* 10 ಸಾವಿರ ಜನ ನೋಂದಣಿ: ಡಾ. ಭುಜಂಗಶೆಟ್ಟಿ
* ನಾಲ್ವರಿಗೆ ಉಪಯೋಗವಾದ ಅಪ್ಪು ಕಣ್ಣುಗಳು
* ಮೃತರ ಜತೆ ಮಣ್ಣಾಗುವ ಕಣ್ಣುಗಳು ಸದುಪಯೋಗ ಬಗ್ಗೆ ಅರಿವು ಮೂಡಿಸಬೇಕು
ಬೆಂಗಳೂರು(ಡಿ.20): ನಟ ಪುನೀತ್(Puneeth Rajkumar) ಅವರಿಂದ ಪ್ರೇರಣೆಗೊಂಡ ನೇತ್ರದಾನ ದೊಡ್ಡ ಪ್ರಮಾಣದಲ್ಲಿ ನಡೆಯಲು ಆರಂಭವಾಗಿದೆ. ಅವರ ನಿಧನದ ನಂತರ 400 ಕಣ್ಣುಗಳನ್ನು ದಾನ ಕೊಡಲಾಗಿದ್ದು, 10 ಸಾವಿರ ಮಂದಿ ನೇತ್ರದಾನಕ್ಕೆ(Eye Donation) ನೋಂದಣಿ ಮಾಡಿಸಿದ್ದಾರೆ ಎಂದು ನಾರಾಯಣ ನೇತ್ರಾಲಯ(Narayana Nethralaya) ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಭುಜಂಗ ಶೆಟ್ಟಿ(Dr. K Bhujang Shetty) ಹೇಳಿದರು.
ಡಾ.ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕಾಡುಮಲ್ಲೇಶ್ವರ ಗೆಳೆಯರ ಬಳಗ ಜಂಟಿಯಾಗಿ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ನಟ ‘ಪುನೀತ್ ರಾಜಕುಮಾರ್ ಸ್ಮರಣೆ, ಸಂಸ್ಕೃತಿ ಸಿರಿ’ ಪ್ರಶಸ್ತಿ ಪ್ರದಾನ ಹಾಗೂ ಡಾ.ರಾಜ್‌ಕುಮಾರ್-ಪುನೀತ್ ರಾಜ್‌ಕುಮಾರ್ ಗೀತನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
undefined
ಅಕ್ಷಿ ಸಿನಿಮಾ ನೋಡಿ ನನ್ನ ಮಗ ನೇತ್ರದಾನಕ್ಕೆ ಮುಂದಾದ: ಜಾಕ್ ಮಂಜುನಾಥ್
ಡಾ.ರಾಜ್‌ಕುಮಾರ್(Dr Rajkumar), ಪಾರ್ವತಮ್ಮ ರಾಜಕುಮಾರ್(Parvathamma Rajkumar) ಹಾಗೂ ಪುನೀತ್ ರಾಜಕುಮಾರ್ ಕಣ್ಣುಗಳನ್ನು ನೀಡಿ ಮಾದರಿಯಾಗಿದ್ದಾರೆ. ಅಪ್ಪು ಕಣ್ಣುಗಳು ನಾಲ್ವರಿಗೆ ಉಪಯೋಗವಾದ ಬೆನ್ನಲ್ಲೆ ಕಳೆದ ಒಂದೂವರೆ ತಿಂಗಳಲ್ಲಿ 400 ಕಣ್ಣುಗಳು ದಾನವಾಗಿ ಲಭಿಸಿವೆ. 10 ಸಾವಿರ ಮಂದಿ ನೇತ್ರದಾನಕ್ಕೆ ನೋಂದಣಿ ಮಾಡಿಸಿದ್ದಾರೆ. ಅಲ್ಲದೇ ಕಣ್ಣುಗಳ ಸಂಗ್ರಹದ ಕೊರತೆ ನೀಗಿಸಲು ಮೃತ ವ್ಯಕ್ತಿಗಳ ನೇತ್ರ ದಾನವಾಗಿ ಪಡೆಯಲು ಎಲ್ಲರೂ ರಾಯಭಾರಿಯಂತೆ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.
ನಿಮ್ಮ ಸುತ್ತಮುತ್ತಲಿನ ಪ್ರದೇಶ, ಮನೆಗಳಲ್ಲಿ ಯಾರಾದರೂ ಮೃತಪಟ್ಟಲ್ಲಿ ಅವರ ಕುಟುಂಬಸ್ಥರನ್ನು ಸಂಪರ್ಕಿಸಿ ಮೃತರ ಜತೆ ಮಣ್ಣಾಗುವ ಕಣ್ಣುಗಳು ಸದುಪಯೋಗ ಬಗ್ಗೆ ಅರಿವು ಮೂಡಿಸಬೇಕು. ಕುಟುಂಬಸ್ಥರು ಮೃತರ ಕಣ್ಣು ನೀಡಲು ಒಪ್ಪಿದರೆ ಕೂಡಲೇ ಡಾ.ರಾಜ್ ಕುಮಾರ್ ನೇತ್ರದಾನ ಕೇಂದ್ರಕ್ಕೆ(Dr. Raj Kumar Eye Donation Center) (ಮೊ.9741685555) ಕರೆ ಮಾಡುವಂತೆ ಕೋರಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ(Padma Shri) ಮಾತಾ ಬಿ.ಮಂಜಮ್ಮ ಜೋಗತಿ(Manjamma Jogati), ನಮ್ಮಂತವರಿಗೂ ಬದುಕುವ ಹಕ್ಕಿದೆ. ನಿಮ್ಮ ಊರು, ಓಣಿ, ಮನೆ ಸುತ್ತಮುತ್ತ ತೃತೀಯ ಲಿಂಗಿಗಳು ಇದ್ದರೆ ಅವರನ್ನು ಎಲ್ಲರಂತೆ ನೋಡಿ. ಮನೆಯಿಂದ ಹೊರ ಹಾಕದೆ ಶಿಕ್ಷಣ ನೀಡಿ ಪ್ರೋತ್ಸಾಹಿಸಿ. ಇಲ್ಲವಾದರೆ ಅವರು ಕೆಟ್ಟಹಾದಿ ತುಳಿಯಬಹುದು ಎಂದರು.
ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಮಲ್ಲೇಪುರಂ.ಜಿ. ವೆಂಕಟೇಶ್, ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ ಶಿವರಾಂ, ರಾಜ್ಯ ಜಲಮಂಡಳಿ ಮುಖ್ಯ ಅಭಿಯಂತರ ಮಾಧವ, ಪ್ರತಿಷ್ಠಾನ ಗೌರವ ಅಧ್ಯಕ್ಷ ಡಾ.ಹಿ.ಚಿ.ಬೋರಲಿಂಗಯ್ಯ, ಅಧ್ಯಕ್ಷ ಡಾ.ವೇಮಗಲ್ ನಾರಾಯಣ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
Puneeth Rajkumar; ಪುನೀತ್ ಮಾದರಿ ಹೆಜ್ಜೆಯ ನಂತರ ನೇತ್ರದಾನಕ್ಕೆ ಹೆಚ್ಚಾದ ನೋಂದಣಿ
ಪುರಸ್ಕೃತರು:
2020 ಮತ್ತು 2021ನೇ ಸಾಲಿನ ಡಾ.ವೇಮಗಲ್ ನಾರಾಯಣಸ್ವಾಮಿ ‘ಸಂಸ್ಕೃತಿ ಸಿರಿ’ ಪ್ರಶಸ್ತಿಯನ್ನು ಕಲಾವಿದೆ ‘ಮಾತಾ.ಬಿ.ಮಂಜಮ್ಮ ಜೋಗತಿ’, ರಂಗಕರ್ಮಿ ‘ಶ್ರೀನಿವಾಸ್ ಜಿ.ಕಪ್ಪಣ್ಣ’, ರಂಗ ಸಂಘಟಕ ‘ಕೆ.ರೇವಣ್ಣ’, ಸಂಗೀತ ಕಲಾವಿದೆ ‘ಡಾ.ರೋಹಿಣಿ ಮೋಹನ್’, ಕಿರುತೆರೆ ನಿರ್ದೇಶಕ ‘ಸಿರಿಗಂಧ ಶ್ರೀನಿವಾಸಮೂರ್ತಿ’, ಲೇಖಕಿ ‘ಡಾ.ಲೀಲಾ ಸಂಪಿಗೆ’, ಗಾಯಕರಾದ ‘ಡಾ.ಬಾನಂದೂರು ಕೆಂಪಯ್ಯ, ವೈ.ಕೆ.ಮುದ್ದುಕೃಷ್ಣ, ಮತ್ತು ಡಾ. ಅಪ್ಪಗೆರೆ ತಿಮ್ಮರಾಜು’, ನಿರೂಪಕಿ ‘ಡಾ.ವತ್ಸಲಾ ಮೋಹನ್’ ಹಾಗೂ ದಂಪತಿ ‘ಲಕ್ಷ್ಮೇ ನಿಂಗಪ್ಪ-ಡಾ.ಎಚ್.ಎಸ್.ನಿಂಗಪ್ಪ’ ಅವರಿಗೆ ನೀಡಿ ಗೌರವಿಸಲಾಯಿತು. ಆರು ಪ್ರಶಸ್ತಿ ತಲಾ 25 ಸಾವಿರ ಮತ್ತು ಐದು ಪ್ರಶಸ್ತಿ ತಲಾ 10 ಸಾವಿರ ರು. ನಗದು, ಸ್ಮರಣಿಕೆ ಒಳಗೊಂಡಿವೆ.
ಪುನೀತ್ ಪ್ರೇರಣೆ, ಜನ್ಮದಿನದಂದೆ ಶಾಸಕರಿಂದ ನೇತ್ರದಾನ
ಪುನೀತ್ ರಾಜಕುಮಾರ ನಿಧನದ ನಂತರ ಅವರು ದಾನ ಮಾಡಿದ್ದ ಕಣ್ಣುಗಳನ್ನು ನಾಲ್ಕು ಜನರಿಗೆ ಬೆಳಕು ಕೊಟ್ಟಿವೆ. ಇದೇ ಒಂದು ಕಾರಣಕ್ಕೆ ಇಡಿ ರಾಜ್ಯದ ಜನರು ಅವರ ದಾರಿಯಲ್ಲಿ ಹೋಗುತಿದ್ದಾರೆ. ನೇತ್ರದಾನ ಮಾಡಲು ಜನ ಮುಂದೆ ಬರುತಿದ್ದಾರೆ. ಸದ್ಯ ಪುನೀತ್ ಕಣ್ಣು ದಾನ ಮಾಡಿದ್ದನ್ನ ನೋಡಿದ ಧಾರವಾಡ(Dharwad) ಶಾಸಕ ಅಮೃತ ದೇಸಾಯಿ ಕೂಡ ತಮ್ಮ ಹುಟ್ಟುಹಬ್ಬದಂದೇ ತನ್ನ ಕುಟುಂಬದ ಜೊತೆಯಲ್ಲಿ ಕಣ್ಣು ದಾನಮಾಡಲು ನಿರ್ಧರಿಸಿದ್ದರು.