ಲಾಕ್‌ಡೌನ್‌ ಉಲ್ಲಂಘಿಸಿದ 4 ಬಾರ್‌ & ರೆಸ್ಟೋರೆಂಟ್ ಲೈಸೆನ್ಸ್ ರದ್ದು

By Kannadaprabha News  |  First Published Apr 15, 2020, 11:21 AM IST

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯದ ದಾಸ್ತಾನು ಮಾರಾಟ ನಿಷೇಧವಿದ್ದರೂ ಜಿಲ್ಲೆಯ 4 ಬಾರ್‌ ಆ್ಯಂಡ್‌ ರಸ್ಟೋರೆಂಟ್‌ ಹಾಗೂ ವೈನ್‌ ಸ್ಟೋರ್‌ಗಳು ಕಾನೂನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ ಜಿಲ್ಲಾಧಿಕಾರಿ ರಾಕೇಶ್‌ ಕುಮಾರ್‌ ಅವರ ಲೈಸೆನ್ಸ್‌ ಅಮಾನತು ಮಾಡಿದ್ದಾರೆ.


ತುಮಕೂರು(ಏ.15): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯದ ದಾಸ್ತಾನು ಮಾರಾಟ ನಿಷೇಧವಿದ್ದರೂ ಜಿಲ್ಲೆಯ 4 ಬಾರ್‌ ಆ್ಯಂಡ್‌ ರಸ್ಟೋರೆಂಟ್‌ ಹಾಗೂ ವೈನ್‌ ಸ್ಟೋರ್‌ಗಳು ಕಾನೂನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ ಜಿಲ್ಲಾಧಿಕಾರಿ ರಾಕೇಶ್‌ ಕುಮಾರ್‌ ಅವರ ಲೈಸೆನ್ಸ್‌ ಅಮಾನತು ಮಾಡಿದ್ದಾರೆ.

ತುಮಕೂರು ತಾಲೂಕು ಮಲ್ಲಸಂದ್ರದಲ್ಲಿರುವ ಗಣೇಶ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಚಿಕ್ಕನಾಯಕನಹಳ್ಳಿ ತಾಲೂಕು ತಿಮ್ಮನಹಳ್ಳಿಯಲ್ಲಿರುವ ಹನುಮನ್‌ ವೈನ್ಸ್‌, ಕುಣಿಗಲ್‌ ತಾಲೂಕು ಉಜನಿ ಗ್ರಾಮದಲ್ಲಿರುವ ವೆಂಕಟೇಶ್ವರ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಸನ್ನದ್ದುಗಳ ಮಾಲೀಕರು ಸನ್ನದ್ದು ಷರತ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಉಡುಪಿ: ಮೀನುಗಾರರ ಬಲೆಗೆ ಬಿತ್ತು ದೆವ್ವ ಮೀನು

Latest Videos

undefined

ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಟ ಕಳ್ಳಬಟ್ಟಿ, ನಕಲಿ ಮದ್ಯ, ಸೇಂದಿ ಮುಂತಾದ ಅಬಕಾರಿ ಅಕ್ರಮಗಳ ನಡೆಯದಂತೆ ಕಟ್ಟೇಚ್ಚರವಹಿಸಿದ್ದು, ವಲಯಮಟ್ಟದಲ್ಲಿ ಹಗಲು ಮತ್ತು ರಾತ್ರಿ ಪಾಳಿ ಗಸ್ತು ತಂಡಗಳನ್ನು ರಚಿಸಿ, ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯ ಸತತ ಕಾರ್ಯಚಾರಣೆ ಮೂಲಕ 577 ದಾಳಿಗಳನ್ನು ನಡೆಸಿ, 44 ಅಬಕಾರಿ ಮೊಕದ್ದಮೆಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. 29 ಆರೋಪಿಗಳನ್ನು ಬಂಧಿಸಿ, 2344 ಲೀಟರ್‌ ಮದ್ಯ, 391 ಲೀ. ಬಿಯರ್‌, 1 ಕಾರು, 3 ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ 3 ಮೆಥನಾಲ್‌ ಘಟಕಗಳಿದ್ದು, ಈ ಘಟಕಗಳ ಮೇಲೆ ತೀವ್ರ ನಿಗಾವಣೆ ವಹಿಸಲಾಗಿದೆ. ಮದ್ಯ ವ್ಯಸನಿಗಳು ಮೆಥನಾಲ್‌ ಸೇವಿಸಿ ಅಪಾರ ಸಾವು-ನೋವು ಸಂಭವಿಸುವ ಹಿನ್ನೆಲೆಯಲ್ಲಿ ಈ ಘಟಕಗಳಿಗೆ ಗಸ್ತಿನಲ್ಲಿರುವ ತಂಡ ಭೇಟಿ ನೀಡಿ, ಪರಿಶೀಲಿಸಿ, ದುರ್ಬಳಕೆ ಮಾಡದಂತೆ ಕಟ್ಟೆಚ್ಚರವಹಿಸಲಾಗಿದೆ.

ಮರುವಾಯಿ ಮೀನು ಹಿಡಿದ ಯುವಕರ 11 ಬೈಕ್ ಜಪ್ತಿ

ಜಿಲ್ಲೆಯ ಹೆದ್ದಾರಿಗಳ ಮೂಲಕ ಹಾದು ಹೋಗುವ ಮೆಥನಾಲ್‌ ತುಂಬಿದ ಟ್ಯಾಂಕರ್‌ಗಳನ್ನು ಜಿಲ್ಲೆಯ ಹಿರಿಯೂರು ಮತ್ತು ಶಿರಾ ಸರಹದ್ದಿನಿಂದ ತುಮಕೂರು ನೆಲಮಂಗಲ ಸರಹದ್ದಿನವರೆಗೆ ಗಸ್ತಿನಲ್ಲಿರುವ ಅಬಕಾರಿ ತಂಡಗಳು ಎಸ್ಕಾರ್ಟ್‌ ಮೂಲಕ ಜಿಲ್ಲೆಯ ಸರಹದ್ದು ದಾಟಿಸುವ ಕೆಲಸ ಮಾಡುತ್ತಿವೆ.

ಕೋವಿಡ್‌-19 ಹರಡದಂತೆ ತಡೆಗಟ್ಟುವ ಸಲುವಾಗಿ ಅಬಕಾರಿ ಇಲಾಖೆ ವತಿಯಿಂದ ಹ್ಯಾಂಡ್‌ ಸ್ಯಾನಿಟೈಸರ್‌ಗಳನ್ನು ಜಿಲ್ಲೆಯ ಡಿಸ್ಟಿಲರಿಗಳಲ್ಲಿ ಉತ್ಪಾದಿಸಿ, 800 ಲೀಟರ್‌ ತುಮಕೂರು ಜಿಲ್ಲಾಡಳಿತಕ್ಕೆ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ತಲಾ 500 ಲೀಟರ್‌ ಹಾಗೂ ಶಿವಮೊಗ್ಗ ಜಿಲ್ಲಾಡಳಿತಕ್ಕೆ 300 ಲೀಟರ್‌ ಸ್ಯಾನಿಟೈಸರ್‌ಗಳನ್ನು ಪೂರೈಸಲಾಗಿದೆ.

ಮಧ್ಯರಾತ್ರಿ ಒಬ್ಬರೇ ಡ್ರೈವ್ ಮಾಡಿ ಗಸ್ತು ತಿರುಗುವ ಮಹಿಳಾ ಎಸ್‌ಪಿ..!

ಜಿಲ್ಲಾ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದ್ದು, ದೂರವಾಣಿ ಸಂಖ್ಯೆ: 0816-2272922 ಸ್ಥಾಪಿಸಿದ್ದು, ದೂರು ಬಂದ ತಕ್ಷಣ ಅಬಕಾರಿ ತಂಡ ಕಾರ್ಯ ಪ್ರವೃತ್ತರಾಗಿ ದಾಳಿ ನಡೆಸಿ ಅಕ್ರಮಗಳನ್ನು ತಡೆಗಟ್ಟಲಾಗುತ್ತಿದೆ. ಸಾರ್ವಜನಿಕರು ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದಂತೆ ನಿಯಂತ್ರಣ ಕೊಠಡಿಯ ದೂರವಾಣಿಗೆ ಸಂಪರ್ಕಿಸಿ ತಕ್ಷಣ ತಿಳಿಸುವಂತೆ ಜಿಲ್ಲಾ ಅಬಕಾರಿ ಉಪ ಆಯುಕ್ತ ನಾಗರಾಜಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!