
ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಏ.30): ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಸರ್ಕಾರಿ ನೌಕರ ಕೊಡುವ ಭರವಸೆ ನಾಲ್ಕು ವರ್ಷ ಕಳೆದರು ಈಡೇರಿಲ್ಲ. ಮಹದೇಶ್ವರ ಬೆಟ್ಟದಲ್ಲಿ ನಡೆದ ಸಂಪುಟ ಸಭೆಯಲ್ಲಿ ಸರ್ಕಾರಿ ನೌಕರಿ ಸಿಗುವ ಭರವಸೆಯಿತ್ತು. ಅದರ ಜೊತೆಗೆ ಸಿಎಂ ನಗರಕ್ಕೆ ಭೇಟಿ ಕೊಟ್ಟಿದ್ದ ವೇಳೆ ನಮ್ಮ ಮಾತಿಗೆ ಸೊಪ್ಪು ಹಾಕಿಲ್ಲವೆಂದು ಆಕ್ಸಿಜನ್ ದುರಂತ ಸಂತ್ರಸ್ತರು ಅಳಲು ತೋಡಿಕೊಂಡಿದ್ದರು. ಅಲ್ಲದೇ ಕೆಪಿಸಿಸಿಯಿಂದ ಕೊಟ್ಟಿದ್ದ ಹಣ ವಾಪಾಸ್ ಹಾಗೂ ಆತ್ಮ*ಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದರು. ಈ ಹಿನ್ನಲೆ ಸಂಸದ, ಶಾಸಕರು, ಡಿಸಿ ನೇತೃತ್ವದಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ಏನ್ ನಿರ್ಧಾರವಾಯ್ತು ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ.
ಚಾಮರಾಜನಗರ ಪಟ್ಟಣದ ಸಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ದುರಂತಕ್ಕೆ ನಾಲ್ಕು ವರ್ಷವಾಗ್ತಿದೆ. ಆದ್ರೆ ಇಲ್ಲಿಯವರೆಗೂ ಕೂಡ ದುರಂತ ಸಂತ್ರಸ್ತರಿಗೆ ಸರ್ಕಾರಿ ನೌಕರಿ ಕೊಡುವ ಭರವಸೆ ಈಡೇರಿಲ್ಲ. ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಭೆ ವೇಳೆ ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಸರ್ಕಾರಿ ನೌಕರಿ ಸಿಗುವ ಭರವಸೆ ಇಟ್ಟುಕೊಂಡಿದ್ದರು, ಆದ್ರೆ ಈ ಭರವಸೆ ಹುಸಿಯಾಯಿತು. ಅಲ್ಲದೇ ಸಿಎಂ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಭೇಟಿ ಕೊಟ್ಟ ವೇಳೆಯೂ ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡರು ಕೂಡ ಸೊಪ್ಪು ಹಾಕಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದರು.
ಸುವರ್ಣ ನ್ಯೂಸ್ ಇಂಪ್ಯಾಕ್ಟ್: ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಗ್ರಾಮಗಳಿಗೆ ಆ್ಯಂಬುಲೆನ್ಸ್ ಸೇವೆ!
ಅಲ್ಲದೇ ಕೆಪಿಸಿಸಿಯಿಂದ ತಮ್ಮ ಕುಟುಂಬಕ್ಕೆ ಕೊಟ್ಟಿದ್ದ ಒಂದು ಲಕ್ಷ ರೂ ಪರಿಹಾರ ವಾಪಾಸ್ ಕೊಡುವುದಾಗಿ ಹಾಗೂ ಸಿಎಂ ಸಿದ್ದರಾಮಯ್ಯ ಹೆಸರು ಬರೆದು ಆತ್ಮ*ಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೇ ಮೇ 2 ರ ಡೆಡ್ ಲೈನ್ ಕೂಡ ಕೊಟ್ಟಿದ್ದರು. ಈ ಹಿನ್ನಲೆ ಎಚ್ಚೆತ್ತ ಜಿಲ್ಲಾಡಳಿತ ಇದೀಗಾ ಸಂತ್ರಸ್ತರ ಜೊತೆಗೆ ತುರ್ತು ಸಭೆ ನಡೆಸಿದರು. ಸಂಸದ ಸುನೀಲ್ ಬೋಸ್, ಶಾಸಕ ಪುಟ್ಟರಂಗಶೆಟ್ಟಿ, ಡಿಸಿ ಶಿಲ್ಪಾನಾಗ್ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದಲ್ಲಿ ಮಹತ್ವದ ಸಭೆ ನಡೆಸಿ ಸಂತ್ರಸ್ತರಿಗೆ ಮುಂದಿನ ಸಂಪುಟದಲ್ಲಿ ಸರ್ಕಾರಿ ನೌಕರಿ ಕೊಡುವ ಬಗ್ಗೆ ಸಿಎಂ, ಉಸ್ತುವಾರಿ ಸಚಿವರ ಜೊತೆಗೆ ಮಾತುಕತೆ ನಡೆಸಿ ಕಾಂಗ್ರೆಸ್ ಕೊಟ್ಟಿದ್ದ ಭರವಸೆ ಈಡೇರಿಸುವ ಭರವಸೆ ಕೊಟ್ಟರು..
ಇನ್ನೂ ತುರ್ತು ಸಭೆಯ ತೀರ್ಮಾನದ ಬಗ್ಗೆ ಸಂತ್ರಸ್ತರನ್ನು ಕೇಳಿದ್ರೆ ಮೇ 2 ಕ್ಕೆ ಅಂತಿಮ ತೀರ್ಮಾನ ಮಾಡಲೂ ಎಚ್ಚರಿಕೆ ಕೊಟ್ಟಿದ್ದೇವು. ಆ ಹಿನ್ನಲೆ ಇಂದು ಸಂಸದರು ಹಾಗೂ ಜಿಲ್ಲಾಡಳಿತ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಆ ವೇಳೆ ಮುಂದಿನ ಸಂಪುಟ ಸಭೆಯಲ್ಲಿ ಒನ್ ಟೈಮ್ ಸೆಂಟಲ್ ಮೆಂಟ್ ಅಥವಾ ಸರ್ಕಾರಿ ನೌಕರಿ ಬಗ್ಗೆ ಚರ್ಚೆಯಾಯಿತು. ನಮಗೆ ಗುತ್ತಿಗೆ ನೌಕರಿ ಅಥವಾ ಒನ್ ಟೈಮ್ ಸೆಂಟಲ್ ಬೇಡ ಸರ್ಕಾರಿ ಉದ್ಯೋಗವೇ ಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ. ಅಲ್ಲದೇ ಮುಂದಿನ ಸಂಪುಟ ಸಭೆಯವರೆಗೂ ಗಡುವು ಕೊಟ್ಟಿದ್ಧೇವೆ. ಒಂದು ವೇಳೆ ಭರವಸೆ ಈಡೇರದಿದ್ರೆ ಅಮರಣಾಂತ ಉಪವಾಸ ಮಾಡುವ ಎಚ್ಚರಿಕೆ ಕೊಟ್ಟಿದ್ದಾರೆ..
ಮಲೆ ಮಹದೇಶ್ವರ ಬೆಟ್ಟ ಮದ್ಯಪಾನ ಮುಕ್ತ: ಸಿಎಂ ಸಿದ್ದರಾಮಯ್ಯ
ಒಟ್ನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಸರ್ಕಾರಿ ನೌಕರಿ ಗ್ಯಾರಂಟಿ ಕೊಟ್ಟಿತ್ತು. ಆದ್ರೆ ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಕಳೆದರು ಕೂಡ ಈ ಭರವಸೆ ಈಡೇರಿಲ್ಲ. ಮುಂದಿನ ಸಂಪುಟ ಸಭೆಯಲ್ಲಾದರೂ ಈ ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಸರ್ಕಾರಿ ನೌಕರಿ ಸಿಗುತ್ತಾ ಅನ್ನೋದ್ನ ಕಾದು ನೋಡಬೇಕಾಗಿದೆ.