಷಿಸಿದ್ದಾರೆ. ಹಾವೇರಿ ಜಿಲ್ಲಾ ಕಾರ್ಯಾಲಯದಲ್ಲಿ ಶಾಸಕ ನೆಹರು ಓಲೆಕಾರ, ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ ಹೊಸಳ್ಳಿ, ಪ್ರದೀಪ ಮುಳ್ಳೂರ, ನಗರ ಘಟಕದ ಅಧ್ಯಕ್ಷ ಗಿರೀಶ ತುಪ್ಪದ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ ಸೇರಿದಂತೆ ಪ್ರಮುಖರು ಇದ್ದರು.