ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ, 416ನೇ ಮೈಸೂರು ದಸರಾ ಮಹೋತ್ಸವಕ್ಕೆ ಗವಿಶ್ರೀಗಳಿಂದ ಚಾಲನೆ

Published : Oct 11, 2026, 01:19 PM IST
Mysuru Dasara 2026

ಸಾರಾಂಶ

416ನೇ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ಗವಿಶ್ರೀಗಳು ಚಾಲನೆ ನೀಡಿದರು. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕುಟುಂಬ ಸಮೇತ ಭಾಗವಹಿಸಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಇದೇ ವೇಳೆ ಸಚಿವ ಯತೀಂದ್ರ ಸಿದ್ದರಾಮಯ್ಯ ಸರ್ಕಾರದ 6ನೇ ಗ್ಯಾರಂಟಿ ಬಗ್ಗೆ ಪ್ರಸ್ತಾಪಿಸಿದರು.

ಮೈಸೂರು: ವಿಶ್ವವಿಖ್ಯಾತ 'ನಾಡಹಬ್ಬ' 416ನೇ ಮೈಸೂರು ದಸರಾ ಮಹೋತ್ಸವಕ್ಕೆ ಗವಿಶ್ರೀಗಳು ಚಾಲನೆ ನೀಡಿದ್ದಾರೆ. ಇಂದು ಬೆಳಗ್ಗೆ 11.50 ರಿಂದ 12.13ರ ಶುಭ ಧನುರ್ ಲಗ್ನದಲ್ಲಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರೀಗಳು ದಸರಾ ಉದ್ಘಾಟನೆ ಮಾಡಿದರು. ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿಎಂ ಡಿಕೆ ಶಿವಕುಮಾರ್ ಅವರು ಕುಟುಂಬ ಸಮೇತ ಆಗಮಿಸಿದ್ದರು. ಡಿಕೆಶಿ ಅವರಿಗೆ ಸಿಎಂ ಆಗಿ ಇದು ಮೊದಲ ದಸರಾ ಆಗಿದ್ದು, ಕಾರ್ಯಕ್ರಮ ಉದ್ಘಾಟನೆ ಮುನ್ನ ನಂದಿಧ್ವಜಕ್ಕೆ ಸಿಎಂ ಪೂಜೆ ಸಲ್ಲಿಕೆ ಮಾಡಿದ್ದರು.

ಚಾಮುಂಡೇಶ್ವರಿಗೆ ಹಂಸವಾಹಿನಿ ಅಲಂಕಾರ

ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಕಾರ್ಯಕ್ರಮಕ್ಕಾಗಿ ಭವ್ಯ ವೇದಿಕೆ ನಿರ್ಮಿಸಲಾಗಿತ್ತು. ಬೆಳಿಗ್ಗೆ 5 ಗಂಟೆಯಿಂದಲೇ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕಾರ್ಯ ನಡೆಸಲಾಗಿತ್ತು. ವಿಶೇಷ ಪೂಜೆ ಸಲ್ಲಿಸಿ, ಬೆಳ್ಳಿ ಫಲ್ಲಕ್ಕಿಯಲ್ಲಿರಿಸಿ ಪೂಜೆ ನೆರವೇರಿಸಲಾಯಿತು. ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮಹಿಷ ಮರ್ದಿನ ಅವತಾರದ ಅಲಂಕಾರ ಮಾಡಲಾಗಿತ್ತು. ದೇವಾಲಯದ ಚಾಮುಂಡೇಶ್ವರಿಗೆ ಹಂಸವಾಹಿನಿ ಅಲಂಕಾರ ಮಾಡಿದ್ದು, ವಿಶೇಷವಾಗಿತ್ತು.

ಬೆಳ್ಳಿ‌ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ಮೆರವಣಿಗೆ ಮಾಡಿ ದಸರಾ ಉದ್ಘಾಟನೆಗಾಗಿ ವೇದಿಕೆಗೆ ಆಗಮಿಸಲಾಗಿತ್ತು. ವೇದಿಕೆ ಬಲಭಾಗದಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ನೇರಳೆ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತೊರುವ ಉತ್ಸವ ಮೂರ್ತಿಗೆ ಶ್ರೀಗಳು ಪುಷ್ಪಾರ್ಚನೆ ಮಾಡಿ ದಸರಾಗೆ ಚಾಲನೆ ನೀಡಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತರಿಗೆ ಸುಮಾರು ಎರಡು ಸಾವಿರ ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ ಅಲಂಕೃತ ಶ್ರೀ ಚಾಮುಂಡೇಶ್ವರಿ ದೇವಿಗೆ ಭಕ್ತರ ನಮನ ಸಲ್ಲಿಸಿದರು.

ಇನ್ನು, ಮೊದಲ ದಿನವೇ ಚಾಮುಂಡಿ ಬೆಟ್ಟ ಭಕ್ತಿರಿಂದ ತುಂಬಿ ತುಳುಕುತ್ತಿತ್ತು. ಬೆಂಗಳೂರು ಸೇರಿ ಉತ್ತರ ಕರ್ನಾಟಕ ಭಾಗದಿಂದ ಬಂದ ಹೆಚ್ಚು ಭಕ್ತರು ಈ ಬಾರಿ ದಸರಾಗೆ ಆಗಮಿಸಿದ್ದರು. ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಯತೀಂದ್ರ ಸಿದ್ದರಾಮಯ್ಯ ಅವರು, ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಗವಿಶ್ರೀ ಅವರಿಗೆ ಧನ್ಯವಾದ ಅರ್ಪಿಸಿದರು. ಇದೇ ಸಂದರ್ಭದಲ್ಲಿ ಸರ್ಕಾರ ಸಾಧನೆಗಳನ್ನು ಪ್ರಸ್ತಾಪಿಸಿದ ಯತೀಂದ್ರ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಪಂಚ ಗ್ಯಾರಂಟಿಗಳನ್ನು ನೀಡಿದರೆ, ಈಗಿನ ಸಿಎಂ ಡಿಕೆ ಶಿವಕುಮಾರ್ ಮತ್ತೊಂದು ಮುಂದೇ ಹೆಜ್ಜೆ ಹಾಕಿ 6ನೇ ಗ್ಯಾರಂಟಿಯನ್ನು ನೀಡಿದ್ದಾರೆ. ಜನರಿಗೆ ತಮ್ಮ ಭೂಮಿ ದಾಖಲೆಗಳನ್ನು ನೀಡುವ ಮೂಲಕ 6ನೇ ಗ್ಯಾರಂಟಿ ನೀಡಿದ್ದಾರೆ. ಕೇವಲ 125 ದಿನಗಳಲ್ಲಿ ಅತೀ ಹೆಚ್ಚು ಗ್ಯಾರಂಟಿಗಳನ್ನು ಸಿಎಂ ಘೋಷಣೆ ಮಾಡಿದ್ದಾರೆ. ಆರೋಗ್ಯ, ಶಿಕ್ಷಣ, ಗ್ರಾಮೀಣ ಅಭಿವೃದ್ಧಿ, ಯುವ ಜನತೆ ಅಭಿವೃದ್ಧಿ, ಹೂಡಿಕೆಗಳಲ್ಲಿ ತಮ್ಮ ದೂರದೃಷ್ಟಿ ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

PREV
Read more Articles on
click me!

Recommended Stories

ಅಮೆರಿಕಾದಲ್ಲಿರೋ ಬೆಂಗಳೂರಿನ ಕುರುಬರಹಳ್ಳಿ, ಲಗ್ಗೆರೆ ಬ್ರಿಡ್ಜ್‌ : ವಿಡಿಯೋ ವೈರಲ್!
Bengaluru: ಇಂದಿರಾ ಕ್ಯಾಂಟೀನ್‌ನಿಂದ ಅನ್ನ, ಸಾಂಬಾರ್, ಪಲ್ಯ, ಪಾಯಸ ಮಾಯ; ಮೆನು ಉಲ್ಲಂಘನೆ