ಧಾರವಾಡ: 4 ವರ್ಷದಿಂದ‌ ಕರ್ತವ್ಯಕ್ಕೆ ಹಾಜರಾಗದ 3 ಪೋಲಿಸರು ವಜಾ: ಎಸ್ಪಿ ಜಗಲಾಸರ್

By Girish Goudar  |  First Published Sep 27, 2022, 9:04 PM IST

ಸೇವೆಯಿಂದ ವಜಾ ಮಾಡಿ‌ ಆದೇಶ ಹೊರಡಿಸಿ ಇಡೀ ಪೋಲಿಸ್ ಇಲಾಖೆಗೆ ಖಡಕ್ ಎಚ್ಚರಿಕೆ ರವಾನಿಸಿದ ಎಸ್ಪಿ ಲೊಕೇಶ್


ವರದಿ: ಪರಮೇಶ್ವರ ಅಂಗಡಿ‌, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ(ಸೆ. 27):  ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡೋದು ಅಂತಿಂತ ಕೆಲಸ ಅಲ್ಲ. ಇನ್ನು ಕೆಲವರು ಪೋಲಿಸ್ ಇಲಾಖೆಯಲ್ಲಿ ಕೆಲಸ ಮಾಡಬೇಕು ಎಂದು ಸಾಕಷ್ಟು ಅಭ್ಯರ್ಥಿಗಳ ಕಷ್ಟ ಪಡುತ್ತಿದ್ದಾರೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಮೂವರು ಪೋಲಿಸ್ ಪೇದೆಗಳು ಸದ್ಯ ಕೆಲಸಕ್ಕೂ ಹಾಜರಾಗದೆ ಕಳೆದ ನಾಲ್ಕು ವರ್ಷದಿಂದ ಬೇರೆಲ್ಲೂ ಇದ್ದುಕೊಂಡು ಪೊಲೀಸ್‌ ಇಲಾಖೆಯಿಂದ ಕಳೆದ ನಾಲ್ಕು ವರ್ಷದಿಂದ ವೇತನವನ್ನ ಪಡೆದಿರುತ್ತಾರೆ. ಸದ್ಯ ಮೂವರನ್ನ ಸೇವೆಯಿಂದ ವಜಾ ಮಾಡಿ ಎಸ್ಪಿ ಲೋಕೇಶ್ ಜಗಲಾಸರ್ ಆದೇಶ ಮಾಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

Tap to resize

Latest Videos

ಧಾರವಾಡ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷದಿಂದ ಡಿಎ‌ಆರ್ ವಿಭಾಗದಲ್ಲಿ ಇಬ್ಬರು ಪೇದೆಗಳು ಅಣ್ಣೀಗೇರಿ ಪೋಲಿಸ್ ಠಾಣೆಯ ಓರ್ವ ಪೇದೆ ಸೇರಿದಂತೆ ಮೂವರನ್ನ ಧಾರವಾಡ ಜಿಲ್ಲಾ ಎಸ್ಪಿ ಲೋಕೇಶ ಜಗಲಾಸರ್ ಸೇವೆಯಿಂದ ವಜಾ ಮಾಡಿ ಆದೇಶವನ್ನ ಮಾಡಿದ್ದು ಇಡೀ ಪೋಲಿಸ್ ಇಲಾಖೆಯಲ್ಲಿ ನಡುಕ ಹುಟ್ಟಿಸಿದಂತಾಗಿದೆ. ನಿಜಕ್ಕೂ ಇವರು 2017-18 ರಲ್ಲಿ ಸೇವೆಗೆ ಹಾಜರಾಗಿ ಒಂದೇ ಒಂದು ದಿನ ಸೇವೆ ಹಾಜರಾಗದೆ ಅವರು ಇಲಾಖೆಯಲ್ಲಿಯೇ ಕೆಲಸ ಮಾಡುತ್ತಿದ್ದೇನೆ ಅಂತ ಸುಳ್ಳು ಮಾಹಿತಿ ನೀಡಿ ಇಲಾಖೆಯಿಂದ ಕಳೆದ ನಾಲ್ಕು ವರ್ಷದಿಂದ ವೇತನವನ್ನ ಪಡೆದಿರುತ್ತಾರೆ. 

ಹುಬ್ಬಳ್ಳಿ ಪಾಲಿಕೆಯಿಂದ ರಾಷ್ಟ್ರಪತಿ ದ್ರೌಪದಿಗೆ ಪೌರಸನ್ಮಾನ

ಸದ್ಯ ಮೂವರನ್ನ‌ ಸೇವೆಯಿಂದ ವಜಾ ಗೊಳಿಸಿ ಎಸ್ಪಿ ಆದೇಶ ಮಾಡಿದ್ದಾರೆ. ಅವರು ತಮ್ಮ‌ ಸರಕಾರಿ ರಜೆಗಳನ್ನ ಪಡೆದುಕೊಂಡು ಹೋಗಿದ್ರೆ ಇಂತಹ ಆದೇಶ ಮಾಡ್ತಾ ಇರಲಿಲ್ಲ. ಆದರೆ ಆ ಮೂವರು ಪೋಲಿಸ್ ಇಲಾಖೆಗೆ ವಂಚನೆ ಮಾಡಿ ಸದ್ಯ ಮೂವರು ಎಲ್ಲೆ ಇದ್ದಕೊಂಡು ಕೆಲವರು ಕೋಚಿಂಗ್ ಪಡೆಯುತ್ತಿದ್ದರು ಎನ್ನಲಾಗುತ್ತದೆ. ಇನ್ನು ಕೆಲವರು ಮನೆಯಲ್ಲಿ ತಂದೆ ತಾಯಿಯ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ನೀಡಿ ಕರ್ತವ್ಯಕ್ಕೆ ಹಾಜರಾಗಿಲ್ಲ. ಇನ್ನು ಈ ಕುರಿತು ಎಸ್ಪಿ ಸದ್ಯ ತನಿಖೆ ಮಾಡಿ‌ ನೋಡಿದಾಗ ಎಲ್ಲವೂ ಸುಳ್ಳು ಅಂತ ಗೊತ್ತಾಗಿದೆ.

ಇನ್ನು ಧಾರವಾಡ ಜಿಲ್ಲೆಯಲ್ಲಿ ಮೂವರು ಪೊಲೀಸ್‌ ಪೇದೆಗಳನ್ನ ಸೇವೆಯಿಂದ ವಜಾ ಮಾಡಿ ಎಸ್ಪಿ ಉಳಿದೆಲ್ಲ ಪೋಲಿಸ್ ಸಿಬ್ಬಂದಿಗೆ ಖಡಕ್ ಸಂದೇಶವನ್ನ‌ ರವಾನೆ ಮಾಡಿದ್ದಾರೆ ಎಸ್ಪಿ ಲೋಕೇಶ್ ಜಗಲಾಸರ್. ಇನ್ನು ಎಸ್ಪಿ ಅವರು ಮಾಡಿರುವ ಆದೇಶವನ್ನ‌ ಗಮನದಲ್ಲಿಟ್ಟುಕೊಂಡ 10 ಕ್ಕೂ ಹೆಚ್ಚು ಪೊಲಿಸ್ ಪೇದೆಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎನ್ನಲಾಗುತ್ತಿದೆ. 

ಇನ್ನು ಮೂವರು ಪೋಲಿಸ್ ಪೇದೆಗಳು ಎಸ್ಪಿ ಅವರು ಆದೇಶವನ್ನು ಪ್ರಶ್ನಿಸಿ ಹಿರಿಯ ಅಧಿಕಾರಿಗಳಿಗೆ ಮೂವರು ಪೊಲಿಸ್ ಪೇದೆಗಳ ಮೇಲ್ಮನವಿ ಸಲ್ಲಿಸಲು ತಿರ್ಮಾನವನ್ನ‌ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ. ಇನ್ನು ಕಳೆದ ನಾಲ್ಕು‌ ವರ್ಷದಿಂದ‌ ಕೆಲಸಕ್ಕೆ‌ ಹಾಜರಾಗಿದ್ದ ಸ್ಥಳಗಳಲ್ಲಿ ಸರಿಯಾಗಿ ಕೆಲಸವನ್ನ ಮಾಡಿದ್ದರೆ ಇಂತಹ ಪರಿಸ್ಥಿತಿ ಈ ಮೂವರು ಪೇದೆಗಳಿಗೆ ಬರುತ್ತಿರಲಿಲ್ಲ ಎಂಬ ಪ್ರಶ್ನೆಗಳು ಸದ್ಯ ಧಾರವಾಡ ಪೋಲಿಸ್ ಇಲಾಖೆಯಲ್ಲಿ ಕೇಳಿ ಬರುತ್ತಿದೆ. 
 

click me!