ಮಂಗಳೂರು: ಗುಡ್ಡ ಕುಸಿದು ಮೂವರು ಕಾರ್ಮಿಕರ ದಾರುಣ ಸಾವು

By Suvarna News  |  First Published Dec 7, 2019, 10:08 PM IST

ಗುಡ್ಡ ಕುಸಿದು ಮೂವರು ಕಾರ್ಮಿಕರ ದಾರುಣ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಘಟನೆಯಲ್ಲಿ ಇನ್ನೋರ್ವ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ.


ಮಂಗಳೂರು, [ಡಿ.07]: ಗುಡ್ಡ ಕುಸಿದು ಬಿದ್ದ ಪರಿಣಾಮ ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಶನಿವಾರ ವಿಟ್ಲದ ಒಡಿಯೂರು ಎಂಬಲ್ಲಿ ನಡೆದಿದೆ.

ರಮೇಶ್, ಪ್ರಕಾಶ್, ಬಾಳಪ್ಪ ಮೃತ ದುರ್ದೈವಿಗಳು. ಘಟನೆಯಲ್ಲಿ ಪ್ರಭಾಕರ್ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Tap to resize

Latest Videos

ಸಿಎಂಗೆ ಡಿಕೆಶಿ ವಾರ್ನ್, ಸ್ಥಗಿತವಾಗುತ್ತಾ ಐಡಿಯಾ,ವೋಡಾಫೋನ್; ಡಿ.07ರ ಟಾಪ್ 10 ಸುದ್ದಿ!

ಕಟ್ಟಡದ ಕಾಮಗಾರಿಗೆ ಜೆಸಿಬಿ ಮೂಲಕ ಪಿಲ್ಲರ್ ಗುಂಡಿ ಅಗೆಯಲಾಗುತ್ತಿದ್ದು, ಈ ವೇಳೆ ಆಕಸ್ಮಿಕವಾಗಿ ಧರೆ ಜರಿದು, ಪಿಲ್ಲರ್ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ ಎಂದು ಹೇಳುಲಾಗುತ್ತಿದೆ. ಆದ್ರೆ ಘಟನೆ ಆಗಿರುವ ಬಗ್ಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

Karnataka: Three workers dead and one injured following landslide at a construction site in Odiyoor of Bantwal Taluk, Dakshina Kannada. pic.twitter.com/XYrUtXk7cq

— ANI (@ANI)

ಈ ವೇಳೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮಣ್ಣಿನಲ್ಲಿ ಸಿಲುಕಿದ್ದ ಇನ್ನೋರ್ವ ಕಾರ್ಮಿಕ ಗಂಭೀರ ಗಾಯಗೊಂಡಿದ್ದಾರೆ .  ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ವಿಟ್ಲ ಠಾಣಾ ಪೊಲೀಸರು ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

click me!