ಮದ್ದೂರು ಅಭಿವೃದ್ಧಿಗೆ 400 ಕೋಟಿ ರೂಪಾಯಿ ಬಿಡುಗಡೆ

By Kannadaprabha NewsFirst Published Dec 8, 2019, 7:26 AM IST
Highlights

ಮದ್ದೂರು ಕ್ಷೇತ್ರದ ಅಭಿವೃದ್ಧಿಗಾಗಿ 400 ಕೋಟಿ ಹಣ ಬಿಡುಗಡೆಗೊಳಿಸಲಾಗಿದೆ. ಹಲವಾರು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆಗೊಳಿಸಲಾಗಿತ್ತು. ಕಾರಣಾಂತರಗಳಿಂದ ಈ ಬಿಜೆಪಿ ಸರ್ಕಾರ ಅದನ್ನು ತಡೆಹಿಡಿಯಲಾಗಿದೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

ಮಂಡ್ಯ(ಡಿ.08): ಮದ್ದೂರು ಕ್ಷೇತ್ರನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಕಾಮಗಾರಿಗಾಗಿ ಪ್ರಸಕ್ತ ವರ್ಷ 400 ಕೋಟಿಗೂ ಹೆಚ್ಚು ಹಣ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.

ಹಾಗಲಹಳ್ಳಿ, ಮೆಳ್ಳಹಳ್ಳಿ, ಮೆಣಸಗೆರೆ ಗ್ರಾಮಗಳಲ್ಲಿ ನಡೆಯುತ್ತಿರುವ ಕಾಂಕ್ರೀಚ್‌ ರಸ್ತೆ, ಚರಂಡಿ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿ, ಸರ್ಕಾರದಿಂದ ಕಾಡಿಬೇಡಿ ಕ್ಷೇತ್ರದ ಅಭಿವೃದ್ಧಿಗಾಗಿ 400 ಕೋಟಿ ಹಣ ಬಿಡುಗಡೆಗೊಳಿಸಲಾಗಿದೆ. ಕೆಲವು ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನೂ ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದಿದ್ದಾರೆ.

ಮಂಗಳೂರು: ಗುಡ್ಡ ಕುಸಿದು ಮೂವರು ಕಾರ್ಮಿಕರ ದಾರುಣ ಸಾವು

ಇನ್ನೂ ಹಲವಾರು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆಗೊಳಿಸಲಾಗಿತ್ತು. ಕಾರಣಾಂತರಗಳಿಂದ ಈ ಬಿಜೆಪಿ ಸರ್ಕಾರ ಅದನ್ನು ತಡೆಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಹಣ ಬಿಡುಗಡೆಗೊಳಿಸಿ ಮತ್ತಷ್ಟುಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದಿದ್ದಾರೆ.

ರಸ್ತೆಯಲ್ಲಿ ಒಕ್ಕಣೆ ಮಾಡುವುದು, ಹಾಳು ಮಾಡುವುದು ಮಾಡಬೇಡಿ ಎಂದು ಮನವಿ ಮಾಡಿ ಇತ್ತೀಚೆಗೆ ಜನರ ಮನೋಭಾವನೆಗಳು ಕೂಡ ಬದಲಾಗುತ್ತಿವೆ. ಕೆಲಸ ಮಾಡುವ ಜನನಾಯಕರನ್ನು ಪ್ರೋತ್ಸಾಹಿಸುವ, ಬೆಂಬಲಿಸುವ ಮನೋಭಾವನೆ ಜನ ಸಾಮಾನ್ಯರೂ ಬೆಳಸಿಕೊಂಡರೆ ಮತ್ತಷ್ಟುಕೆಲಸ ಮಾಡಲು ಹುರುಪು ನೀಡಿದಂತಾಗುತ್ತದೆ. ಅದನ್ನು ಬಿಟ್ಟು ರಾಜಕೀಯವಾಗಿ ಕಿರುಕುಳ ನೀಡುವುದು, ಮನಬಂದಂತೆ ಮಾತನಾಡುವುದು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಅತ್ತಿಗೆಯನ್ನೇ ಭೀಕರವಾಗಿ ಕೊಂದಾಕಿದ ಬಾವ, ಮೈದುನ: ಕಾರಣ..?

ಇದೇ ವೇಳೆ ಜೆಡಿಎಸ್‌ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ತಾಪಂ ಮಾಜಿ ಸದಸ್ಯ ಎನ್‌.ಸಿ.ಪುಟ್ಟಸ್ವಾಮಿಗೌಡ, ಹಾಗಲಹಳ್ಳಿ ಪ್ರಕಾಶ್‌, ಮೆಣಸಗೆರೆ ಸುರೇಶ್‌, ಮುಡೀನಹಳ್ಳಿ ತಿಮ್ಮೇಗೌಡ, ಶಿವಲಿಂಗೇಗೌಡ, ಕೆ.ಟಿ.ಸುರೇಶ್‌ ಇದ್ದರು.

click me!