ಸರ್ಕಾರ ರಚನೆಯಾದ ಗಂಟೆಯೊಳಗೆ ಕಾಂಗ್ರೆಸ್ ಪ್ರಣಾಳಿಕೆಯ ಯೋಜನೆ ಜಾರಿಗೆ ಬದ್ದರಿದ್ದು, ಚುನಾವಣೆಯಲ್ಲಿ ನೀವು ಕೊಡುವ ಮತ ಒಬ್ಬ ಡಿಕೆಶಿ, ಸಿದ್ದು, ಡಾ,ಜಿ.ಪರಮೇಶ್ವರ್ ಹಾಗೂ ಚಂದ್ರಪ್ಪರಿಗೆ ನೀಡಿದಾಂತಾಗುತ್ತದೆ. ಹೀಗಾಗಿ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ.ವೆಂಕಟೇಶರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಯಕರ್ತರಿಗೆ ಕರೆ ನೀಡಿದರು.
ಪಾವಗಡ : ಸರ್ಕಾರ ರಚನೆಯಾದ ಗಂಟೆಯೊಳಗೆ ಕಾಂಗ್ರೆಸ್ ಪ್ರಣಾಳಿಕೆಯ ಯೋಜನೆ ಜಾರಿಗೆ ಬದ್ದರಿದ್ದು, ಚುನಾವಣೆಯಲ್ಲಿ ನೀವು ಕೊಡುವ ಮತ ಒಬ್ಬ ಡಿಕೆಶಿ, ಸಿದ್ದು, ಡಾ,ಜಿ.ಪರಮೇಶ್ವರ್ ಹಾಗೂ ಚಂದ್ರಪ್ಪರಿಗೆ ನೀಡಿದಾಂತಾಗುತ್ತದೆ. ಹೀಗಾಗಿ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ.ವೆಂಕಟೇಶರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಯಕರ್ತರಿಗೆ ಕರೆ ನೀಡಿದರು.
ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ.ವೆಂಕಟೇಶ್ ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ಮಂಗಳವಾರ ಹೆಲಿಕಾಪ್ಟರ್ ಮೂಲಕ ಪಾವಗಡಕ್ಕೆ ಆಗಮಿಸಿದ್ದ ಅವರು ಭರ್ಜರಿ ರೋಡ್ ಶೋನಲ್ಲಿ ಭಾಗವಹಿಸಿ ವೆಂಕಟೇಶ್ ಪರ ಮತಯಾಚಿಸಿದರು.
ಬೆಳಿಗ್ಗೆ 12 ಗಂಟೆಗೆ ಪಟ್ಟಣದ ಕ್ರೀಡಾಂಗಣದಿಂದಶೋ ಪ್ರಚಾರ ವಾಹನದಲ್ಲಿ ಆಗಮಿಸಿ, ನಗರದ ಟೋಲ್‌ಗೇಟ್‌ನಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾರ್ಲಾಪಣೆ ಸಲ್ಲಿಸಿದರು. ಬಳಿಕ ಚಳ್ಳಕರೆ ರಸ್ತೆ ಮೂಲಕ ರೋಡ್ ಶೋನಲ್ಲಿ ತೆರಳಿ ಇಲ್ಲಿನ ಎಸ್‌ಎಸ್‌ಕೆ ವೃತ್ತದ ಬಳಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿ, ಬಡವರಿಗೆ 10 ಕೆ.ಜಿ.ಅಕ್ಕಿ, ಮನೆಯ ಯಜಮಾನಿಗೆ 2 ಸಾವಿರ ಹಾಗೂ ಉಚಿತ ಸೇರಿ ನಿರುದ್ಯೋಗ ಯುವಕರಿಗೆ ಮಾಸಿಕ 3 ಸಾವಿರ ಸಹಾಯ ಧನ ನೀಡಲಾಗುವುದು. ಕ್ಯಾಬಿನೆಟ್ ರಚನೆಯಾದ ಕೂಡಲೇ ಕಾಂಗ್ರೆಸ್ ಗ್ಯಾರಂಟಿ ಕಾರ್ಡಿನಲ್ಲಿರುವ ಯೋಜನೆ ಜಾರಿಪಡಿಸುವುದಾಗಿ ಹೇಳಿದರು.
ಆಂಧ್ರದ ಮಾಜಿ ಸಚಿವ ರಘುವೀರರೆಡ್ಡಿ ಮಾತನಾಡಿ, ತಾಲೂಕಿನ ಪ್ರಗತಿಗೆ ಕಾಂಗ್ರೆಸ್ ಬೆಂಬಲಿಸಿ. ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ಒಬ್ಬ ಉತ್ತಮ ಯುವ ನಾಯಕ. ಬಡವರ ಬಗ್ಗೆ ಹೆಚ್ಚು ಕಾಳಜಿ ಇದೆ.
ಅತ್ಯಧಿಕ ಮತಗಳಿಂದ ಗೆಲ್ಲಿಸಿ ಡಿ.ಕೆ.ಶಿವಕುಮಾರ್ ಕೈಬಲಪಡಿಸುವಂತೆ ಕರೆ ನೀಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಪ್ಪ ಮಾತನಾಡಿ, ಜನಪರ ಆಡಳಿತ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಬಿಜೆಪಿ ವೈಖರಿಯಿಂದ ಜನತೆ ಬೇಸತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.
ಇದೇ ವೇಳೆ ಶಾಸಕ ವೆಂಕಟರಮಣಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್‌ಬಾಬು, ಎಚ್.ವಿ.ಕುಮಾರಸ್ವಾಮಿ, ವಿರಪಸಮುದ್ರ ರಾಮಾಂಜಿನಪ್ಪ, ಮುಖಂಡರಾದ ಎ.ಶಂಕರರೆಡ್ಡಿ, ಮಾನಂ ವೆಂಕಟಸ್ವಾಮಿ, ಪ್ರಮೋದ್‌ಕುಮಾರ್, ಚಂದ್ರಶೇಖರರೆಡ್ಡಿ, ನಾಗಾರ್ಜುನರೆಡ್ಡಿ, ಪಾಪಣ್ಣ, ವೆಂಕಟಮ್ಮನಹಳ್ಳಿ ಬತ್ತಿನೇನಿ ನಾಣಿ, ಕೋಟೆ ಪ್ರಭಾಕರ್, ಮೈಲಪ್ಪ, ಮದ್ದಿಬಂಡೆ ಎಂ.ಜೆ.ಕೃಷ್ಣಮೂರ್ತಿ, ಪುರಸಭೆ ಸದಸ್ಯರಾದ ಪಿ.ಎಚ್.ರಾಜೇಶ್, ರವಿ, ಮಹಮ್ಮದ್ ಇಮ್ರಾನ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಷಾಬಾಬು, ರಿಜ್ವಾನ್, ಯುವ ಘಟಕದ ಅಧ್ಯಕ್ಷ ಬಿ.ಸುಜಿತ್, ಹೊಸಹಳ್ಳಿ ಮಂಜುನಾಥ್ ಹಾಗೂ ಇತರರಿದ್ದರು.
ಜನಪರ ಆಡಳಿತ ನೀಡುವಲ್ಲಿ ಬಿಜೆಪಿ ವಿಫಲವಾಗಿದೆ. ಶೇ.40ರ ಪರ್ಸೆಂಟೇಜ್ ಲೂಟಿ ಸೇರಿದಂತೆ ಬರೀ ಸುಳ್ಳು ಹೇಳಿ ಜನತಯನ್ನು ದಿಕ್ಕು ತಪ್ಪಿಸುತ್ತಿದೆ. ಜೆಡಿಎಸ್‌ಗೆ ಭವಿಷ್ಯವಿಲ್ಲ. ಇದನ್ನು ಮನಗಂಡ 15 ಮಂದಿ ಶಾಸಕ ಹಾಗೂ ಮಾಜಿ ಸಚಿವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಸಚಿವ ಲಕ್ಷ್ಮಣ್ ಸವದಿ ಇತರೆ ಅನೇಕ ಪ್ರಮುಖ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿರುವುದು ನಿಶ್ಚಿತ.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ