40 ಮಂದಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ

By Kannadaprabha News  |  First Published Nov 1, 2021, 10:25 AM IST
  • ತಾಲೂಕಿನ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಜೆಡಿಎಸ್‌ನ ಅಜೆಂಡಾ ಪಕ್ಷಕ್ಕೆ ಸೇರ್ಪಡೆ
  • ಯುವಕರಿಗೆ ಉತ್ತಮ ಸ್ಥಾನಮಾನ ಕಲ್ಪಿಸಲಾಗುವುದು ಎಂದ ಮಾಜಿ ಶಾಸಕ

ಪಾವಗಡ (ನ.01):   ತಾಲೂಕಿನ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿ (Job Creation)  ಜೆಡಿಎಸ್‌ನ (JDS) ಅಜೆಂಡಾ ಪಕ್ಷಕ್ಕೆ ಸೇರ್ಪಡೆಯಾದ ಯುವಕರಿಗೆ ಉತ್ತಮ ಸ್ಥಾನಮಾನ ಕಲ್ಪಿಸಲಾಗುವುದು ಎಂದು ಮಾಜಿ ಶಾಸಕ ಕೆ. ಎಂ.ತಿಮ್ಮರಾಯಪ್ಪ (KM Thimmarayappa) ಭರವಸೆ ನೀಡಿದರು.

 ಪಟ್ಟಣದ ಹಳೇ ಕುಂಬಾರ ಬೀದಿ ಬಾಬೈಯನ ಗುಡಿ 12ಮತ್ತು 13ನೇ ವಾರ್ಡ್‌ನ 40ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ (Congress) ತೊರೆದು ಜೆಡಿಎಸ್‌ಗೆ (JDS) ಸೇರ್ಪಡೆಯಾದ ಬಳಿಕ ಸಮಾರಂಭದಲ್ಲಿ ಮಾತನಾಡಿದರು. 

Tap to resize

Latest Videos

ಏಜೆಂಟ್‌ರಾಗಿ ಕೆಲಸ ಮಾಡುವ ದುಸ್ಥಿತಿ ಬಂದಿಲ್ಲ: ದೇವೇಗೌಡ

ರಾಜ್ಯದ ಅಭಿವೃದ್ಧಿಗೆ ಕುಮಾರಸ್ವಾಮಿ (HD Kumaraswamy) ಸಿಎಂ ಆಗಬೇಕು. ತಾಲೂಕಿನಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕೆಂಬ ಸ್ಪಷ್ಟ ನಿಲುವು ಪಟ್ಟಣದ 12 ಮತ್ತು 13ನೇ ವಾರ್ಡಿನ 40ಕ್ಕಿಂತ ಹೆಚ್ಚು ಮಂದಿ ಕಾರ್ಯಕರ್ತರು ಸ್ವ ಇಚ್ಛೆಯಿಂದ ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಬಂದಿದ್ದಾರೆ. ತಾಲೂಕಿನ (taluk) ಸಾವಿರಾರು ಮಂದಿ ಯುವಕರು ಇನ್ನೂ ಸಂಪರ್ಕದಲ್ಲಿದ್ದಾರೆ.

 ಸೂಕ್ತ ಸಮಯದಲ್ಲಿ ಜೆಡಿಎಸ್‌ಗೆ ಬರಲಿದ್ದು ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ (Party organisation) ಹೇಗಿರಲಿದೆ ಎಂಬ ಸತ್ಯ ನಿಮಗೆ ಗೊತ್ತಾಗಲಿದೆ. ಯುವಕರಿಗೆ ಉದ್ಯೋಗ ಸೃಷ್ಟಿಸುವ ಪರಿಕಲ್ಪನೆ ಹಾಗೂ ಇತರೆ ಸಾಮಾಜಿಕ ಭದ್ರತೆ ಕಾರ್ಯಕ್ರಮಗಳ ರೂಪುರೇಷೆ ನಮ್ಮ ಮುಂದೆ ಇದೆ.

ಸಿಂದಗಿ ಬೈಎಲೆಕ್ಷನ್‌: ಕಾಂಗ್ರೆಸ್‌ ವಿರುದ್ಧ ದೇವೇಗೌಡ ವಾಗ್ದಾಳಿ

 ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಸದೃಢ ಜೆಡಿಎಸ್ ಪಕ್ಷ ಸಂಘಟನೆಗೆ ಶ್ರಮಿಸಲು ಕರೆ ನೀಡಿದರು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಅಂಜಿನಪ್ಪ (RC Anjinappa) ಮುಂದಿನ ಚುನಾವಣೆಯಲ್ಲಿ (Election) ಜಿಲ್ಲೆಯ 10 ತಾಲೂಕುಗಳ ಪೈಕಿ 8 ವಿಧಾನಸಭಾ ಕ್ಷೇತ್ರಗಳು ಜೆಡಿಎಸ್ ಪಾಲಾಗಲಿದ್ದು ಕುಮಾರಸ್ವಾಮಿ ಸಿಎಂ (Karnataka CM) ಆಗಬೇಕು. 

ತಾಲೂಕಿನಲ್ಲಿ ಕೆ.ಎಂ.ತಿಮ್ಮರಾಯಪ್ಪ ಶಾಸಕರಾಗಬೇಕೆಂಬ (MLA) ನಿಲುವಾಗಿದ್ದು ತಾಲೂಕಿನ ಸಾವಿರಾರು ಮಂದಿ ಯುವಕರ ಕನಸಾಗಿದೆ. ಈ ಕನಸು ನೆರೆವೇರುವ ಸಮಯ ಹತ್ತಿರದಲ್ಲಿಯೇ ಇದೆ ಎಂದ ಅವರು ತಾಲೂಕಿನ ಆಡಳಿತ ವೈಖರಿ ಬಗ್ಗೆ ಟೀಕಿಸಿದರು. ಮಾಜಿ ತಾಪಂ ಅಧ್ಯಕ್ಷ ಸೊಗಡು ವೆಂಕಟೇಶ್ (Sogadu Venkatesh) ಮಾತನಾಡಿ ಕೆಶಿಫ್ ರಸ್ತೆಯ ಆವೈಜ್ಞಾನಿಕತೆ ಕುಮಾರ ಸ್ವಾಮಿ ಬಡಾವಣೆಯಲ್ಲಿ 400 ಮನೆಗಳ ನಿರ್ಮಾಣ ಹಾಗೂ ಅಗಸರ ಕುಂಟೆಗೆ ಕೃಷ್ಣ ನದಿ ನೀರು (River water) ಸರಬರಾಜು ಸೇರಿ ಕೋಟ್ಯಂತರ ರು ವೆಚ್ಚದ ಪ್ರಗತಿ ಕಾರ್ಯಗಳು ತಿಮ್ಮರಾಯಪ್ಪ ಶಾಸಕರಿದ್ದ ಕಾಲದಲ್ಲಿ ಆಗಿವೆ. ಪಟ್ಟಣದಲ್ಲಿ ಇತ್ತೀಚೆಗೆ ಕೈಗೊಂಡ ಸೋಲಾರ್ (Solar) ನಿಧಿಯ 30ಲಕ್ಷ ವೆಚ್ಚದ ರಸ್ತೆಗಳು (Road) ಕಳಪೆಯಿಂದ ಕೂಡಿದ್ದು ಟಾರ್ ಹಾಕಿರುವ ರಸ್ತೆ ಮೇಲೆ ಮತ್ತೆ ಕಳಪೆ ಡಾಂಬರೀಕರಣ ಮಾಡಿದ್ದಾರೆ. 

ಮಳೆ (Rain) ಬಂದರೆ ಡಾಂಬರೀಕರಣ ರಸ್ತೆ ಕೊಚ್ಚಿ ಹೋಗಲಿದ್ದು ಕಾಂಗ್ರೆಸ್ ನ (Congress) ಕೆಲ ಗುತ್ತಿಗೆದಾರರರು ಕಾಮಗಾರಿಗಳ ಹೆಸರಿನಲ್ಲಿ ಹಣ (Money) ಲಪಾಟಾಯಿಸುವ ದಂಧೆಯಲ್ಲಿ ನಿರತರಾಗಿದ್ದಾರೆಂದು ಆರೋಪಿಸಿದರು. 

ಜೆಡಿಎಸ್ ಮುಖಂಡ ಗುಟ್ಟಹಳ್ಳಿ ಮಣಿ, ತಾಲೂಕು ಜೆಡಿಎಸ್ ಅಧ್ಯಕ್ಷ ಬಲರಾಮರೆಡ್ಡಿ, ಮುಖಂಡರಾದ ಲಕ್ಷ್ಮೀನಾರಾಯಣಪ್ಪ (ಡಿಐಜಿ)ಪಕ್ಷದ ಗೌರವಾಧ್ಯಕ್ಷ ರಾಜಶೇರಪ್ಪ ಮುಖಂಡರಾದ ಎಸ್.ಸಿ.ಕರಿಯಣ್ಣ ಮಧುಗಿರಿ  ಾಮಾಂಜಿನಪ್ಪ,ನಲ್ಲಪ್ಪ,ಕೊಂಡರಾಳ್ಳಪಲ್ಲಿ ರಾಮಪ್ಪ, ಮಾಜಿ ಪುರಸಭೆ ಸದಸ್ಯರಾದ ಮನುಮಹೇಶ್ ,ವಸಂತಕುಮಾರ್ ನಾಗೇಂದ್ರ ಶಾಂತಿ ನಗರದ ಸುಬ್ಬರಾಯಪ್ಪ ಹಾಗೂ ಯುವ ಮುಖಂಡರಾದ ದೇವಲಕೆರೆ ಲೋಕೇಶ್ ಕಾವಲಗರೆ ರಾಮಾಂಜಿನಪ್ಪ ಐ.ಟಿ.ಘಟಕದ ನಗರಾಧ್ಯಕ್ಷ ಕಾಫಿಡೇನ ಕೆ. ಹನುಮಂತರಾಯ ಹಾಗೂ ಇತರೆ ಹಲವಾರು ಮಂದಿ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

click me!