ಮೈಸೂರು ಮೃಗಾಲಯಕ್ಕೆ ಒಂದೇ ದಿನ 40 ಸಾವಿರ ಮಂದಿ ಭೇಟಿ!

Published : Dec 26, 2023, 09:59 AM IST
 ಮೈಸೂರು ಮೃಗಾಲಯಕ್ಕೆ ಒಂದೇ ದಿನ 40 ಸಾವಿರ ಮಂದಿ ಭೇಟಿ!

ಸಾರಾಂಶ

ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಸೋಮವಾರ ಒಂದೇ ದಿನ ದಾಖಲೆಯ 35,344 ಮಂದಿ ಭೇಟಿ ನೀಡಿದ್ದಾರೆ.

  ಮೈಸೂರು :  ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಸೋಮವಾರ ಒಂದೇ ದಿನ ದಾಖಲೆಯ 35,344 ಮಂದಿ ಭೇಟಿ ನೀಡಿದ್ದಾರೆ.

ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಶನಿವಾರ, ಭಾನುವಾರ ಮತ್ತು ಸೋಮವಾರ ಮೈಸೂರಿಗೆ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೃಗಾಲಯಕ್ಕೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.

ಡಿ. 23 ರಂದು 25,860 ಮಂದಿ, 24 ರಂದು 40,761 ಮಂದಿ ಮತ್ತು 25 ರಂದು 35,344 ಮಂದಿ ಭೇಟಿ ನೀಡಿದ್ದರು. ಇದೇ ದಿನದ ಕಳೆದ ವರ್ಷ ಕ್ರಮವಾಗಿ 16,682, 26,355 ಮತ್ತು 34,796 ಮಂದಿ ಭೇಟಿ ನೀಡಿದ್ದರು.

ತೆಯೇ ಮೈಸೂರು ಅರಮನೆಗೆ ಡಿ. 23 ರಂದು 26 ಸಾವಿರ ಮಂದಿ ಭೇಟಿ ನೀಡಿದ್ದರೆ, 24 ರಂದು 35,896 ಮಂದಿ ಮತ್ತು 25 ರಂದು 33,112 ಮಂದಿ ಭೇಟಿ ನೀಡಿದ್ದರು.

ಶಾಲಾ, ಕಾಲೇಜು ಮತ್ತು ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳಿಗೆ ಸಾಲು ಸಾಲು ರಜೆ ದೊರಕಿದ ಹಿನ್ನೆಲೆಯಲ್ಲಿ ಮೈಸೂರಿಗೆ ಲಕ್ಷಾಂತರ ಮಂದಿ ಭೇಟಿ ನೀಡಿದ್ದಾರೆ. ನಗರದ ಎಲ್ಲಾ ಹೊಟೇಲ್‌ಗಳು, ಸರ್ವೀಸ್‌ಅಪಾರ್ಟಮೆಂಟ್‌ಗಳು ಭರ್ತಿಯಾಗಿವೆ.

ನಗರದ ಚಾಮುಂಡಿಬೆಟ್ಟಕ್ಕೂ ಭಾನುವಾರ ಮತ್ತು ಸೋಮವಾರ ಲಕ್ಷಾಂತರ ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು. ದಸರಾ ಸಂದರ್ಭದಲ್ಲಿ ಮಾತ್ರ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಭಾನುವಾರ ಪ್ರವಾಸಿಗರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಅರಮನೆಯ ಒಂದು ಭಾಗದ ರಸ್ತೆಯನ್ನು ಏಕಮುಖ ಸಂಚಾರಗೊಳಿಸಿ, ಆ ರಸ್ತೆಗೆ ಸಂಪರ್ಕ ಕಲ್ಪಿಸುವ ಇತರೆ ರಸ್ತೆಗಳಲ್ಲಿ ವಾಹನ ಸಂಚರಿಸದಂತೆ ನೋಡಿಕೊಳ್ಳಲಾಗಿತ್ತು.

ಮೃಗಾಲಯದ ಒಳಗಿನಿಂದಲೇ ಎಸ್ಕೇಪ್ ಆದ ಕೋತಿ

ತಿರುವನಂತಪುರಂ (ಜೂನ್ 14, 2023): ಕೇರಳದ ತಿರುವನಂತಪುರಂ ಮೃಗಾಲಯದಲ್ಲಿ ಇತ್ತೀಚೆಗಷ್ಟೇ ಗ್ರೇ ಲಂಗೂರ್ ಅಥವಾ ಹನುಮಾನ್ ಮಂಕಿ ಎಂದು ಕರೆಯಲಾಗುವ ಕೋತಿಯನ್ನು ತರಲಾಗಿತ್ತು. ಆದರೆ, ಮಂಗಳವಾರ ಸಂಜೆ ಇದು ಝೂ ನಿಂದ ಎಸ್ಕೇಪ್‌ ಆಗಿದೆ. ಇನ್ನು, ಇತರರಿಗೆ ತೊಂದರೆ ನೀಡಬಹುದು ಅನ್ನೋ ಕಾರಣದಿಂದ ನೆರೆಹೊರೆಯ ಪ್ರದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.

ಇನ್ನೊಂದೆಡೆ, ಬುಧವಾರ (ಜೂನ್ 14) ಮೃಗಾಲಯದೊಳಗಿನ ಮರದ ಮೇಲೆ ಆ ಲಂಗೂರ್‌ ಕೋತಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಅಧಿಕಾರಿಗಳು ಪ್ರಾಣಿಯನ್ನು ಹಿಡಿದು ಬೋನಿಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಬಂದ ಪ್ರಾಣಿಗಳನ್ನು ವೀಕ್ಷಿಸಲು ಸಾರ್ವಜನಿಕರಿಗೆ ಮೃಗಾಲಯದ ಬಾಗಿಲು ತೆರೆಯುವ ಮುನ್ನವೇ ಈ ಘಟನೆ ನಡೆದಿದೆ. ಲಂಗೂರ್ ಪಂಜರದಿಂದ ಹಾರಿ ಪ್ರಾಣಿ ಸಂಗ್ರಹಾಲಯದಿಂದ ಓಡಿಹೋಗಿದ್ದು, ಮೃಗಾಲಯದ ಅಧಿಕಾರಿಗಳು ಕೋತಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಇದನ್ನು ಓದಿ: ಸಫಾರಿಗೆ ಹೋದವರ ಮೇಲೆ ಅಟ್ಟಿಸಿಕೊಂಡು ಹೋದ ವ್ಯಾಘ್ರ: ಪ್ರವಾಸಿಗರು ಜಸ್ಟ್ ಮಿಸ್!

ಈ ಮಧ್ಯೆ, ಇತ್ತೀಚೆಗೆ ಬಂದ ಪ್ರಾಣಿಗಳನ್ನು ಮೃಗಾಲಯದ ಸಿಬ್ಬಂದಿ ದುರ್ಬಳಕೆ ಮಾಡಿಕೊಂಡಿದ್ದು, ಪ್ರಾಣಿಗಳ ಬಗ್ಗೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಹನುಮಾನ್ ಕೋತಿಗೆ 15 ದಿನಗಳ ಕ್ವಾರಂಟೈನ್ ಅವಧಿಯನ್ನು ಪಾಲಿಸಲಾಗಿಲ್ಲ ಎಂದೂ ವರದಿಗಳು ಹೇಳುತ್ತಿವೆ. 

ಇದೇ ರೀತಿ, ಕಂದು ಬಣ್ಣದ ಬೆಂಗಾಲಿ ಮಂಗವೊಂದು ಮೃಗಾಲಯದಿಂದ ಓಡಿಹೋಗಿತ್ತು. ಆ ವೇಳೆ, ಮೃಗಾಲಯಕ್ಕೆ ಜನ ಭೇಟಿ ನೀಡುತ್ತಿದ್ದರು ಎಂದೂ ತಿಳಿದುಬಂದಿದೆ. ಮೃಗಾಲಯದ ಸಿಬ್ಬಂದಿ ಪಂಜರವನ್ನು ಸ್ವಚ್ಛಗೊಳಿಸುತ್ತಿದ್ದಾಗ 10 ವರ್ಷದ ಗಂಡು ಮಂಗ ನುಗ್ಗಿತ್ತು. ಬಳಿಕ  ಮೃಗಾಲಯದ ವೈದ್ಯರು ಕೋತಿಯನ್ನು ಗನ್‌ನಿಂದ ಅರವಳಿಕೆ ಮದ್ದು ನೀಡಲು ಪ್ರಯತ್ನಿಸಿದ್ರೂ, ಆಯುಧವು ಅಸಮರ್ಪಕವಾಗಿ ಕಾರ್ಯನಿರ್ವಹಿಸಿತು ಮತ್ತು ಅದರ ಗುರಿಯನ್ನು ತಪ್ಪಿಸಿಕೊಂಡಿತ್ತು.

ಇದನ್ನೂ ಓದಿ: ಬೀದಿ ನಾಯಿಗಳ ದಾಳಿಗೆ 11 ವರ್ಷದ ವಿಶೇಷಚೇತನ ಬಾಲಕ ಬಲಿ: ಕೇರಳ ಸರ್ಕಾರದ ವಿರುದ್ದ ಟೀಕೆ

ಈ ಮಂಗ ಕೂಡ ಹಿಂಸಾತ್ಮಕ ಮನೋಭಾವ ಹೊಂದಿರುವ ವರ್ಗಕ್ಕೆ ಸೇರಿದ್ದರಿಂದ ಅಧಿಕಾರಿಗಳು ಕಂಗಾಲಾಗಿದ್ದರು. ಬಳಿಕ, ಹೆಚ್ಚಿನ ನೌಕರರು ಆಗಮಿಸಿ ಭಾರೀ ಸದ್ದು ಮಾಡಿ ಕಲ್ಲು ತೂರಾಟ ನಡೆಸಿ ಕೋತಿಯನ್ನು ಓಡಿಸಿದರು. ನಂತರ, ಆ ಕೋತಿ ಕೆಳಕ್ಕೆ ಇಳಿದ ತಕ್ಷಣ ಪಂಜರದಲ್ಲಿ ಇರಿಸಲಾಗಿತ್ತು.

PREV
Read more Articles on
click me!

Recommended Stories

ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!
'ನಮ್ಮ ವಯಸ್ಸು ಮೀರುತ್ತಿದೆ, ಬೇಗ ಜಾಬ್ ಕರೆಯಲು ಹೇಳಿ ಸರ್' ಪೊಲೀಸ್ ಕಮಿಷನರ್ ಎದುರು ಗಳಗಳನೇ ಅತ್ತ ಕೊಪ್ಪಳ ಯುವತಿ