
ಚಿಕ್ಕಮಗಳೂರು (ಡಿ. 29): ಇಲ್ಲಿನ ಜನರಿಗೆ ಆವತಿ ಹೋಬಳಿಯ ಬೆರಣಗೋಡು ಮುಖ್ಯ ರಸ್ತೆಯೇ (Main Road) ಶಾಪವಾಗಿ ಪರಿಣಮಿಸಿದೆ. ಗ್ರಾಮದಲ್ಲಿ ಯಾವುದೇ ಶುಭಸಮಾರಂಭಗಳು ಕೂಡ ನಡೆಯುತ್ತಿಲ್ಲ. ಇದಕ್ಕೆ ಕಾರಣವಾಗಿರುವುದು ಆ ಗ್ರಾಮದ ರಸ್ತೆ. ರಸ್ತೆ ದುಸ್ಥಿತಿಯಿಂದ ಗ್ರಾಮದಲ್ಲಿ 50ಕ್ಕೂ ಹೆಚ್ಚು ಯುವಕ-ಯುವತಿಯರು ಮದುವೆಯೇ (Marriage) ಆಗಿಲ್ಲ, ಇನ್ನು ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ.
Mudigere: ಇಲ್ಲಿ ನಿತ್ಯವೂ ಟ್ರಾಫಿಕ್ ಜಾಮ್, ರಸ್ತೆ ಅಗಲೀಕರಣ ಯಾವಾಗ?
ಸ್ವಾತಂತ್ರ್ಯ ಬಂದ ದಿನದಿಂದಲೂ ಸರಿಯಾದ ರಸ್ತೆಯಲ್ಲಿ ಇಲ್ಲದೇ ಗ್ರಾಮಸ್ಥರು ನಿತ್ಯ ಗುಂಡಿ ಬಿದ್ದ ರಸ್ತೆಯಲ್ಲೇ ಧೂಳಿನ ನಶೆಯಲ್ಲಿ ಸಾಗುವಂತಹ ಪರಿಸ್ಥಿತಿ. ಗ್ರಾಮವನ್ನು ಸಂಪರ್ಕಿಸುವ ಮುಖ್ಯರಸ್ತೆಯ 12ಕಿ.ಲೋ ಮೀಟರ್ ಉದ್ದಕ್ಕೂ ಗುಂಡಿ (Pathole) ಬಿದ್ದು ಹಾಳಾಗಿದೆ. ವಾಹನ ಸವಾರರು (Motorists) ಓಡಾಡುವುದೇ ಕಷ್ಟವಾಗಿದ್ದು. 250ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಈ ಗ್ರಾಮ ಮೂಡಿಗೆರೆ (Mudigere) ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತೆ. ರಸ್ತೆ ದುಸ್ಥಿತಿಯಿಂದ ಗ್ರಾಮಸ್ಥರ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
"
ಬಹಳ ಮುಖ್ಯವಾಗಿ ಆ ಗ್ರಾಮಕ್ಕೆ ಹೆಣ್ಣು ಕೊಡಲು ಅಥ್ವಾ ಗ್ರಾಮದಿಂದ ಹೆಣ್ಣ ತರಲು ಹಿಂದೇಟು ಹಾಕುತ್ತಿದ್ದಾರೆ ಪರಊರಿನ ಜನರು. ಮದುವೆ ಆಗದೇ ಉಳಿದ 55ಕ್ಕೂ ಹೆಚ್ಚು ಯುವಕ, ಯುವತಿಯರು ಇದ್ದು 25 ಗಂಡು ಮಕ್ಕಳು ,30ಕ್ಕೂ ಹೆಚ್ಚು ಹೆಣ್ಣುಮಕ್ಕಳು ಇನ್ನು ಮದುವೆಯೇ ಆಗಿಲ್ಲ. ಇದಕ್ಕೆ ಕಾರಣ ರಸ್ತೆ ಎನ್ನುವುದ ಗ್ರಾಮಸ್ಥರ ಆರೋಪ. ಜೊತೆಗೆ ರಸ್ತೆ ಸಮಸ್ಯೆ ಒಂದೇ ಅಲ್ಲ ಕಾಡಾನೆ ಕಾಟದಿಂದ ಜನರ ಜೀವನ ನಡೆಸುವುದೇ ಕಷ್ಟದಾಯಕವಾಗಿದೆ. ಕೇವಲ ಚುನಾವಣಾ ಸಮಯದಲ್ಲಿ ಮಾತ್ರ ಜನಪ್ರತಿನಿಧಿಗಳು ಬರುತ್ತಾರೆ ಅಂತಾ ಸ್ಥಳೀಯರ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ಸಂಬಂಧಿಸಿದ ಇಲಾಖೆ ಇತ್ತ ಕಡೆ ಗಮನವೇ ಹರಿಸುತ್ತಿಲ್ಲ .ಈ ರಸ್ತೆಯಲ್ಲಿ ಯಾರಾದರೂ ಸಂಚರಿಸಿದರೆ ಬೆನ್ನು ನೋವು, ಸೊಂಟ ನೋವು ಉಚಿತ. ವಾಹನ ಸಂಚಾರರು ಜೀವ ಭಯದಿಂದಲೇ ಸಂಚರಿಸಬೇಕಾಗಿದೆ. ಇನ್ನು ದ್ವಿಚಕ್ರವಾಹನಗಳ ಸವಾರರು ರಸ್ತೆಯ ನಡು ಭಾಗದಲ್ಲಿ ಸಂಚರಿಸುವುದು ಅಸಾಧ್ಯವಾಗಿದೆ. ಗ್ರಾಮದಲ್ಲಿ ಇರುವ ಮಹಿಳೆಯರು, ವಯಸ್ಸದವರು, ರೋಗಿಗಳು, ಗರ್ಭಿಣಿಯರ ಪಾಡು ಹೇಳತೀರದಂತಾಗಿದೆ. ಕೆಲ ವಿದ್ಯಾರ್ಥಿಗಳು ಕಾಲೇಜ್‌ಗೆ ಗುಡ್ ಬೈ ಹೇಳಿದ್ರೆ ಮತ್ತೆ ಕೆಲವರು ಹಾಸ್ಟೆಲ್ ಇದ್ದು ಓದುತ್ತಿದ್ದಾರೆ.
ಸರ್ಕಾರಗಳು ರಸ್ತೆಯ ಅಭಿವೃದ್ದಿಗೆ ವರ್ಷಂಪ್ರತಿ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಿದ್ರೂ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇರುವ ರಸ್ತೆಗಳ ಅಭಿವೃದ್ದಿಗೆ ಮುಂದಾಗದಿರುವುದು ವಿಪರ್ಯಾಸವೇ ಸರಿ. ಕೂಡಲೇ ಗ್ರಾಮೀಣ ಭಾಗದಲ್ಲಿ ಇರುವ ರಸ್ತೆಯನ್ನು ಅಭಿವೃದ್ದಿ ಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.