Covid Crisis: ಕೊರೋನಾಗೆ 4 ದಿನದ ನವಜಾತ ಶಿಶು ಬಲಿ

By Kannadaprabha NewsFirst Published Feb 6, 2022, 4:53 AM IST
Highlights

*   ಕೋವಿಡ್‌ ಪಾಸಿಟಿವಿಟಿ 10%ಗಿಂತ ಕೆಳಕ್ಕೆ: 12000 ಕೇಸ್‌, 50 ಸಾವು
*   ರಾಜ್ಯದಲ್ಲಿ ಸೋಂಕು ಭಾರಿ ಇಳಿಕೆ, ಬೆಂಗಳೂರಲ್ಲಿ 4532 ಕೇಸ್‌
*   ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಮಗು
 

ಬೆಂಗಳೂರು(ಫೆ.06): ರಾಜ್ಯದಲ್ಲಿ ಕೋವಿಡ್‌-19(Covid-19) ಪ್ರಕರಣಗಳ ಇಳಿಕೆ ಮುಂದುವರೆದಿದೆ. ಶನಿವಾರ ರಾಜ್ಯದ ಪಾಸಿಟಿವಿಟಿ ದರ(Positivity Rate) ಶೇ. 10ರ ಒಳಗೆ ದಾಖಲಾಗಿದೆ. 12,009 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದ್ದು 25,854 ಮಂದಿ ಚೇತರಿಸಿಕೊಂಡಿದ್ದಾರೆ. ಬೆಂಗಳೂರು(Bengaluru) ನಗರದಲ್ಲಿ 4 ದಿನದ ಶಿಶು ಸೇರಿದಂತೆ ರಾಜ್ಯದಲ್ಲಿ ಒಟ್ಟು 50 ಮಂದಿ ಮರಣವನ್ನಪ್ಪಿದ್ದಾರೆ.

ಕಳೆದ ಕೆಲ ದಿನಗಳಿಂದ ಪ್ರತಿ ದಿನ ಒಂದಿಲ್ಲ ಒಂದು ಜಿಲ್ಲೆಯಲ್ಲಿ ಪುಟಾಣಿ ಮಕ್ಕಳು ಕೋವಿಡ್‌ನಿಂದ ಮರಣವನ್ನಪ್ಪುವ ಪ್ರಕರಣಗಳು ಘಟಿಸುತ್ತಿದೆ. ಶನಿವಾರ ಬೆಂಗಳೂರು ನಗರದಲ್ಲಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ನಾಲ್ಕು ದಿನದ ನವಜಾತ ಗಂಡು ಶಿಶು(Infant) ಮರಣವನ್ನಪ್ಪಿದೆ(Death). ಐಸಿಯು ದಾಖಲಾತಿಗೆ ಮುಂಚಿತವಾಗಿ ಕೋವಿಡ್‌ ಪರೀಕ್ಷೆ(Covid Test) ನಡೆಸಿದಾಗ ಸೋಂಕು ಇದ್ದದ್ದು ಇದ್ದದ್ದು ದೃಢಪಟ್ಟಿದೆ. ಜನವರಿ 31 ರಂದು ಮಗು ಆಸ್ಪತ್ರೆಗೆ ದಾಖಲಾಗಿದ್ದು ಮರುದಿನವೇ ಅಸುನೀಗಿದೆ. ತೀವ್ರ ಉಸಿರಾಟದ ಸಮಸ್ಯೆಯನ್ನು ಮಗು ಎದುರಿಸುತ್ತಿತ್ತು ಎಂದು ಆರೋಗ್ಯ ಇಲಾಖೆಯ(Department of Health) ದೈನಂದಿನ ಕೋವಿಡ್‌ ವರದಿ ಉಲ್ಲೇಖಿಸಿದೆ.

Latest Videos

Covid Crisis: ರಾಜ್ಯದಲ್ಲಿ 15,000ಕ್ಕಿಂತ ಕೆಳಗಿಳಿದ ಕೋವಿಡ್‌ ಕೇಸ್‌..!

1.32 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು ದಿನದ ಪಾಸಿಟಿವಿಟಿ ದರ ಶೇ.9.04 ವರದಿಯಾಗಿದೆ. ಜ.10 ರಂದು ಶೇ.7.77 ಪಾಸಿಟಿವಿಟಿ ದರ ದಾಖಲಾದ ಬಳಿಕ ಮೊದಲ ಬಾರಿಗೆ ಶೇ.10ರೊಳಗೆ ಪಾಸಿಟಿವಿಟಿ ದರ ಇಳಿದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1.09 ಲಕ್ಷಕ್ಕೆ ಕುಸಿದಿದೆ. ಐದು ಸಾವಿರ ದಾಟಿದ್ದ ಆಸ್ಪತ್ರೆಯ ದಾಖಲಾತಿ ಪ್ರಮಾಣ 3,804ಕ್ಕೆ ಕುಸಿದಿದೆ.

ಬೆಂಗಳೂರು ನಗರದಲ್ಲಿ 4,532, ಬೆಳಗಾವಿ 1,028, ಮೈಸೂರು 763 ಪ್ರಕರಣ ಪತ್ತೆಯಾಗಿದೆ. ಉಳಿದಂತೆ ಯಾದಗಿರಿ (32), ಗದಗ (61), ಚಿಕ್ಕಮಗಳೂರು (66), ದಾವಣಗೆರೆ (82), ಬೀದರ್‌ (93), ರಾಮನಗರ (98) ಮತ್ತು ಚಿಕ್ಕಬಳ್ಳಾಪುರ (99) ಜಿಲ್ಲೆಯಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆ ಎರಡಂಕಿಗೆ ಇಳಿದಿದೆ.

ಬೆಂಗಳೂರು ನಗರದಲ್ಲಿ ನಾಲ್ಕು ದಿನದ ಮಗು ಸೇರಿದಂತೆ 15 ಮಂದಿ, ದಕ್ಷಿಣ ಕನ್ನಡ 5, ಮೈಸೂರು 4, ಕಲಬುರಗಿ 3, ಉತ್ತರ ಕನ್ನಡ, ಉಡುಪಿ, ತುಮಕೂರು, ಶಿವಮೊಗ್ಗ, ರಾಯಚೂರು, ಬೆಳಗಾವಿ ಮತ್ತು ಬಳ್ಳಾರಿಯಲ್ಲಿ ತಲಾ ಇಬ್ಬರು, ಬಾಗಲಕೋಟೆ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಹಾವೇರಿ, ಮಂಡ್ಯ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಶನಿವಾರ 2.50 ಲಕ್ಷ ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ.

ವಿಶ್ವದಲ್ಲೇ ಭಾರತ ನಂ.3: 5 ಲಕ್ಷ ಗಡಿ ದಾಟಿದ ಕೊರೋನಾ ಸಾವು!

ಭಾರತದಲ್ಲಿ(India) ಕೊರೋನಾ(Coronavirus) ಸಾಂಕ್ರಾಮಿಕಕ್ಕೆ ಬಲಿಯಾದವರ ಸಂಖ್ಯೆ ಶುಕ್ರವಾರಕ್ಕೆ 5 ಲಕ್ಷ ಗಡಿ ದಾಟಿದೆ. ಈ ಮೂಲಕ ಅಮೆರಿಕ, ಬ್ರೆಜಿಲ್‌ ಬಳಿಕ ಕೋವಿಡ್‌ ಸೋಂಕಿಗೆ ಅತಿ ಹೆಚ್ಚು ಜನರು ಮೃತಪಟ್ಟಮೂರನೇ ದೇಶವಾಗಿ ಭಾರತ ಮಾರ್ಪಟ್ಟಿದೆ. ಅಮೆರಿಕದಲ್ಲಿ ಈವರೆಗೆ 9.2 ಲಕ್ಷ ಮತ್ತು ಬ್ರೆಜಿಲ್‌ನಲ್ಲಿ 6.3 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಶುಕ್ರವಾರ 1072 ಸಾವು ವರದಿ ಆಗುವ ಮೂಲಕ ಒಟ್ಟು ಸಾವಿನ ಸಂಖ್ಯೆ 5,00,055ಕ್ಕೆ ಏರಿಕೆ ಆಗಿದೆ.

Covid Vaccination: ಮಕ್ಕಳ ಲಸಿಕೆಯಲ್ಲಿ ಗದಗ 100% ಸಾಧನೆ: ಡಾ.ಸುಧಾಕರ್‌ ಮೆಚ್ಚುಗೆ

ಭಾರತದಲ್ಲಿ ಮೊದಲ ಕೊರೋನಾ ಸಾವು 2020ರ ಮಾರ್ಚ್‌ 10ರಂದು ಕರ್ನಾಟಕದ(Karnataka) ಕಲಬುರಗಿಯಲ್ಲಿ(Kalaburagi) ಸಂಭವಿಸಿತ್ತು. ಕಳೆದ ಜು.1ರಂದು ಸಾವಿಗೀಡಾದವರ ಸಂಖ್ಯೆ 4 ಲಕ್ಷ ಗಡಿ ದಾಟಿತ್ತು. ಅನಂತರ 217 ದಿನಗಳ ಬಳಿಕ 4ರಿಂದ 5 ಲಕ್ಷ ಗಡಿ ದಾಟಿದೆ.

ಕಳೆದ ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಕೊರೊನಾ 2ನೇ ಅಲೆಗೆ ಭಾರತ ತತ್ತರಿಸಿತ್ತು. ಸಾವಿನ ಪ್ರಮಾಣ ಕಳೆದ ಮೇ 23ರಂದು 3 ಲಕ್ಷ ಗಡಿದಾಟಿತ್ತು. ಮತ್ತು ಏ.27ರಂದು 2 ಲಕ್ಷ ಗಡಿ ದಾಟಿತ್ತು. ಇದಕ್ಕೆ ಹೋಲಿಸಿದರೆ 4ರಿಂದ 5 ಲಕ್ಷಕ್ಕೆ ತಲುಪಲು ಅತ್ಯಂತ ಸುದೀರ್ಘ ಕಾಲ ಹಿಡಿದಿದೆ.
 

click me!