ಮೀನುಗಾರಿಕಾ ಬೋಟ್‌ಗೂ ಬಂತು ಉಪ್ಪು ನೀರು ಶುದ್ಧಿ ಯಂತ್ರ!

By Kannadaprabha News  |  First Published Sep 4, 2021, 7:16 AM IST
  • ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ತಮ್ಮ ಬೋಟ್‌ಗಳಲ್ಲಿನ್ನು ದಡದಿಂದ ಪ್ರತ್ಯೇಕವಾಗಿ ಶುದ್ಧ ನೀರು ತೆಗೆದುಕೊಂಡು ಹೋಗಬೇಕಾಗಿಲ್ಲ.
  • ಉಪ್ಪು ನೀರು ಶುದ್ಧೀಕರಣ ಯಂತ್ರ ಅಳವಡಿಸಿ ಬೋಟ್‌ನಲ್ಲೇ ಸಿಹಿ ನೀರು ಪಡೆಯಲು ಸಾಧ್ಯವಿದೆ

ಮಂಗಳೂರು (ಸೆ.04): ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ತಮ್ಮ ಬೋಟ್‌ಗಳಲ್ಲಿನ್ನು ದಡದಿಂದ ಪ್ರತ್ಯೇಕವಾಗಿ ಶುದ್ಧ ನೀರು ತೆಗೆದುಕೊಂಡು ಹೋಗಬೇಕಾಗಿಲ್ಲ. ಉಪ್ಪು ನೀರು ಶುದ್ಧೀಕರಣ ಯಂತ್ರ ಅಳವಡಿಸಿ ಬೋಟ್‌ನಲ್ಲೇ ಸಿಹಿ ನೀರು ಪಡೆಯಲು ಸಾಧ್ಯವಿದೆ.

ಸದ್ಯ ಗುಜರಾತ್‌ನಲ್ಲಿ ಅನುಷ್ಠಾನಗೊಂಡಿರುವ ಈ ಯಂತ್ರದ ಪ್ರಾತ್ಯಕ್ಷಿಕೆಯನ್ನು ಮಂಗಳೂರಿನ ಹಳೆ ಬಂದರು ಧಕ್ಕೆಯ ಅಳಿವೆಬಾಗಿನಲ್ಲಿ ಶುಕ್ರವಾರ ನೀಡಲಾಯಿತು. 

Latest Videos

undefined

ಪ್ರಸಕ್ತ ಮೀನುಗಾರರು ಆಳಸಮುದ್ರ ಮೀನುಗಾರಿಕೆಗೆ ತೆರಳಬೇಕಾದರೆ ದಡದಿಂದ ಸಿಹಿ ನೀರು ಖರೀದಿಸಿ ಕೊಂಡೊಯ್ಯುತ್ತಾರೆ. ಒಂದು ಬಾರಿ ನೀರು ಖರೀದಿಗೆ 3 ಸಾವಿರ ರು. ಬೇಕು. ಕನಿಷ್ಠ 10 ಬಾರಿ ಮೀನುಗಾರಿಕೆಗೆ ತೆರಳುವಾಗ 30 ಸಾವಿರ ರು. ಖರ್ಚು ಮಾಡುತ್ತಾರೆ. ವರ್ಷದಲ್ಲಿ ಕನಿಷ್ಠ 8 ತಿಂಗಳು ಮೀನುಗಾರಿಕೆಗೆ ತೆರಳುತ್ತಾರೆ.

ಮೀನುಗಾರರ ಬಲೆಗೆ ಚಿನ್ನದ ಮೀನು: 157 ಮೀನು ಮಾರಿ 1.33 ಕೋಟಿ ಗಳಿಸಿದ!

ಅಂದರೆ ಸುಮಾರು 2.40 ಲಕ್ಷ ನೀರಿಗಾಗಿ ವ್ಯಯಿಸಬೇಕಾಗುತ್ತದೆ. ಆದರೆ ಉಪ್ಪು ನೀರು ಶುದ್ಧೀಕರಣ ಯಂತ್ರದ ದರ 4.50 ಲಕ್ಷ. ಕೇಂದ್ರ ಸರ್ಕಾರ ಗುಜರಾತ್‌ನಲ್ಲಿ ಶೇ.50 ಸಬ್ಸಿಡಿ ನೀಡಿದೆ. ಅಂದರೆ 2.25 ಲಕ್ಷ ರು.ಗೆ ಈ ಯಂತ್ರ ಲಭಿಸಿದಂತಾಗುತ್ತದೆ.

ರಾಜ್ಯ ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಸಚಿವ ಅಂಗಾರ ಅವರ ಉಪಸ್ಥಿತಿಯಲ್ಲಿ ನಡೆದ ಈ ಪ್ರಾತ್ಯಕ್ಷಿಕೆಯಲ್ಲಿ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಇದ್ದರು.

ಸಬ್ಸಿಡಿಗೆ ಯತ್ನ- ಸಚಿವ: ಪ್ರಾತ್ಯಕ್ಷಿಕೆ ಬಳಿಕ ಮಾತನಾಡಿದ ಸಚಿವ ಅಂಗಾರ, ಆಸ್ಪ್ರೇಲಿಯಾ ತಂತ್ರಜ್ಞಾನ ಆಧಾರಿತ ಸಮುದ್ರದ ಉಪ್ಪು ನೀರನ್ನು ಸಿಹಿ ಮಾಡುವ ಯಂತ್ರದ ಬಗ್ಗೆ ಪ್ರಾತ್ಯಕ್ಷಿಕೆ ವೀಕ್ಷಿಸಲಾಗಿದೆ. ಈ ಯಂತ್ರ ಅಳವಡಿಸಲು ಸರ್ಕಾರದಿಂದ ಯಾವ ರೀತಿಯಲ್ಲಿ ಸಹಾಯಧನ ನೀಡಬಹುದು ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದರು.

click me!