
ಶಿವಮೊಗ್ಗ(ಆ.24): ನಾಯಿ ಕಚ್ಚಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹೊಸನಗರದಲ್ಲಿ ಇಂದು(ಶನಿವಾರ) ನಡೆದಿದೆ. ಸಂಗೀತ (38) ಮೃತ ದುರ್ದೈವಿ
ಹೊಸನಗರ ಪಟ್ಟಣದಲ್ಲಿ ವಾಸವಾಗಿದ್ದ ಗೇರುಪುರ ಮೂಲದ ದಿ. ಪ್ರಸನ್ನ ಎಂಬವರ ಪತ್ನಿ ಸಂಗೀತ ನಾಯಿ ಕಚ್ಚಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕೊಪ್ಪಳ: ಹಂದಿ ಕಳ್ಳರ ಗ್ಯಾಂಗ್ ಹಿಡಿಯಲು ಹೋದ ಪುರಸಭೆ ಸದಸ್ಯ ಸಾವು
ಜುಲೈ 14ರಂದು ನಾಯಿ ಕಚ್ಚಿದ್ದು ಹೊಸನಗರ ಹಾಗೂ ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.