Dharwad: ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 434 ಪ್ರಕರಣಗಳು ರಾಜಿ ಸಂಧಾನದಲ್ಲಿ ಇತ್ಯರ್ಥ!

By Govindaraj S  |  First Published Jul 13, 2024, 10:06 PM IST

ಕರ್ನಾಟಕ ಉಚ್ಚ ನ್ಯಾಯಾಲಯ, ಧಾರವಾಡ ಪೀಠದಲ್ಲಿ ಇಂದು ರಾಷ್ಟ್ರೀಯ ಲೋಕ ಅದಾಲತ್‌ನ್ನು ಕರ್ನಾಟಕ ಉಚ್ಚ ನ್ಯಾಯಾಲಯ ಧಾರವಾಡ ಪೀಠದ ಹಿರಿಯ ನ್ಯಾಯಮೂರ್ತಿಗಳಾದ ಎಸ್. ಜಿ. ಪಂಡಿತ ಅವರ ಮಾರ್ಗದರ್ಶನದಲ್ಲಿ ಏರ್ಪಡಿಸಲಾಗಿತ್ತು. 


ವರದಿ: ಪರಮೇಶ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಜು.13): ಕರ್ನಾಟಕ ಉಚ್ಚ ನ್ಯಾಯಾಲಯ, ಧಾರವಾಡ ಪೀಠದಲ್ಲಿ ಇಂದು ರಾಷ್ಟ್ರೀಯ ಲೋಕ ಅದಾಲತ್‌ನ್ನು ಕರ್ನಾಟಕ ಉಚ್ಚ ನ್ಯಾಯಾಲಯ ಧಾರವಾಡ ಪೀಠದ ಹಿರಿಯ ನ್ಯಾಯಮೂರ್ತಿಗಳಾದ ಎಸ್. ಜಿ. ಪಂಡಿತ ಅವರ ಮಾರ್ಗದರ್ಶನದಲ್ಲಿ ಏರ್ಪಡಿಸಲಾಗಿತ್ತು. ಸದರಿ ಅದಾಲತನಲ್ಲಿ ನ್ಯಾಯಮೂರ್ತಿಗಳಾದ ಸಿ.ಎಮ್. ಪೂಣಚ್ಚ, ಜಿ. ಬಸವರಾಜ, ಟಿ. ಜಿ. ಶಿವಶಂಕರೆಗೌಡ ಮತ್ತು ನ್ಯಾಯಿಕ ಸಂಧಾನಕಾರರಾಗಿ ವೆಂಕಟೇಶ ನಾಯ್ಕ,ಟಿ ಹಾಗೂ ನ್ಯಾಯಕೇತರ ಸಂಧಾನಕಾರರಾಗಿ  ಹರ್ಷ ದೇಸಾಯಿ,ಆರ್. ಎಚ್. ಅಂಗಡಿ, ವಿ. ಜಿ. ದಳವಾಯಿ, ಗಿರಿಜಾ ಹಿರೇಮಠ, ಎಮ್ .ಟಿ. ಬಾಂಗಿ ವಕೀಲರುಗಳನ್ನು ಒಳಗೊಂಡ 5 ಪೀಠಗಳನ್ನು ಆಯೋಜಿಸಲಾಗಿತ್ತು. 

Tap to resize

Latest Videos

ಇಂದಿನ ಅದಾಲತನಲ್ಲಿ ಒಟ್ಟು 1101 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಕೈಗೆತ್ತಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 434 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿ ರೂ.9,55,12,964/-ಮೊತ್ತ ಪರಿಹಾರವಾಗಿ ಪಾವತಿಸಲು ಆದೇಶಿಸಲಾಯಿತು ಮತ್ತು ಇದಕ್ಕೆ ಉಬಯ ಪಕ್ಷಗಾರರು ಒಪ್ಪಿಗೊಂಡಿರುತ್ತಾರೆ ಇಂದಿನ  ಲೋಕ ಅದಾಲತ್ ದಲ್ಲಿ ಧಾರವಾಡ ಶಹರದ ಪ್ರತಿಷ್ಠಿತ ಪ್ರದೇಶದಲ್ಲಿನ ದಾಸನಕೊಪ್ಪ ಮತ್ತು ಕಿಲ್ಲೇದಾರ ಕುಟುಂಬಗಳ ನಡುವೆ ಸುಮಾರು 23 ವರ್ಷಗಳಿಂದ ಬಗೆಹರೆಯದ ಪಾಲು ಹಿಸ್ಸೆಯ ವ್ಯಾಜ್ಯವನ್ನು  ಹಿರಿಯ ನ್ಯಾಯಮೂರ್ತಿ ಎಸ್. ಜಿ. ಪಂಡಿತ ಮತ್ತು ನ್ಯಾಯಕೇತರ ಸಂಧಾನಕಾರ ಹರ್ಷ ದೇಸಾಯಿ ಮತ್ತು ವಕೀಲರ ಒಳಗೊಂಡ ಪೀಠವು ಸೂಕ್ತ ಸಲಹೆ ನೀಡುವುದರ ಮೂಲಕ ಮತ್ತು ಉಬಯ ಪಕ್ಷದ ವಕೀಲರಾದ  ಸಿ.ಎಸ್. ಶೆಟ್ಟರ ಮತ್ತು  ಸಂತೋಷ ಬಿ. ಮಲಿಗವಾಡ ಇವರ ಪ್ರಯತ್ನದೊಂದಿಗೆ ದಾವೆಯನ್ನು ರಾಜಿ ಸಂದಾನದ ಮೂಲಕ ಇತ್ಯರ್ಥಗೊಳಿಸಿತು.

ಮುಳ್ಳಯ್ಯನಗಿರಿಗೆ ಪ್ರವಾಸಿಗರ ಲಗ್ಗೆ: ಕಾರ್ಯಾಚರಣೆಗಿಳಿದ ಎಸ್ಪಿ, ಕೇಸ್‌ಗಟ್ಟಲೆ ಮದ್ಯದ ಬಾಟಲಿಗಳು ವಶಕ್ಕೆ!

ಉಳಿದ ನಾಲ್ಕು ಪೀಠಗಳಲ್ಲಿ ಮುಖ್ಯವಾಗಿ ಅಪಘಾತ ಪರಿಹಾರ ಪ್ರಕರಣಗಳ ಮತ್ತು ಚೆಕ್ಕು ಅಮಾನ್ಯ ಪ್ರಕರಣಗಳ ಮೇಲ್ಮನವಿಗಳು ಮತ್ತು ರಿಟ್ ಅರ್ಜಿಗಳನ್ನು ಇತ್ಯರ್ಥಗೊಳಿಸಲಾಯಿತು. 10 ರಿಂದ 15 ವರ್ಷಗಳ ಹಳೆಯ ಚೆಕ್ ಅಮಾನ್ಯ ಪ್ರಕರಣಗಳು ಸೌಹಾರ್ದಯುತವಾಗಿ ಕೊನೆಗೊಂಡಿದ್ದು ಇಂದಿನ ಅದಾಲತ್ ದ ವಿಶೇಷವಾಗಿತ್ತು ದಾವೆ ಪ್ರಕರಣಗಳಲ್ಲಿನ ಉಬಯ ಪಕ್ಷಗಾರರ ಪರಸ್ಪರ ಸಂಬಂಧಗಳು ಉತ್ತಮವಾಗಿರುವಂತೆ ಹಾಗೂ ಸಮಯ ಉಳಿತಾಯವಾಗಲು ಲೋಕ ಅದಾಲತ್ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯ ಧಾರವಾಡ ಪೀಠದ ಅಧೀಕ ವಿಲೇಖನಾಧಿಕಾರಿಗಳು (ನ್ಯಾಯಾಂಗ) ಮತ್ತು ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಜೆರಾಲ್ ರುಡಾಲ್ಫ್ ಮೆಂಡೋನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!