Omicron Threat: ಬೆಂಗ್ಳೂರಲ್ಲಿ ಕೊರೋನಾ ಸ್ಫೋಟ: ಮೂರುವರೆ ತಿಂಗಳ ಬಳಿಕ 400 ಕೇಸ್‌..!

Kannadaprabha News   | Asianet News
Published : Dec 30, 2021, 04:13 AM ISTUpdated : Dec 30, 2021, 04:18 AM IST
Omicron Threat: ಬೆಂಗ್ಳೂರಲ್ಲಿ ಕೊರೋನಾ ಸ್ಫೋಟ: ಮೂರುವರೆ ತಿಂಗಳ ಬಳಿಕ 400 ಕೇಸ್‌..!

ಸಾರಾಂಶ

*  ವಿದೇಶದಿಂದ ಬಂದ ಸೋಂಕಿತರ ಸಂಖ್ಯೆ 78ಕ್ಕೆ ಏರಿಕೆ *  ಆನೇಕಲ್‌ಗೂ ಎಂಟ್ರಿ ಕೊಟ್ಟ ಒಮಿಕ್ರೋನ್‌ *  ಸೆ.15ರಂದು 462 ಪಾಸಿಟಿವ್‌ ಪ್ರಕರಣ ಪತ್ತೆ 

ಬೆಂಗಳೂರು(ಡಿ.30):  ನಗರದಲ್ಲಿ(Bengaluru) ಮೂರೂವರೆ ತಿಂಗಳ ಬಳಿಕ ಅತ್ಯಧಿಕ ಕೊರೋನಾ(Coronavirus) ಸೋಂಕಿನ ಪ್ರಕರಣಗಳು ಬುಧವಾರ ಪತ್ತೆಯಾಗಿವೆ. ಒಂದೇ ದಿನ 400 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ನಾಲ್ವರು ಮೃತಪಟ್ಟಿದ್ದಾರೆ(Death). ಸೆ.15ರಂದು 462 ಪಾಸಿಟಿವ್‌ ಪ್ರಕರಣ ಪತ್ತೆಯಾಗಿದ್ದವು. ನಂತರ ಕೊರೋನಾ ಸೋಂಕು ನಿಯಂತ್ರಣದಲ್ಲಿತ್ತು. ಇದೀಗ ನಿಧಾನವಾಗಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಪುರುಷರು 224 ಹಾಗೂ 176 ಮಹಿಳೆಯರಲ್ಲಿ ಹೊಸದಾಗಿ ಪತ್ತೆಯಾದ ಪ್ರಕರಣದಿಂದ ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 12,62,397ಕ್ಕೆ ತಲುಪಿದೆ. 130 ಸೋಂಕಿತರು ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು ಗುಣಮುಖರಾದವರ ಸಂಖ್ಯೆ 12,39,616ಕ್ಕೆ ಏರಿಕೆ ಆಗಿದೆ. ನಾಲ್ವರ ಸಾವಿನಿಂದ ಒಟ್ಟು ಸಾವಿನ ಸಂಖ್ಯೆ 16,393ಕ್ಕೆ ಏರಿಕೆ ಆಗಿದೆ. ಸದ್ಯ ಸೋಂಕಿಗೆ ಒಳಗಾಗಿರುವ 6,388 ಜನರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ(Treatment) ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Night Curfew: ಈ ರಾತ್ರಿ ಕರ್ಪ್ಯೂ ಲಾಜಿಕ್ ಏನು ಅನ್ನೋದೇ ಗೊತ್ತಾಗಲ್ಲ, ಖಾದರ್ ಕಿಡಿ

ಬಿಬಿಎಂಪಿ(BBMP) ವ್ಯಾಪ್ತಿಯ ಎಂಟು ವಲಯದಲ್ಲಿ ಒಟ್ಟು 84 ಕಂಟೈನ್ಮೆಂಟ್‌ ವಲಯಗಳು ಸಕ್ರಿಯವಾಗಿವೆ. ಈ ಪೈಕಿ ಬೊಮ್ಮನಹಳ್ಳಿಯಲ್ಲಿ 24, ಮಹದೇವಪುರ 17, ದಕ್ಷಿಣ 14, ಪೂರ್ವ 11, ಯಲಹಂಕ 11, ಪಶ್ಚಿಮ 5, ಆರ್‌ಆರ್‌ ನಗರ 1 ಹಾಗೂ ದಾಸರಹಳ್ಳಿಯಲ್ಲಿ 1 ಕಂಟೈನ್ಮೆಂಟ್‌ ವಲಯಗಳಿವೆ ಎಂದು ಕೋವಿಡ್‌ ವರದಿ ತಿಳಿಸಿದೆ.

ಹೈರಿಸ್ಕ್‌ ದೇಶದಿಂದ ಬಂದ 20 ಮಂದಿಗೆ ಕೊರೋನಾ

ಹೈರಿಸ್ಕ್‌ ದೇಶಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(Kempegowda International Airport) ಬುಧವಾರ ಆಗಮಿಸಿದ್ದ 20 ಮಂದಿ ಕೋವಿಡ್‌(Covid19) ಸೋಂಕಿತರಾಗಿದ್ದಾರೆ. ತನ್ಮೂಲಕ ಡಿ.1 ರಿಂದ ಡಿ.29ರ ಅವಧಿಯಲ್ಲಿ ವಿದೇಶದಿಂದ ಬಂದು ವಿಮಾನ ನಿಲ್ದಾಣದಲ್ಲಿ ಸೋಂಕು ದೃಢಪಟ್ಟವರ ಸಂಖ್ಯೆ 78ಕ್ಕೆ ಏರಿಕೆ ಕಂಡಿದೆ.

ಬುಧವಾರ ನಗರಕ್ಕೆ ಆಗಮಿಸಿದ ಪ್ಯಾರಿಸ್‌ನ 7, ಲಂಡನ್‌ ಮತ್ತು ಫ್ರ್ಯಾಂಕ್‌ಪರ್ಟ್‌ನ ತಲಾ 5, ಕುವೈಟ್‌, ಅರಬ್‌ ಸಂಯುಕ್ತ ಒಕ್ಕೂಟ ಮತ್ತು ಇಥಿಯೋಪಿಯಾದಿಂದ ಬಂದ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರೆಲ್ಲರ ಗಂಟಲ ದ್ರವದ ಮಾದರಿಗಳನ್ನು ಜಿನೋಮಿಕ್‌ ಸಿಕ್ವೆನ್ಸಿಂಗ್‌ಗೆ ಕಳುಹಿಸಿ ಕೊಡಲಾಗಿದೆ. ಸೋಂಕಿತರು ನಗರದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ರಾಜ್ಯಕ್ಕೆ ಇಂಗ್ಲೆಂಡ್‌ನಿಂದ ಬಂದ 33, ಜರ್ಮನಿಯ 13, ಫ್ರಾನ್ಸ್‌ನ 10, ದುಬೈನ 7, ಆಫ್ರಿಕಾ ಖಂಡದ 6, ಕುವೈತ್‌ನ 3, ಕತಾರ್‌ ಮತ್ತು ಅಮೆರಿಕದ ತಲಾ 2, ಹಾಗೂ ಡೆನ್ಮಾರ್ಕ್, ಇಥಿಯೋಪಿಯಾ ಬಂದ ಒಬ್ಬರಲ್ಲಿ ಸೋಂಕು ವರದಿಯಾಗಿದೆ.

Omicron Threat: ನೈಟ್‌ ಕರ್ಫ್ಯೂ ಅನಿವಾರ್ಯ: ಸಚಿವ ಆನಂದ್‌ ಸಿಂಗ್‌

ಆನೇಕಲ್‌ಗೂ ಎಂಟ್ರಿ ಕೊಟ್ಟ ಒಮಿಕ್ರೋನ್‌

ಆನೇಕಲ್‌(Anekal0: ತಾಲೂಕಿಗೂ ಒಮಿಕ್ರೋನ್‌ ಪ್ರವೇಶಿಸಿದ್ದು, ಸ್ಥಳೀಯರಲ್ಲಿ ಆತಂಕ ದುಪ್ಪಟ್ಟುಗೊಂಡಿದೆ. ತಾಲೂಕಿನ ಬಳ್ಳೂರಿನಲ್ಲಿರುವ ಅಪಾರ್ಟ್‌ಮೆಂಟ್‌ ಡಿ.23ರಂದು ದಕ್ಷಿಣ ಆಫ್ರಿಕಾದಿಂದ ಬಂದಿದ್ದ ವ್ಯಕ್ತಿ. ವಿಮಾನ ನಿಲ್ದಾಣದಲ್ಲಿ ಕೊರೋನಾ ಪರೀಕ್ಷೆಗೆ ಸ್ವಾಬ್‌ ಸಂಗ್ರಹಿಸಿದ್ದು, ಡಿ.24ರಂದು ಬಂದ ವರದಿಯಲ್ಲಿ ಸೋಂಕು ಹಬ್ಬಿರುವುದು ದೃಢಪಟ್ಟಿತ್ತು. ಕೂಡಲೇ ಆತನನ್ನು ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಮಾದರಿಯನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಒಮಿಕ್ರೋನ್‌(Omicron) ಇರುವುದು ಖಚಿತಗೊಂಡಿದೆ. ಕೂಡಲೇ ಆತನ ಸಂಪರ್ಕದಲ್ಲಿದ್ದರ ಪರೀಕ್ಷೆಗೊಳಪಡಿಸಲಾಗಿದ್ದು, ಎಲ್ಲರ ವರದಿ ನೆಗೆಟಿವ್‌ ಬಂದಿದೆ. ಸದ್ಯ ಆರೋಗ್ಯ ಇಲಾಖೆ ಸಿಬ್ಬಂದಿ ಅಪಾರ್ಟ್‌ಮೆಂಟ್‌ನಲ್ಲಿ ಮೊಕ್ಕಾಂ ಹೂಡಿದ್ದು, ಕಟ್ಟೆಚ್ಚರ ವಹಿಸಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ, ಇರಲಿ ಎಚ್ಚರ

ಡಿಸೆಂಬರ್ 29 ರಂದು ಹೊಸದಾಗಿ 566 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 6 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.  ಈ ಮೂಲಕ, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 30,05,798 ಕ್ಕೆ ಏರಿಕೆಯಾಗಿದ್ರೆ, ರಾಜ್ಯದಲ್ಲಿ ಈವರೆಗೆ ಕೊರೋನಾದಿಂದ 38,324 ಜನ ಸಾವನ್ನಪ್ಪಿದ್ದಾರೆ. 

 

PREV
Read more Articles on
click me!

Recommended Stories

ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್