ಸಿಂದಗಿ: ಅಕ್ರಮ ಗಾಂಜಾ ಸಾಗಾಟ, ಓರ್ವನ ಬಂಧನ

By Kannadaprabha NewsFirst Published May 25, 2020, 9:30 AM IST
Highlights

ಅಬಕಾರಿ ಪೊಲೀಸರು ದಾಳಿ ಗಾಂಜಾ ಸಮೇತ ಓರ್ವನ ಬಂಧನ| ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಬಳಿ ಪೊಲೀಸರು ದಾಳಿ| 55 ಸಾವಿರ ಮೌಲ್ಯದ ಗಾಂಜಾ ವಶ|

ಸಿಂದಗಿ(ಮೇ.25): ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ಅಬಕಾರಿ ಪೊಲೀಸರು ದಾಳಿ ಮಾಡಿ ಗಾಂಜಾ ಸಮೇತ ಓರ್ವನನ್ನು ಬಂಧಿಸಿದ ಘಟನೆ ತಾಲೂಕಿನ ಚಿಕ್ಕರೂಗಿ ಗ್ರಾಮದ ಹಿಟ್ನಳ್ಳಿ ರಸ್ತೆಯಯಲ್ಲಿರುವ ಕಾಲವೆಯ ಸೇತುವೆ ಬಳಿಯಲ್ಲಿ ನಡೆದಿದೆ.

ಗಂಗನಳ್ಳಿ ಗ್ರಾಮದ ಗುರುಸಂಗಪ್ಪ ನಾಯಕ(ತಳವಾರ) ಬಂಧಿತ ಆರೋಪಿ. ಅಬಕಾರಿ ಜಂಟಿ ಆಯುಕ್ತ ಡಾ.ವೈ ಮಂಜುನಾಥ ಹಾಗೂ ಅಬಕಾರಿ ಉಪ ಆಯುಕ್ತ ರವಿಶಂಕರ ಮಾರ್ಗದರ್ಶನದಲ್ಲಿ ನಿರೀಕ್ಷಕ ಎ.ಎ.ಮುಜಾವರ ಹಾಗೂ ಉಪನಿರೀಕ್ಷಕ ಮಹೇಶ ಪುಠಾಣಿ ಮತ್ತು ವಿಜಯಕುಮಾರ ಹಿರೇಮಠ ಇವರ ತಂಡ ರಚಿಸಿಕೊಂಡು ಅಕ್ರಮವಾಗಿ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ಗಂಗನಳ್ಳಿ ಗ್ರಾಮದ ಗುರುಸಂಗಪ್ಪ ನೀಲಪ್ಪ ನಾಯಕ್‌(ತಳವಾರ) ಆರೋಪಿಯನ್ನು 55 ಸಾವಿರ ಮೌಲ್ಯದ ಗಾಂಜಾ ಸಮೇತ ಬಂಧಿಸಿ ಆತನ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೊರೋನಾ ಭೀತಿ ಮಧ್ಯೆಯೂ ಕೆಲವರಿಗೆ ಗಾಂಜಾದ್ದೇ ಚಿಂತೆ: ನಾಲ್ವರ ಹೆಡೆಮುರಿ ಕಟ್ಟಿದ ಪೊಲೀಸರು

ಈ ಸಂದರ್ಭದಲ್ಲಿ ಎನ್‌.ಎಸ್‌.ಸಾತಲಗಾಂವ, ಆರ್‌.ಕೆ. ಆತಾಪಿ, ಆರ್‌.ಎಸ್‌.ಮಾನೆ, ರಾಜು ಮುಳಸಾವಳಗಿ ಸೇರಿದಂತೆ ಅನೇಕರು ಇದ್ದರು.
 

click me!