ಟಿಬಿ ಡ್ಯಾಂ ಭರ್ತಿಯಾಗಲು ಕೇವಲ 6 ಅಡಿ ನೀರು ಬಾಕಿ..!

By Kannadaprabha News  |  First Published Aug 24, 2024, 10:31 AM IST

ಜಲಾಶಯದ ಗರಿಷ್ಠ ಮಟ್ಟ 1633 ಅಡಿ ಆಗಿದ್ದು, ಆ.23 ಸಂಜೆ ವೇಳೆಗೆ 1627 ಅಡಿ ನೀರು ಸಂಗ್ರಹವಾಗಿದೆ. ಕೆಲ ದಿನಗಳ ಹಿಂದೆ 19ನೇ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿ 36 ಟಿಎಂಸಿ ನೀರು ಪೋಲಾಗಿತ್ತು. ಆದರೆ ಸ್ಟಾಪ್ ಲಾಗ್ ಗೇಟ್ ಅಳವಡಿಸಿದ ಪರಿಣಾಮ ನೀರಿನ ಸೋರಿಕೆಯನ್ನು ಯಶಸ್ವಿಯಾಗಿ ತಡೆಯಲಾಗಿದೆ.

ಕೊಪ್ಪಳ(ಆ.24):  ಕ್ರಸ್ಟ್ ಗೇಟ್ ಕಳಚಿ ಬಿದ್ದು ಅಪಾರ ಪ್ರಮಾಣದಲ್ಲಿ ನೀರು ಪೋಲಾಗಿದ್ದರೂ ತುಂಗಭದ್ರಾ ಜಲಾಶಯದಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈಗಲೂ ಹೆಚ್ಚಿನ ಪ್ರಮಾಣದಲ್ಲಿ ನೀರಿದೆ. ಜಲಾಶಯ ಭರ್ತಿಯಾಗಲು ಇನ್ನು ಆರು ಅಡಿ ಮಾತ್ರ ಬಾಕಿ ಇದ್ದು, ಇದೇ ರೀತಿ ಮಳೆ ಮುಂದುವರಿದರೆ ತಿಂಗಳಾಂತ್ಯದೊಳಗೆ ಅಣೆಕಟ್ಟು ತುಂಬುವ ವಿಶ್ವಾಸ ಇದೆ. 

ಜಲಾಶಯದ ಗರಿಷ್ಠ ಮಟ್ಟ 1633 ಅಡಿ ಆಗಿದ್ದು, ಆ.23 ಸಂಜೆ ವೇಳೆಗೆ 1627 ಅಡಿ ನೀರು ಸಂಗ್ರಹವಾಗಿದೆ. ಕೆಲ ದಿನಗಳ ಹಿಂದೆ 19ನೇ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿ 36 ಟಿಎಂಸಿ ನೀರು ಪೋಲಾಗಿತ್ತು. ಆದರೆ ಸ್ಟಾಪ್ ಲಾಗ್ ಗೇಟ್ ಅಳವಡಿಸಿದ ಪರಿಣಾಮ ನೀರಿನ ಸೋರಿಕೆಯನ್ನು ಯಶಸ್ವಿಯಾಗಿ ತಡೆಯಲಾಗಿದೆ.

Tap to resize

Latest Videos

ಟಿಬಿ ಡ್ಯಾಂ ಆಯಸ್ಸು ಕ್ಷೀಣ: ಎಚ್ಚರ ವಹಿಸಲು ಸರ್ಕಾರಕ್ಕೆ ತಜ್ಞರ ಸಲಹೆ..!

ಜಲಾಶಯದಲ್ಲಿ ಕಳೆದ ವರ್ಷ ಇದೇ ದಿನ 82 ಟಿಎಂಸಿ ನೀರಿದ್ದರೆ ಈ ವರ್ಷ 83.2 ಟಿಎಂಸಿ ನೀರು ಸಂಗ್ರಹವಾಗಿದೆ. ನಿತ್ಯವೂ 2-3 ಟಿಎಂಸಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರ ಮತ್ತೆ ಜಲಾಶಯ ಭರ್ತಿಯಾಗಬಹುದು ಎನ್ನುತ್ತಾರೆ ಜಲಾಶಯದ ಎಂಜಿನಿಯರ್‌ಗಳು. 

click me!