ಕಳೆದ ಒಂದುವರೆ ವರ್ಷದ ಹಿಂದೆ ವಿಜಯಪುರ ಜಿಲ್ಲಾಸ್ಪತ್ರೆ ಆವರಣದಲ್ಲಿ ಪುಟ್ಟರಾಜ ಗವಾಯಿ ಟ್ರಾಮಾ ಸೆಂಟರ್ ಉದ್ಘಾಟನೆಗೊಂಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 2023 ಜನೇವರಿ 26 ರಂದು ಆಗಿನ ಆರೋಗ್ಯ ಸಚಿವ ಕೆ ಸುಧಾಕರ ಟ್ರಾಮಾ ಸೆಂಟರ್ ಉದ್ಘಾಟನೆ ಮಾಡಿದ್ದರು.
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜು.13): ರಾಜ್ಯದ ಜನತೆಗೆ ಗ್ಯಾರಂಟಿ ನೀಡಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಡೆಗೆ ಲಕ್ಷ್ಯವಹಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರ್ತಿವೆ. ಈ ನಡುವೆ ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ ವಿಜಯಪುರ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಟ್ರಾಮಾ ಸೆಂಟರ್ ಉದ್ಘಾಟನೆಗೊಂಡು ಒಂದು ವರೆ ವರ್ಷ ಕಳೆದರು ಈ ವರೆಗೆ ಕಾರ್ಯಾರಂಭಗೊಂಡಿಲ್ಲ. ಇದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಗ್ಯಾರಂಟಿ ನಡುವೆ ಸರ್ಕಾರ ಜನರ ಅವಶ್ಯಕತೆಗಳನ್ನೆ ಸರ್ಕಾರ ಮರೆತಿದೆ ಎಂದು ಸಾರ್ವಜನಿಕರು ಅಸಮಧಾನ ಹೊರಹಾಕ್ತಿದ್ದಾರೆ..
undefined
ಅನಾಥವಾದ ಪುಟ್ಟರಾಜ ಗವಾಯಿ ಟ್ರಾಮಾ ಸೆಂಟರ್..!: ಹೌದು, ಕಳೆದ ಒಂದುವರೆ ವರ್ಷದ ಹಿಂದೆ ವಿಜಯಪುರ ಜಿಲ್ಲಾಸ್ಪತ್ರೆ ಆವರಣದಲ್ಲಿ ಪುಟ್ಟರಾಜ ಗವಾಯಿ ಟ್ರಾಮಾ ಸೆಂಟರ್ ಉದ್ಘಾಟನೆಗೊಂಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 2023 ಜನೇವರಿ 26 ರಂದು ಆಗಿನ ಆರೋಗ್ಯ ಸಚಿವ ಕೆ ಸುಧಾಕರ ಟ್ರಾಮಾ ಸೆಂಟರ್ ಉದ್ಘಾಟನೆ ಮಾಡಿದ್ದರು. ಆದ್ರೆ ಉದ್ಘಾಟನೆಯಾದ ಬಳಿಕ ಟ್ರಾಮಾ ಸೆಂಟರ್ ಕಟ್ಟಡ ಅನಾಥವಾಗಿದೆ. ಕಾರ್ಯಾರಂಭಗೊಳ್ಳಲಿದೆ ಬೀಗ ಜಡಿದ ಸ್ಥಿತಿಯಲ್ಲೆ ಇದೆ. ಸಾರ್ವಜನಿಕರಿಗೆ ಉಪಯೋಗವಾಗಬೇಕಿದ್ದ "ಟ್ರಾಮಾ ಸೆಂಟರ್ ದಿನ ಕಳೆದಂತೆ ಭೂತ ಬಂಗಲೆಯಾಗ್ತಿದೆ".
ದೇವರು ಒಂದೇ ನಮ್ಮ ಬಾಸ್ ಒಂದೇ: ದರ್ಶನ್ ಭೇಟಿಗೆ ಜೈಲು ಬಳಿ ಬಂದು ಕಣ್ಣೀರಿಟ್ಟ ಟಿ.ನರಸೀಪುರ ಮಹಿಳೆ!
ಏನಿದು ಟ್ರಾಮಾ ಸೆಂಟರ್!?: ಅಷ್ಟಕ್ಕೂ ಈ ಟ್ರಾಮಾ ಸೆಂಟರ್ ಏನು ಅನ್ನೋದನ್ನ ನೋಡೋದಾದ್ರೆ, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರೆ, ಯಲುಬುಗಳು ಮುರಿದು ಹೋಗಿದ್ರೆ ಅಂತಹ ರೋಗಿಗಳಿಗೆ ಇಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತೆ. ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣವೇ ಸ್ಕ್ಯಾನಿಂಗ್ ವ್ಯವಸ್ಥೆ, MRI ವ್ಯವಸ್ಥೆ ಈ ಟ್ರಾಮಾ ಸೆಂಟರ್ ನಲ್ಲಿರುತ್ತೆ. ಅಲ್ಲದೆ ಗಾಯಾಳುಗಳಿಗೆ ತುರ್ತು ಆಫರೇಶನ್ ಅವಶ್ಯಕತೆ ಇದ್ದಲ್ಲಿ ಆ ವ್ಯವಸ್ಥೆಯು ತುರ್ತಾಗಿ ಈ ಟ್ರಾಮಾ ಸೆಂಟರ್ ನಲ್ಲಿ ಸಿಗಲಿದೆ. ಹೀಗಾಗಿ ಅಪಘಾತದಲ್ಲಿ ಗಾಯಗೊಂಡು ಸರಿಯಾದ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಳ್ಳುವ ರೋಗಿಗಳ ಪ್ರಾಣ ಉಳಿಸುವಲ್ಲಿ ಈ ಟ್ರಾಮಾ ಸೆಂಟರ್ ಬಹುಮುಖ್ಯ ಪಾತ್ರವಹಿಸಲಿದೆ.
ವರದಾನವಾಗಬೇಕಿದ್ದ ಟ್ರಾಮಾ ಸೆಂಟರ್ ಮರೀಚಿಕೆ..!: ಅಪಘಾತ, ಹಲ್ಲೆ, ಹೊಡೆದಾಟಗಳಲ್ಲಿ ತೀವ್ರವಾಗಿ ಗಾಯಗೊಳ್ಳುವ ರೋಗಿಗಳಿಗೆ ಟ್ರಾಮಾ ಸೆಂಟರ್ ವರದಾನವಾಗಲಿದೆ. ಅಪಘಾತಗಳಲ್ಲಿ ಯಲುಬು ಮುರಿದು, ತಲೆಗೆ ತೀವ್ರವಾದ ಪೆಟ್ಟುಗಳಾದಾಗ, ಇನ್ನು ಅಪಘಾತ ಸ್ಥಳದಲ್ಲಿ ತೀವ್ರ ರಕ್ತಸ್ರಾವವಾಗಿ ಜಿಲ್ಲಾಸ್ಪತ್ರೆ ಬರುವ ರೋಗಿಗಳನ್ನ ಬದುಕಿಸಲು ವೈದ್ಯರು ಪ್ರಯತ್ನ ಮಾಡ್ತಾರೆ. ಆದ್ರೆ ಗಾಯಗಳು ಆಳವಾಗಿದ್ದರೆ, ತಕ್ಷಣವೇ ಆಫರೇಶನ್ ಅವಶ್ಯಕತೆ ಇದ್ದಲ್ಲಿ ಅಂತಹ ರೋಗಿಗಳನ್ನ ಅನಿವಾರ್ಯವಾಗಿ ಬೇರೆಡೆ ಕಳುಹಿಸಿಕೊಡಬೇಕಾಗುತ್ತದೆ. ಆದ್ರೆ ಅಷ್ಟೊತ್ತಿಗೆ ರೋಗಿಗಳ ಸ್ಥಿತಿ ಗಂಭೀರವಾಗಿ ಪ್ರಾಣಕ್ಕೆ ಹಾನಿಯಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಅಪಘಾತ, ಗಾಯಗೊಂಡ ಪ್ರಕರಣಗಳಿಗಾಗಿಯೇ ಇರುವ ಟ್ರಾಮಾ ಸೆಂಟರ್ ನಲ್ಲಿ ಎಲ್ಲ ರೀತಿಯ ತುರ್ತು ವ್ಯವಸ್ಥೆಗಳಿರುತ್ವೆ. ಇಲ್ಲಿ ಗಾಯಾಗಳುಗಳ ಪ್ರಾಣ ಉಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ ಗಾಯಾಳುಗಳ ಪ್ರಾಣ ಉಳಿಸಬೇಕಿರುವ ಟ್ರಾಮಾ ಸೆಂಟರ್ ವಿಜಯಪುರ ಜಿಲ್ಲೆಯ ಜನರಿಗೆ ಈಗ ಮರಿಚಿಕೆಯಾಗಿಯೇ ಉಳಿದಿದೆ.
35 ಕೋಟಿ ಖರ್ಚು ; ಕಾರ್ಯಾರಂಭದ ಭಾಗ್ಯ ಇಲ್ಲ..!: ಪುಟ್ಟರಾಜ ಗವಾಯಿ ಟ್ರಾಮಾ ಹಾಗೂ ಅಸ್ಥಿ ಚಿಕಿತ್ಸಾ ಕೇಂದ್ರ ನಿರ್ಮಾಣಕ್ಕೆ 35 ಕೋಟಿಯವರೆಗು ಖರ್ಚಾಗಿದೆ ಎನ್ನಲಾಗಿದೆ. ಸಧ್ಯ ಕಾರ್ಯನಿರ್ವಹಣೆಗೆ ಬೇಕಾದ ಯಾವೊಂದು ವ್ಯವಸ್ಥೆಗಳು ಆಗಿಲ್ಲ. ಇನ್ನು ಕಾರ್ಯಾರಂಭ ಮಾಡಬೇಕಾಗಿರೋದು ವೈಧ್ಯಕೀಯ ಶಿಕ್ಷಣ ಇಲಾಖೆ, ಆದ್ರೆ ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರು ಶರಣಪ್ರಕಾಶ ಪಾಟೀಲ್ ಗಮನ ಹರಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ.
ಸಿಡಬ್ಲ್ಯೂಆರ್‌ಸಿ ತೀರ್ಪಿನ ಬಿಕ್ಕಟ್ಟು ನಿವಾರಣೆಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲಿ: ಸಚಿವ ಚಲುವರಾಯಸ್ವಾಮಿ
ಟ್ರಾಮಾ ಸೆಂಟರ್ ಕಾರ್ಯನಿರ್ವಹಣೆಗೆ ಏನೇಲ್ಲ ಬೇಕು?: ಇನ್ನು ಟ್ರಾಮಾ ಸೆಂಟರ್ ಕಾರ್ಯಾರಂಭ ಮಾಡಬೇಕಾದ್ರೆ ಅಲ್ಲಿ ವೈದ್ಯಕೀಯ ಉಪಕರಣಗಳು ಬೇಕು. ಅಲ್ಲದೆ ಅಗತ್ಯ ತಜ್ಞವೈದ್ಯರ ನೇಮಕ ಮಾಡಿಕೊಳ್ಳಬೇಕು, ಇನ್ನು ಸಿಬ್ಬಂದಿಗಳ ನೇಮಕವಾಗಬೇಕಿದೆ. ಆದ್ರೆ ಇಡೀ ಕಟ್ಟಡ ಉದ್ಘಾಟನೆಗೊಂದು ಒಂದು ವರೆ ವರ್ಷವಾರದ್ರೂ ಈ ವರೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ಖ್ಯಾರೆ ಎನ್ನುತ್ತಿಲ್ಲ. ಟ್ರಾಮಾ ಸೆಂಟರ್ ಆರಂಭಗೊಂದಲ್ಲಿ ಜಿಲ್ಲಾಸ್ಪತ್ರೆಯಲ್ಲಿರುವ ರೋಗಿಗಳ ಒತ್ತಡವು ಕಡಿಮೆಯಾಗಲಿದೆ. ಇತ್ತ ನಿತ್ಯ ಜಿಲ್ಲಾಸ್ಪತ್ರೆಗೆ ಬರುವ ನೂರಾರು ರೋಗಿಗಳಿಗೆ ಅನುಕೂಲದ ಜೊತೆಗೆ ಸೂಕ್ತ ಚಿಕಿತ್ಸೆಯು ಸಿಗಲಿದೆ.